ಮಂಗಳೂರು: ಸೆ. 15ರಂದು ಡಾ. ಅಂಬೇಡ್ಕರ್ ವೃತ್ತ ಶಿಲಾನ್ಯಾಸ

Update: 2024-09-13 13:08 GMT

ಮಂಗಳೂರು, ಸೆ.13: ಡಾ. ಬಿ.ಆರ್. ಅಂಬೇಡ್ಕರ್ ವೃತ್ತ ನಿರ್ಮಾಣಕ್ಕೆ ಸೆ. 15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಂದು ಶಿಲಾನ್ಯಾಸ ನೆರವೇರಲಿದ್ದು, ಮಂಗಳೂರಿನ ಸಮಸ್ತ ನಾಗರಿಕರು ಭಾಗವಹಿಸಬೇಕು ಎಂದು ದ.ಕ. ಜಿಲಾಲ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಕರೆ ನೀಡಿದೆ.

ಗುರುವಾರ ಸುದ್ದಿಗೋಷ್ಟಿಯಲ್ಲಿ ದಲಿತ ಮುಖಂಡರಾದ ಎಂ. ದೇವದಾಸ್ ಮಾತನಾಡಿ, ವಿವಿಧ ದಲಿತ ಸಂಘಟನೆಗಳ ನಿರಂತರ ಹೋರಾಟದ ಫಲವಾಗಿ ವೃತ್ತ ನಿರ್ಮಾಣಕ್ಕೆ ಸಂಬಂಧಿಸಿ ಶಿಲಾನ್ಯಾಸದ ಪಾಲಿಕೆಯ ನಿರ್ಧಾರವನ್ನು ಸಮಿತಿಯು ಮುಕ್ತ ಮನಸ್ಸಿನಿಂದ ಸ್ವಾಗತಿಸಿ ಬೆಂಬಲಿಸಿದೆ ಎಂದರು.

1994ರಲ್ಲಿ ಅಂದಿನ ಜಿಲ್ಲಾಧಿಕಾರಿ ಭರತ್ ಲಾಲ್ ಮೀನಾರವರ ಮೂಲಕ ಕೆಎಂಸಿ ಆಸ್ಪತ್ರೆಯ ಬಳಿ ಜ್ಯೋತಿ ಜಂಕ್ಷನ್‌ಗೆ ಅಂಬೇಡ್ಕರ್ ವೃತ್ತವಾಗಿ ನಾಮಕರಣ ಮಾಡಿದ್ದರು. ದಲಿತ ಸಂಘನಟೆಗಳು ಈ ಸಂದರ್ಭದಲ್ಲಿ ನಡೆಸಿದ ಹಕ್ಕೊತ್ತಾಯದ ಪ್ರತಿಧ್ವನಿಗೆ ಸೂಕ್ತ ಮನ್ನಣೆ ದೊರಕಿ ನಗರ ಪಾಲಿಕೆಗೆ ವೃತತ ನಿರ್ಮಾಣದ ಕಾರ್ಯ ನಡೆಸಲು ನಿರ್ದೇಶನ ನೀಡಲಾಗಿತ್ತು. ಆದರೆ ತಾಂತ್ರಿಕ ಕಾರಣ ನೀಡಿ ವೃತ್ತ ನಿರ್ಮಾಣ ವಿಳಂಬ ಆದಾಗ ದಲಿತ ಸಂಘಟನೆಗಳು ಹಲವಾರು ಸಭೆಗಲ್ಲಿ ಹೋರಾಟ ನಡೆಸಿದ ಪರಿಣಾಮ ನ್ಯಾಯ ದೊರಕಿದೆ ಎಂದವರು ಹೇಳಿದರು.

ಇದೀಗ ಜಂಕ್ಷನ್‌ನಲ್ಲಿ ಅಂಬೇಡ್ಕರ್ ಪ್ರತಿಮೆಯೊಂದಿಗೆ ವೃತ್ತ ನಿರ್ಮಾಣಕ್ಕೆ ಪಾಲಿಕೆ ಮುಂದಾಗಿದ್ದು, ಅಲ್ಲಿ ಕಂಚಿನ ಪ್ರತಿಮೆ ಯನ್ನು ಪೂರ್ವ ದಿಕ್ಕಿಗೆ ಅಭಿಮುಖವಾಗಿ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಒತ್ತಾಯಿಸಲಾಗಿದೆ. ಪ್ರತಿಮೆಯ ಸ್ವರೂಪ ಹೇಗಿರಬೇಕು ಎಂಬ ಬಗ್ಗೆಯೂ ಭಾವಚಿತ್ರವನ್ನು ನೀಡಲಾಗಿದೆ. ಕಿಡಿಗೇಡಿಗಳಿಂದ ಪ್ರತಿಮೆಗೆ ಹಾನಿಯಾಗದಂತೆ, ಸಾರ್ವಜನಿಕರಿಗೆ, ವಾಹನ ಸಂಚಾರಕ್ಕೆ ತೊಂದರೆ ಆಗದಂತೆ ಸೂಕ್ತ ಸುರಕ್ಷಾ ಕ್ರಮಗಳೊಂದಿಗೆ ಪ್ರತಿಮೆ ನಿರ್ಮಾಣಕ್ಕೆ ಒತ್ತಾಯ ಮಾಡಲಾಗಿದೆ ಎಂದು ಮುಖಂಡರಾದ ಅಶೋಕ್ ಕೊಂಚಾಡಿ ಹೇಳಿದರು.

ಗೋಷ್ಟಿಯಲ್ಲಿ ಮುಖಂಡರಾದ ರಮೇಶ್ ಕೋಟ್ಯಾನ್, ಚಂದ್ರ ಕುಮಾರ್, ರಮೇಶ್ ಕಾವೂರು, ಶೇಖರ್ ಚಿಲಿಂಬಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News