ಮಂಗಳೂರು: ಕಾಂಗ್ರೆಸ್ ಭವನದಲ್ಲಿ ಕ್ವಿಟ್ ಇಂಡಿಯಾ ಚಳುವಳಿಯ ವರ್ಷಾಚರಣೆ

Update: 2023-08-09 14:00 GMT

ಮಂಗಳೂರು: ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಕ್ವಿಟ್ ಇಂಡಿಯಾ ಚಳುವಳಿಯ ೮೧ನೇ ವರ್ಷಾಚರಣೆ ಕಾರ್ಯ ಕ್ರಮ ಬುಧವಾರ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆಯಿತು.

ಮಾಜಿ ಶಾಸಕ ಜೆ.ಆರ್.ಲೋಬೊ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ತರುವ ನಿಟ್ಟಿನಲ್ಲಿ ಕ್ವಿಟ್ ಇಂಡಿಯಾ ಆಂದೋಲನ ಒಂದು ಪ್ರಮುಖ ಘಟನೆಯಾಗಿದ್ದು, ಸ್ವಾತಂತ್ರ್ಯ ಚಳುವಳಿಯ ಅವಿಭಾಜ್ಯ ಅಂಗವಾಗಿದೆ. ಮಹಾತ್ಮಗಾಂಧಿ, ನೆಹರು, ಬಾಲಗಂಗಾಧರ ತಿಲಕ್, ಗೋಖಲೆ, ಮೌಲಾನ ಅಝಾದ್, ಸುಭಾಷ್ ಚಂದ್ರ ಬೋಸ್, ಸರ್ದಾರ್ ಪಟೇಲ್, ಡಾ.ರಾಜೇಂದ್ರ ಪ್ರಸಾದ್ ಸೇರಿದಂತೆ ಅನೇಕ ನಾಯಕರುಗಳು ಪಾಲ್ಗೊಂಡು ಬ್ರಿಟಿಷರನ್ನು ಹೊರಹಾಕಲು ಈ ಆಂದೋಲನ ರೂಪಿಸಿದ್ದರು. ಇಂದು ಬಿಜೆಪಿಯ ದುರಾಡಳಿತ, ಅಸಮಾನತೆ, ಕೋಮುವಾದ, ಜನಾಂಗೀಯ ದ್ವೇಷದ ವಿರುದ್ಧ ಚಳುವಳಿ ನಡೆಸುವ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸಬೇಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮಾತನಾಡಿದರು.

ಸದಾಶಿವ್ ಉಳ್ಳಾಲ್, ಶಾಹುಲ್ ಹಮೀದ್, ಶುಭಾಷ್ ಕೊಲ್ನಾಡ್, ಲಾರೆನ್ಸ್ ಡಿಸೋಜ, ಪ್ರಕಾಶ್ ಸಾಲ್ಯಾನ್, ಅಬ್ದುಲ್ ಸಲೀಂ, ಮೋಹನ್ ಕೋಟ್ಯಾನ್ ಮುಲ್ಕಿ, ಕೆ.ಕೆ. ಸುಹಾನ್ ಆಳ್ವ, ವಸಂತ್ ಬೆರ್ನಾಡ್, ಅಪ್ಪಿ, ಸದಾಶಿವ್ ಶೆಟ್ಟಿ ಸುರತ್ಕಲ್, ಎ.ಸಿ. ಜಯರಾಜ್, ಮಂಜುಳಾ ನಾಯಕ್, ಶಾಂತಲಾ ಗಟ್ಟಿ, ಗಣೇಶ್ ಪೂಜಾರಿ, ಟಿ.ಹೊನ್ನಯ್ಯ, ಕೇಶವ ಮರೋಳಿ, ಸಂಶುದ್ದೀನ್ ಝೀನತ್ ಬಂದರ್, ಮೋಹನ್ ಶೆಟ್ಟಿ, ಲಿಯಾಖತ್ ಶಾ, ಪದ್ಮನಾಭ ಅಮೀನ್, ಪಿ.ಪಿ. ಮಜೀದ್ ಬಂದರ್, ಜೆಸಿಂತಾ ವಿಜಯ್ ಆಲ್ಫ್ರೆಡ್, ಶೈಲಜಾ ಟಿ.ಕೆ, ಚಿತ್ತರಂಜನ್ ಶೆಟ್ಟಿ, ಶುಭೋದಯ ಆಳ್ವ, ನಝೀರ್ ಬಜಾಲ್, ವಿಕಾಸ್ ಶೆಟ್ಟಿ, ರಾಕೇಶ್ ದೇವಾಡಿಗ, ಟಿ.ಕೆ.ಸುಧೀರ್, ಸಮರ್ಥ್ ಭಟ್, ರಮಾನಂದ ಪೂಜಾರಿ, ಮಲ್ಲಿಕಾರ್ಜುನ ಕೋಡಿಕಲ್, ದುರ್ಗಾ ಪ್ರಸಾದ್ ಶೆಟ್ಟಿ, ರಹಿಮಾನ್ ಕೋಡಿಕಲ್, ಹಯಾತ್ ಖಾಮಿಲ್, ಸಲೀಂ ಮಕ್ಕ, ಗಿರೀಶ್ ಶೆಟ್ಟಿ, ಉದಯ್ ಕುಂದರ್, ಯೋಗಿಶ್ ನಾಯಕ್, ಮೊಹಮ್ಮದ್ ಬಪ್ಪಳಿಗೆ, ರೋಬಿನ್ ಅಂಚನ್, ರಹಿಮಾನ್ ಕುಂಜತ್ತಬೈಲ್ ಉಪಸ್ಥಿತರಿದ್ದರು.

ಸೇವಾದಳ ಜಿಲ್ಲಾಧ್ಯಕ್ಷ ಜೋಕಿಂ ಡಿಸೋಜ ಸ್ವಾಗತಿಸಿದರು, ಮಾಜಿ ಮೇಯರ್ ಶಶಿಧರ್ ಹೆಗ್ಡೆ ವಂದಿಸಿದರು.




 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News