ಕೆಪಿಎಫ್‌ಬಿಎ ಅಧ್ಯಕ್ಷ ಡಾ.ಸುಶಾಂತ್ ರೈಗೆ ಸನ್ಮಾನ
Update: 2023-11-03 17:46 IST

ಮಂಗಳೂರು : ಕರ್ನಾಟಕ ಪೌಲ್ಟ್ರಿ ಫಾರ್ಮರಸ್ ಆ್ಯಂಡ್ ಬ್ರೀಡರ್ಸ್ ಅಸೋಸಿಯೇಶನ್(ಕೆಪಿಎಫ್‌ಬಿಎ)ವತಿಯಿಂದ ಬೆಂಗಳೂರಿನ ದೀ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ನಡೆದ ತ್ರೀ ಡಿಕೇಟ್ಸ್ ಆಫ್ ಎಕ್ಸಾಲೆನ್ಸ್ ಪ್ರೋಗ್ರಾಂನಲ್ಲಿ ಎರಡು ಅವಧಿಗೆ ಕೆಪಿಎಫ್‌ಬಿಎ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಡಾ. ಸುಶಾಂತ್ ರೈ ಬಿ. ಸನ್ಮಾನಿಸಲಾಯಿತು.
ಈ ಸಂದರ್ಭ ಕೆಪಿಎಫ್‌ಬಿಎ ಪ್ರಧಾನ ಕಾರ್ಯದರ್ಶಿ ಡಾ.ಆಂಜನ್ ಗೋಸ್ವಾಮಿ, ವಿಜ್ಞಾನಿ ಡಾ.ಮುನಿಯಪ್ಪ, ಸೆಂಟರ್ ಫಾರ್ ಎಕ್ಸಲೆನ್ಸ್ ಫಾರ್ ಅನಿಮಲ್ ಆಸ್ಪೆಂಡರಿ ಇದರ ಜಂಟಿ ನಿರ್ದೇಶಕ ಡಾ. ಮಹೇಶ್, ಬೀದರ್‌ನ ಕೆವಿಎಎಫ್‌ಎಸ್‌ಯು ಮಾಜಿ ಕುಲಪತಿ ಡಾ.ಶ್ರೀನಿವಾಸ್ ಗೌಡ, ಕೆಪಿಎಫ್‌ಬಿಎಯ ನೂತನ ನಿಯೋಜಿತ ಅಧ್ಯಕ್ಷ ನವೀನ್ ಪಶುಪತಿ, ಕೆಪಿಎಫ್‌ಬಿಎ ಕಾರ್ಯದರ್ಶಿ ಇನಾಯತ್ ಉಲ್ಲಾ ಖಾನ್ ಉಪಸ್ಥಿತರಿದ್ದರು.