ಮಂಗಳೂರು: ಸಾಲ ಪಡೆದ ವ್ಯಕ್ತಿಯ ಚಿತ್ರ ಅಶ್ಲೀಲಗೊಳಿಸಿ ವೈರಲ್; ದೂರು ದಾಖಲು
Update: 2023-07-27 16:57 GMT
ಮಂಗಳೂರು: ಲೋನ್ ಆ್ಯಪ್ ಮೂಲಕ 4,200 ರೂ. ಸಾಲ ಪಡೆದ ವ್ಯಕ್ತಿಯ ಚಿತ್ರವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ವೈರಲ್ ಮಾಡಿರುವ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಾನು ಲೋನ್ ಆ್ಯಪ್ ಮೂಲಕ 3500 ರೂ. ಸಾಲಕ್ಕೆ ಅರ್ಜಿ ಹಾಕಿದ ಬಳಿಕ ತನ್ನ ಬ್ಯಾಂಕ್ ಖಾತೆಗೆ 2800 ರೂ. ಸಾಲ ಜಮೆಯಾಗಿದೆ. ಈ ಸಾಲವನ್ನು ಜು.26ಕ್ಕೆ ಮುಂಚಿತವಾಗಿ ಮರುಪಾವತಿ ಮಾಡಬೇಕಾಗಿದುದ್ದರಿಂದ ಜು.19ರಂದು 1400 ರೂ. ಮರುಪಾವತಿ ಮಾಡಲಾಗಿದೆ. ಉಳಿದ ಹಣವನ್ನು ಜು.26ರಂದು ಹಂತ ಹಂತವಾಗಿ ಪಾವತಿ ಮಾಡಿರುವೆ. ಇದಾದ ಬಳಿಕ ಅಪರಿಚಿತ ವ್ಯಕ್ತಿಯು ತನ್ನ ಕಾಂಟಾಕ್ಟ್ ಲೀಸ್ಟ್‌ನಲ್ಲಿರುವ ತಂದೆಯ, ಸಂಬಂಧಿಕರ ಹಾಗೂ ಕಾಲೇಜಿನ ಅಧ್ಯಾಪಕರ ವಾಟ್ಸಪ್ ನಂಬರ್‌ಗಳಿಗೆ ತನ್ನ ಮತ್ತು ಇತರರ ಭಾವಚಿತ್ರವನ್ನು ಅಶ್ಲೀಲಗೊಳಿಸಿ ಲೋನ್ ಪಾವತಿ ಮಾಡಿರುವುದಿಲ್ಲ ವೆಂದು ಸಂದೇಶ ರವಾನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.