ಮಂಗಳೂರು ಮಹಾನಗರಪಾಲಿಕೆ: ಹೊಸ ಕಟ್ಟಡಕಾಮಗಾರಿ ಆ್ಯಪ್ ಮೂಲಕ ಮಂಜೂರಾತಿ

Update: 2024-12-04 15:46 GMT

ಮಂಗಳೂರು: ಹೈಕೋರ್ಟ್‌ಆದೇಶದ ಮೇರೆಗೆ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಕಟ್ಟಡ ಮಂಜೂರಾತಿ ನಕ್ಷೆಗಳ ಉಲ್ಲಂಘನೆ, ಅನಧಿಕೃತ ಕಟ್ಟಡಗಳ ನಿರ್ಮಾಣಗಳನ್ನು ತಡೆಯುವ ಬಗ್ಗೆ ಕಾರ್ಯ ಪಡೆಗಳನ್ನು ರಚಿಸಿ ಉಲ್ಲಂಘನೆ ಅಥವಾ ಅನಧಿಕೃತ ನಿರ್ಮಾಣಗಳನ್ನು ತಡೆಯುವ ಕುರಿತು ತಂತ್ರಾಂಶ ಅಭಿವೃದ್ಧಿಪಡಿಸಿದ್ದು ಸದ್ರಿಕಟ್ಟಡ ನಿರ್ಮಾಣದ ಪರಿಶೀಲನೆ ಹಾಗೂ ಕಟ್ಟಡ ಪ್ರವೇಶ ಪತ್ರವನ್ನು ಸಂಪೂರ್ಣ ಆಲೈನ್ ತಂತ್ರಾಂಶದ ಮೂಲಕವೇ ನೀಡಲಾಗುತ್ತಿದೆ.

ಇದುವರೆಗೆ 148 ಅರ್ಜಿಗಳು ಸದ್ರಿ ತಂತ್ರಾಂಶದ ಮೂಲಕವೇ ಅರ್ಜಿ ಸಲ್ಲಿಸಲಾಗಿದೆ. ಪರಿಶೀಲನೆ ಪ್ರಕ್ರಿಯೆ ಜಾರಿಯಲ್ಲಿದೆ. ಈ ಪ್ರಕ್ರಿಯೆಯು ಪೂರ್ಣಗೊಂಡ ನಂತರ ಕಟ್ಟಡದ ಪ್ರವೇಶ ಪತ್ರವನ್ನು ಆನ್‌ಲೈನ್ ಮುಖಾಂತರ ನೀಡಲಾಗುತ್ತದೆ. ಆದುದರಿಂದ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಹೊಸ ಕಟ್ಟಡ ಕಾಮಗಾರಿ ನಡೆಸುವ ಅರ್ಜಿದಾರರು ಕಟ್ಟಡ ಕಾಮಗಾರಿ ಅನುಮತಿ ಪತ್ರ ಪಡೆದ ನಂತರ ಕಡ್ಡಾಯವಾಗಿ ಗೂಗಲ್ ಪ್ಲೇಸ್ಟೋರ್ ಮೂಲಕ MCC Building licence Management System App ಡೌನ್‌ಲೋಡ್ ಮಾಡಿ ಆನ್‌ಲೈನ್ ಮುಖಾಂತರ Excavation, Plinth, Slab, Completion ಹಂತಗಳಲ್ಲಿ ಕಟ್ಟಡ ಕಾಮಗಾರಿ ಪರಿಶೀಲನೆಗಾಗಿ ಆ್ಯಪ್‌ ಮೂಲಕವೇ ಮಾಹಿತಿಯನ್ನು ನೀಡಬೇಕು.

ಯಾವುದೇರೀತಿಯ ವಿಚಾರಣೆಗಳಿದ್ದಲ್ಲಿ ಮಹಾನಗರಪಾಲಿಕೆಯ ಸಹಾಯವಾಣಿ 6364019555 ಸಂಪರ್ಕಿಸುವಂತೆ ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News