ಕರ್ನಾಟಕ ಮುಸ್ಲಿಂ ಜಮಾಅತ್ ಮಂಗಳೂರು ಸರ್ಕಲ್ ಅಧ್ಯಕ್ಷರಾಗಿ ಖಾದಿಮುಲ್ ಮರ್ಕಝ್ ಹಸನ್ ಮುಸ್ಲಿಯಾರ್ ಆಯ್ಕೆ

ಖಾದಿಮುಲ್ ಮರ್ಕಝ್ ಹಸನ್ ಮುಸ್ಲಿಯಾರ್ | ಬಿ. ಎ. ಹಮೀದ್ ಬೆಂಗರೆ
ಮಂಗಳೂರು : ಕರ್ನಾಟಕ ಮುಸ್ಲಿಂ ಜಮಾಅತ್ ಮಂಗಳೂರು ಸರ್ಕಲ್ ಮಹಾ ಸಭೆ ಅಬ್ದುಲ್ ಕರೀಂ ಪಕ್ಕಲಡ್ಕ ರವರ ಅಧ್ಯಕ್ಷತೆಯಲ್ಲಿ ಫೆ.21 ರಂದು ಸುನ್ನಿ ಜಂಇಯ್ಯತುಲ್ ಉಲಮಾ ಕೇಂದ್ರ ಕಛೇರಿಯ ಲ್ಲಿ ನಡೆಯಿತು.
ಅಬುಲ್ ವಫಾ ಖಾಸಿಂ ಮುಸ್ಲಿಯಾರ್ ದುವಾ ನೆರವೇರಿಸಿದರು. ಪ್ರಧಾನ ಕಾರ್ಯದರ್ಶಿ ಬಿ.ಎ.ಹಮೀದ್ ಬೆಂಗರೆ ವರದಿ ಹಾಗೂ ಲೆಕ್ಕ ಪತ್ರ ಮಂಡನೆ ಮಾಡಿದರು. ರಾಜ್ಯ ಕಾರ್ಯದರ್ಶಿ ಅಶ್ರಫ್ ಕಿನಾರ ಮಂಗಳೂರು ಸಂಘಟನೆಯ ಬಗ್ಗೆ ವಿವರ ನೀಡಿದರು. ಅಧ್ಯಕ್ಷ ಭಾಷಣದೊಂದಿಗೆ ಹಳೆಯ ಸಮಿತಿ ಬರ್ಕಾಸ್ತುಗೊಳಿಸಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಖಾದಿಮುಲ್ ಮರ್ಕಝ್ ಹಸನ್ ಮುಸ್ಲಿಯಾರ್, ಪ್ರಧಾನ ಕಾರ್ಯದರ್ಶಿಯಾಗಿ ಬಿ. ಎ. ಹಮೀದ್ ಬೆಂಗರೆ, ಕೋಶಾಧಿಕಾರಿಯಾಗಿ ಹನೀಫ್ ಬಿಕರ್ನಕಟ್ಟೆ ಇವರನ್ನು ಆರಿಸಲಾಯಿತು.
ಉಪಾಧ್ಯಕ್ಷರಾಗಿ ಎಂ.ಪಿ.ಅಬೂಬಕ್ಕರ್ ಬೋಳಾರ್, ಕಾರ್ಯದರ್ಶಿಗಳಾಗಿ ಖಾಸಿಂ ಮುಸ್ಲಿಯಾರ್ ದಅ್ ವಾ, ಇಬ್ರಾಹಿಂ ಬೆಂಗ್ರೆ ಮೀಡಿಯಾ, ರಫೀಕ್ ಪಾಂಡೇಶ್ವರ್ ಇಸಾಬಾ/ಸಹಾಯ್, ಅಬ್ಬಾಸ್ ಹಾಜಿ ಬಿಜೈ ಸಂಘಟನೆ ಹಾಗೂ ಹನ್ನೆರಡು ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಮಂಗಳೂರು ಝೋನಲ್ ಸಮಿತಿಗೆ ಝೋನ್ ಕೌನ್ಸಿಲರುಗಳಾಗಿ ಹಸನ್ ಮುಸ್ಲಿಯಾರ್, ಬಿ.ಎ. ಅಬ್ದುಲ್ ಹಮೀದ್ ಬೆಂಗರೆ, ಹನೀಫ್ ಬಿಕರ್ನಕಟ್ಟೆ, ಅಬ್ದುಲ್ ಕರೀಂ ಹಾಜಿ ಪಕ್ಕಲಡ್ಕ, ಅಶ್ರಫ್ ಕಿನಾರ ಮಂಗಳೂರು, ಬಿ ಎ ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್, ನಝೀರ್ ಬಜಾಲ್, ಇಬ್ರಾಹಿಂ ಮಂಗಳೂರು, ಎಂ.ಪಿ.ಅಬೂಬಕ್ಕರ್, ಹಾಜಿ ಶೇಖ್ ಬಾವ ಇವರನ್ನು ಆಯ್ಕೆ ಮಾಡಲಾಯಿತು.