ಮಂಗಳೂರು: ಬ್ಯಾರೀಸ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ʼರಾಷ್ಟ್ರೀಯ ಇಂಧನ ಸಂರಕ್ಷಣಾ ಸಪ್ತಾಹ- 2024ʼ ಕಾರ್ಯಕ್ರಮ
ಮಂಗಳೂರು : ಬ್ಯಾರೀಸ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ)ಯಲ್ಲಿ ರಾಷ್ಟ್ರೀಯ ಇಂಧನ ಸಂರಕ್ಷಣಾ ಸಪ್ತಾಹ- 2024 ಕಾರ್ಯಕ್ರಮ ನಡೆಯಿತು.
ಡಿಸೆಂಬರ್ 31ರಂದು ಕಾರ್ಯಕ್ರಮ ಆರಂಭವಾಗಿದ್ದು, ಆಸ್ಟ್ರೇಲಿಯಾದ ಡಾ. ಸರ್ದಾರ್ ಇಸ್ಲಾಂ ಅವರು "ಎನರ್ಜಿ ಕನ್ಸರ್ವೇಶನ್ ಮತ್ತು ಡಿಜಿಟಲೈಸೇಶನ್ ಆಫ್ ಎನರ್ಜಿ ಟೆಕ್ನಾಲಜೀಸ್" ಕುರಿತು ಮತ್ತು ಪ್ರೊ.ಜಾನ್ ವಾಲ್ಡರ್ ಅವರು "ಪರ್ಯಾಯ ಶಕ್ತಿಗಳು ಮತ್ತು ನವೀಕರಿಸಬಹುದಾದ ಇಂಧನ ಮೂಲಗಳು" ಎಂಬ ವಿಷಯಗಳ ಕುರಿತು ಮಾತನಾಡಿದ್ದಾರೆ.
ಕಾರ್ಯಕ್ರಮದಲ್ಲಿ 2025ರ ಜನವರಿ 2ರಂದು ಹಮ್ಮಿಕೊಂಡಿದ್ದ ವಾಕಥಾನ್ ಪ್ರಮುಖ ಆಕರ್ಷಣೆಯಾಗಿತ್ತು. ವಾಕಥಾನ್ ನಲ್ಲಿ ಸುಮಾರು 500 ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಾರವಿಡೀ ವಿವಿಧ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದ್ದಾರೆ.
ಕಾರ್ಯಕ್ರಮವನ್ನು ECE ವಿಭಾಗದ ಮುಖ್ಯಸ್ಥರಾದ ಡಾ. ಅಬ್ದುಲ್ಲಾ ಗುಬ್ಬಿ ಸಂಯೋಜನೆ ನಡೆಸಿದ್ದಾರೆ. ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಂಗಳವಾರ ರಾಷ್ಟ್ರೀಯ ಇಂಧನ ಸಂರಕ್ಷಣಾ ಸಪ್ತಾಹ- 2024 ಕಾರ್ಯಕ್ರಮ ಸಮಾಪ್ತಿಯಾಗಿದೆ. ಈ ವೇಳೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳು ಮತ್ತು ಬಹುಮಾನಗಳನ್ನು ನೀಡಲಾಗಿದೆ.