ಮಂಗಳೂರು: ಸೆ.10, 11ರಂದು ವಿವಿಧೆಡೆ ವಿದ್ಯುತ್ ನಿಲುಗಡೆ

Update: 2024-09-09 14:19 GMT

ಮಂಗಳೂರು, ಸೆ. 9. ಮಣ್ಣಗುಡ್ಡ 33/11 ಕೆ.ವಿ. ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಮಠದಕಣಿ ಮತ್ತು 11 ಕೆ.ವಿ. ಉರ್ವಮಾರ್ಕೆಟ್ ಹಾಗೂ ತ್ರಿಭುವನ್ ಫೀಡರ್ ಮಾರ್ಗಗಳ ವ್ಯಾಪ್ತಿಯಯಲ್ಲಿ ಮಂಗಳವಾರ (ಸೆ.10) ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.

11 ಕೆ.ವಿ. ಮಠದಕಣಿ ಮತ್ತು 11 ಕೆ.ವಿ ಉರ್ವ ಮಾರ್ಕೆಟ್ ಹಾಗೂ ತ್ರಿಭುವನ್ ಫೀಡರ್ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವುದರಿಂದ ಮಂಗಳವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಗಾಂಧಿನಗರ, ಅಭಿಮಾನ್ ಪ್ಯಾಲೇಸ್, ಲೇಡಿಹಿಲ್, ಗಾಂಧಿಪಾರ್ಕ್, ಉರ್ವ ಗ್ರೌಂಡ್,ಸ್ಕೋಡಾ ಶೋರೂಮ್, ಜಾರಂದಾಯ ರಸ್ತೆ, ಕೊರಗಜ್ಜ ದೈವಸ್ಥಾನ, ಸುಲ್ತಾನ್ ಭತ್ತೇರಿ ರಸ್ತೆ, ಬಿಲ್ಲವ ಸಂಘ,ಸುಲ್ತಾನ್ ಬತ್ತೇರಿ ಗ್ರೌಂಡ್, ಗುಂಡೂರಾವ್ ಲೇನ್, ಮಠದಕಣಿ, ಬೊಕ್ಕಪಟ್ಣ, ಮಿಷನ್ ಗೋರಿ, ಬರ್ಕೆ ಪೋಲೀಸ್ ಸ್ಟೇಷನ್, ಬೋಳೂರು ಹಾಗೂ ವೇರ್ ಹೌಸ್ ರೋಡ್, ಮಣ್ಣಗುಡ್ಡ, ಬಳ್ಳಾಲ್ ಭಾಗ್, ಕೊಡಿಯಾಲ್‌ಬೈಲ್, ರತ್ನಾಕರ್ ಲೇಔಟ್, ವಿಶಾಲ್ ನರ್ಸಿಂಗ್ ಹೋಂ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

ಬಿಜೈ,ವಿವೇಕನಗರ: ಸೆ. 11ರಂದು ವಿದ್ಯುತ್ ನಿಲುಗಡೆ

ಬಿಜೈ 110/33/11 ಕೆ.ವಿ. ಉಪಕೇಂದ್ರದಿಂದ ಹೊರಡುವ 11 ಕೆ.ವಿ. ವಿವೇಕನಗರ ಫೀಡರ್ ವ್ಯಾಪ್ತಿಯಲ್ಲಿ ಸೆ. 11ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಈ ಫೀಡರ್‌ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಅಂದು ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ವಿವೇಕನಗರ, ಶ್ರೀದೇವಿ ಕಾಲೇಜ್ ರಸ್ತೆ, ಕೆ.ಎಸ್.ಆರ್.ಟಿ.ಸಿ., ಸಿ.ಜಿ. ಕಾಮತ್ ರಸ್ತೆ, ಜೈಲ್ ರೋಡ್, ಎಂ.ಜಿ. ರೋಡ್, ಲಾಲ್ಬಾಗ್ ರಸ್ತೆ, ಬಳ್ಳಾಲ್ಬಾಗ್, ಮಾನಸ ಟವರ್ ಎದುರುಗಡೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

ಕೋಟೆಕಾರ್, ಉಳ್ಳಾಲ: ಸೆ. 11ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ಕೋಟೆಕಾರ್ 33/11 ಕೆ.ವಿ. ಉಪಕೇಂದ್ರ ವ್ಯಾಪ್ತಿಯ ಹಲವೆಡೆ ಸೆ. 11ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಕೋಟೆಕಾರ್ 33/11 ಕೆ.ವಿ. ಉಪಕೇಂದ್ರಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ನೂತನ 33 ಕೆ.ವಿ. ವಿದ್ಯುತ್ ಮಾರ್ಗದ ತುರ್ತು ಕಾಮಗಾರಿ ನಿರ್ವಹಿಸುವ ಸಲುವಾಗಿ 33 ಕೆ.ವಿ. ಲೈನಿನಿಂದ ಹೊರಡುವ 11 ಕೆ.ವಿ. ತೊಕ್ಕೊಟ್ಟು, 11 ಕೆ.ವಿ. ಉಳ್ಳಾಲ, 11 ಕೆ.ವಿ. ಕೋಟೆಕಾರ್, 11 ಕೆ.ವಿ. ಸೋಮೇಶ್ಚರ, 11 ಕೆ.ವಿ. ಕುತ್ತಾರ್, 11 ಕೆ.ವಿ. ಅಬ್ಬಕ್ಕ, 11 ಕೆ.ವಿ. ಮಂಚಿಲ, 11 ಕೆ.ವಿ. ಮೇಲಂಗಡಿ ಹಾಗೂ 11 ಕೆ.ವಿ. ಕಿನ್ಯಾ, 11 ಕೆ.ವಿ. ಮಂಜನಾಡಿ, ಕೆ.ವಿ. ಉಳ್ಳಾಲ ಎಕ್ಸ್ ಪ್ರೆಸ್, 11 ಕೆ.ವಿ. ಕೊಣಾಜೆ, 11 ಕೆ.ವಿ. ಬೆಳ್ಮ ಫೀಡರ್ಗಳಲ್ಲಿ ಸೆ.11 ರಂದು ವ್ಯವಸ್ಥೆ ಸುಧಾರಣೆ ಮತ್ತು ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ.

ಹಾಗಾಗಿ ಅಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಗ್ರೀನ್‌ಬಾಗ್ ನಾಟೆಕಲ್, ಸಂಕೇಶ್, ಬೆಳರಿಂಗೆ, ಮಿಂಪ್ರಿ, ಪನೀರ್ ಸೈಟ್, ನಡುಕುಮೇರ್, ಉಕ್ಕುಡ,ಕೈಕಂಬ, ದೇವಿನಗರ, ಪಂಜಳ, ಮಧುಪಾಲ್, ಕೆ.ಸಿ.ರೋಡ್, ಹೊಸನಗರ, ಕೆ.ಸಿ.ನಗರ, ಅಲಂಕಾರ್ಗುಡ್ಡೆ, ಪಿಲಿಕುರ್, ತಲಪಾಡಿ,ಮೇಲಿನ ತಲಪಾಡಿ, ನಾರ್ಲ, ತಚ್ಚಾಣಿ, ಗ್ರಾಮಚಾವಡಿ, ನ್ಯೂಪಡ್ಪು, ಹರೇಕಳ, ಬಾಬು ಕಂಪೌಂಡ್, ಮೇಲಂಗಡಿ, ದರ್ಗಾ, ಮಿಲ್ಲತ್‌ನಗರ, ಬಸ್ತಿಪಡ್ಪು, ಉಳಿಯ ಗೋಳಿಯಡಿ, ಸೇನೆರೆಬೈಲು, ಉಳಿಯ ಟೆಂಪಲ್, ಮಂಜಣ್ಣಕುದ್ರು, ಮೊಗವೀರ ಪಟ್ನ, ಕೋಡಿ,ಕೋಟಪುರ, ಬಬ್ಬುಕಟ್ಟೆ, ಹಿರಾನಗರ, ನಿತ್ಯಾಧರ್ ನಗರ, ಪ್ರಕಾಶ್ ನಗರ, ಪಂಡಿತ್ ಹೌಸ್, ಶಿವಾಜಿನಗರ, ಮುಂಡೋಳಿ ಪ್ರದೇಶಗಳು.

ಸೇವಂತಿಗುಡ್ಡೆ, ಸೇವಂತಿಗುತ್ತು, ಗಂಡಿ, ವಿಜೇತನಗರ, ತಾರಿಪಡ್ಪು, ಓವರ್ ಬ್ರಿಡ್ಜ್, ಬಂಗೇರ ಲೇನ್, ಬಾಕಿಮಾರ್, ಬಂಗೇರ ಕಾಲನಿ, ತೊಕ್ಕೊಟ್ಟು ಒಳಪೇಟೆ, ಪಿಲಾರ್, ಪಿಲಾರ್ ಶಾಲೆ, ಅಂಬಿಕಾ ರೋಡ್, ಸರಸ್ವತಿ ಕಾಲನಿ, ನೆಹರೂ ನಗರ, ಪ್ರತಾಪ್ ನಗರ,ಶಿವಶಕ್ತಿನಗರ, ಸೋಮೇಶ್ವರ ಟೆಂಪಲ್, ಸುಲ್ತಾನ್ ನಗರ, ತೊಕ್ಕೊಟ್ಟು, ಕಲ್ಲಾಪು, ಬರ್ದು, ಉಳ್ಳಾಲ, ಸೋಮೇಶ್ವರ, ಕುತ್ತಾರ್,ಕೋಟೆಕಾರ್, ಬೀರಿ, ತಲಪಾಡಿ, ಅಂಬಿಕಾರೋಡ್, ಅಡ್ಕ, ಮಡ್ಯಾರ್, ಮಾಡೂರು, ದೇವಿಪುರ, ಕಿನ್ಯಾ, ಕೊಣಾಜೆ, ಅಸೈಗೋಳಿ,ದೇರಳಕಟ್ಟೆ, ಹರೇಕಳ, ಮುನ್ನೂರು, ಪಾವೂರು, ಇನೋಳಿ, ಬೋಳಿಯಾರ್ ಭಾಗಗಳು.

ರಬ್ಬರ್ ಫ್ಯಾಕ್ಟರಿ, ಲಕ್ಷ್ಮೀಗುಡ್ಡೆ, ಮೂರುಕಟ್ಟೆ, ಕುಂಪಲ,ಕನೀರ್ ತೋಟ, ಸರಳಾಯ ಕಾಲನಿ, ಕನೀರ್ ತೋಟ ಗುಡ್ಡೆ, ಕೃಷ್ಣ ಮಂದಿರ, ಕುಂಪಲ, ಪಿಲಾರ್ ಪಲ್ಲ, ಹನುಮಾನ್ ನಗರ,ಆಶ್ರಯ ಕಾಲನಿ, ಕುಂಪಲ ಶಾಲೆ, ಚೇತನನಗರ, ಅಸೈಗೋಳಿ, ಆರ್.ವಿ ಆರ್ಕೇಡ್, ಶಾಂತಿಭಾಗ್, ಮುಂಡೋಳಿ, ಮೂರುಕಟ್ಟೆ, ಬಲ್ಯ ನಿಸರ್ಗ ಲೇಔಟ್, ಮಡ್ಯಾರ್, ಕ್ರಷರ್, ಪಿಲಾರ್, ಪಿಲಾರ್ ಶಾಲೆ, ಅಂಬಿಕಾರೋಡ್, ಸರಸ್ವತಿ ಕಾಲನಿ, ದ್ವಾರಕಾನಗರ,ಅಬ್ಬಂಜರ, ಅನಿಲ್ ಕಂಪೌಂಡ್, 9ಕೆರೆ ಐಟಿಐ, 9ಕೆರೆ ಬನ, ಪೆರಂಡೆ, ಅಡ್ಕರೆ ಪಡ್ಪು, ಕಲ್ಲಿಮಾರ್, ಪುಳೀಂಚಾಡಿ, ಅಡ್ಕ,ಕೋಟೆಕಾರ್, ಬೀರಿ, ಮಾಡೂರು, ಕೊಂಡಾಣ, ನಡಾರ್, ಮಡ್ಯಾರ್, ಕಾಯರ್ಮಜಲು, ಸಂಕೋಳಿಗೆ, ಉಚ್ಚಿಲ, ಬೋವಿಶಾಲೆ,ಕೊಣಾಜೆ, ಕೋಡಿಜಾಲ್, ನಯಾಪಟ್ಣ, ಅಡ್ಕರೆ ಪಡ್ಪು ಕೆ.ಎಸ್ ಹೆಗ್ಡೆ ಹಿಂದುಗಡೆ, ಮಾನಸ ಫರ್ನಿಚರ್ ಎದುರುಗಡೆ, ಶಾಂತಿ ಭಾಗ್, ಮೂಂಡೋಳಿ, ಕೆ.ಎಚ್.ಬಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News