‘ಸಆದ’ ಅವಾರ್ಡ್‌ಗೆ ಮಾಣಿ ಉಸ್ತಾದ್ ಆಯ್ಕೆ

Update: 2024-12-04 18:05 GMT

ಶಿವಮೊಗ್ಗ, ಡಿ.4: ಧಾರ್ಮಿಕ ಲೌಕಿಕ ವಿದ್ಯಾಭ್ಯಾಸ ಸಂಸ್ಥೆ ಮರ್ಕಾಝ್ ಸಆದ ಕೊಡಮಾಡುವ ಹಬೀಬ್ ದಾದ ಸೇಠ್ ಸಆದ ಎಕ್ಸಲೆನ್ಸಿ ಅವಾರ್ಡ್ 3.0ಗೆ ದಾರುಲ್ ಇರ್ಷಾದ್ ವಿದ್ಯಾ ಸಂಸ್ಥೆಯ ಶಿಲ್ಪಿ, ಕರ್ನಾಟಕ ಉಲಮಾ ಒಕ್ಕೂಟದ ರಾಜ್ಯಾಧ್ಯಕ್ಷ, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಹಾಸನ ಸೇರಿ ನೂರಾರು ಮೊಹಲ್ಲಾದ ಖಾಝಿಯೂ ಆದ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಆಯ್ಕೆಯಾಗಿದ್ದಾರೆ.

ಕಳೆದ 10 ವರ್ಷಗಳಿಂದ ಶಿವಮೊಗ್ಗದಲ್ಲಿ ಶಿಕ್ಷಣ ಕ್ರಾಂತಿಯೊಂದಿಗೆ ಮುನ್ನಡೆಯುತ್ತಿರುವ ಮರ್ಕಝ್ ಸಆದ ಸಂಸ್ಥೆಯ ವಿದ್ಯಾರ್ಥಿಗಳ ಸಾಹಿತ್ಯ ಹಬ್ಬ ‘ಮೆಘಾಲಿಯೋ’ ಡಿ.19ರಿಂದ 22ರವರೆಗೆ ನಡೆಯಲಿದ್ದು, ಸಮಾರೋಪ ಸಮಾರಂಭದಲ್ಲಿ ಸಂಸ್ಥೆಯ ಶಿಲ್ಪಿಸಯ್ಯಿದ್ ಶಹೀದುದ್ದೀನ್ ಅಲ್ ಬುಖಾರಿ ಶಿವಮೊಗ್ಗ ತಂಙಳ್ ಅವರು ಝೈನುಲ್ ಉಲಮಾ ಅವರಿಗೆ ಪ್ರಶಸ್ತಿ ಪ್ರದಾನಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಉದ್ಯಮಿ ಇಕ್ಬಾಲ್ ಹಬೀಬ್ ಸೇಠ್, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಬ್ಬಾರ್ ಸಅದಿ ಸಹಿತ ಹಲವಾರು ಧಾರ್ಮಿಕ ಸಾಮಾಜಿಕ ರಾಜಕೀಯ ಮುಖಂಡರು ಭಾಗವಹಿಸಲಿರುವರು ಎಂದು ಸಂಸ್ಥೆಯ ಡೈರೆಕ್ಟರ್ ಅಬ್ದುಲ್ ಲತೀಫ್ ಸಅದಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News