ಯೆನೆಪೋಯ ಡೆಂಟಲ್ ಕಾಲೇಜು: ‘ಆರ್ಥೋಗ್ನಾಥಿಕ್ ಸರ್ಜರಿ ಯೋಜನೆ- ಅನುಷ್ಠಾನ ಕಾರ್ಯಾಗಾರ
ಮಂಗಳೂರು: ಯೆನೆಪೋಯ ಡೆಂಟಲ್ ಕಾಲೇಜಿನ ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಸರ್ಜರಿ ವಿಭಾಗದ ಆಶ್ರಯ ದಲ್ಲಿ ಆರ್ಥೋಗ್ನಾಥಿಕ್ ಸರ್ಜರಿಯ ಯೋಜನೆ ಮತ್ತು ಅನುಷ್ಠಾನದ ಕುರಿತು ಎರಡು ದಿನಗಳ ಕಾರ್ಯಾಗಾರ ನಡೆಯಿತು.
ಕೊಚ್ಚಿಯ ಆಸ್ಟರ್ ಮೆಡಿಸಿಟಿಯ ಕನ್ಸಲ್ಟೆಂಟ್ ಕ್ರೇನಿಯೊಫೇಶಿಯಲ್ ಸರ್ಜನ್ ಡಾ. ಶೆರ್ರಿ ಪೀಟರ್ ಮತ್ತು ಡಾ. ಲತಾ ಪಿ ರಾವ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಎಜೆ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್‌ನ ಓರಲ್ ಮತ್ತು ಮ್ಯಾಕ್ಸಿಲೊ ಫೇಶಿಯಲ್ ಸರ್ಜರಿ ವಿಭಾಗದ ಮುಖ್ಯಸ್ಥ, ಡಾ.ಮಂಜುನಾಥ್ ರೈ, ಕ್ರೇನಿಯೋಫೇಶಿಯಲ್ ಅನೋಮಲೀಸ್ ಕೇಂದ್ರದ ನಿರ್ದೇಶಕ ಡಾ. ಅಖ್ತರ್ ಹುಸೇನ್, ಯೆನೆಪೋಯ ದಂತ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಲಕ್ಷ್ಮೀಕಾಂತ್ ಚಾತ್ರ , ಸಂಪನ್ಮೂಲ ವ್ಯಕ್ತಿ ಡಾ.ಶೆರ್ರಿ ಪೀಟರ್, ದಂತ ಕಾಲೇಜಿನ ಡೀನ್ ಡಾ.ಶ್ಯಾಮ್.ಎಸ್.ಭಟ್ ಮತ್ತು ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಸರ್ಜರಿ ವಿಭಾಗದ ಮುಖ್ಯಸ್ಥ ಡಾ.ಜಗದೀಶ್ ಚಂದ್ರ ಉದ್ಘಾಟಿಸಿದರು.
ಸಂಘಟನಾ ಅಧ್ಯಕ್ಷರಾಗಿ ವಿಭಾಗದ ಮುಖ್ಯಸ್ಥ ಡಾ.ಜಗದೀಶ್ ಚಂದ್ರ, ವೈಜ್ಞಾನಿಕ ಅಧ್ಯಕ್ಷ ಡಾ.ಜೋಯ್ಸ್ ಸಿಕ್ವೇರಾ, ಸಂಘಟನಾ ಕಾರ್ಯದರ್ಶಿ ಡಾ.ವಿನಯಕೃಷ್ಣ ಉಪಸ್ಥಿತರಿದ್ದರು.
ಆತಿಥೇಯ ಮತ್ತು ನೆರೆಯ ಸಂಸ್ಥೆಗಳಿಂದ ಒಟ್ಟು 72 ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು 10 ಅಧ್ಯಾಪಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಡಾ.ವರ್ಷ ಉಪಾದ್ಯ ಮತ್ತು ಡಾ.ರಮ್ಯಾ.ಎ ಕಾರ್ಯಕ್ರಮ ನಿರ್ವಹಿಸಿದರು.