ಮಂಗಳೂರು: ಸಂಚಾರ ನಿಯಮ ಉಲ್ಲಂಘನೆ; ವಾರದಲ್ಲಿ 2,543 ಪ್ರಕರಣ ದಾಖಲು

Update: 2023-11-13 14:36 GMT

ಸಾಂದರ್ಭಿಕ ಚಿತ್ರ

ಮಂಗಳೂರು, ನ.13: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಘಟನೆಗಳಿಗೆ ಸಂಬಂಧಿಸಿದಂತೆ ಸಂಚಾರ ಪೊಲೀಸರು ನ.5ರಿಂದ 12ರ ಮಧ್ಯೆ ಅಂದರೆ ಒಂದು ವಾರದೊಳಗೆ 2,543 ಪ್ರಕರಣಗಳನ್ನು ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.

ಮದ್ಯಪಾನ ಕುಡಿದು ಚಾಲನೆಗೈದ 21 ಪ್ರಕರಣ, ಅನಧಿಕೃತ ಪಾರ್ಕಿಂಗ್ ಮಾಡಿದ 448, ಹೆಲ್ಮೆಟ್ ಧರಿಸದ 768, ಬಸ್‌ನ ಫುಟ್‌ಬೋರ್ಡ್‌ನಲ್ಲಿ ನೇತಾಡಿದ 205, ಏಕಮುಖ ರಸ್ತೆಯಲ್ಲಿ ಸಂಚರಿಸಿದ 96, ನಂಬರ್ ಪ್ಲೇಟ್ ಅಳವಡಿಸದ 75, ನಿರ್ಲಕ್ಷ್ಯದ ಚಾಲನೆಗೈದ 55, ಟಿಂಟ್ ಗ್ಲಾಸ್ ಹಾಕಿದ 48, ಸೀಟ್ ಬೆಲ್ಟ್ ಧರಿಸದ 35, ಬಾಡಿಗೆಗೆ ಬಾರದ ಮತ್ತು ಅಧಿಕ ದರ ವಸೂಲಿ ಮಾಡಿದ ರಿಕ್ಷಾಗಳ ವಿರುದ್ದ 11, ದ್ವಿಚಕ್ರ ವಾಹನದಲ್ಲಿ ತ್ರಿಬಲ್ ರೈಡ್ ಮಾಡಿದ 20 ಹೀಗೆ ಒಟ್ಟು 2,543 ಪ್ರಕರಣ ದಾಖಲಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News