ಬಾಲಕಿ ನಾಪತ್ತೆ: ದೂರು ದಾಖಲು
Update: 2023-08-25 16:36 GMT
ಉಪ್ಪಿನಂಗಡಿ: ಇಲ್ಲಿನ ಮುಸ್ತಾಫ ಎಂಬವರ ಮಗಳು ಫಾತಿಮತ್ ಶೌಹಾನ (17) ಆ. 22 ರಿಂದ ನಾಪತ್ತೆಯಾಗಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.
ರಾತ್ರಿ ಊಟ ಮುಗಿಸಿ ತಾಯಿಯೊಂದಿಗೆ ಮಲಗಿದವಳು ಮುಂಜಾನೆ ಎದ್ದು ನೋಡುವಾಗ ನಾಪತ್ತೆಯಾಗಿದ್ದು, ಆಕೆ ಉಪಯೋಗಿಸುವ ಮೊಬೈಲ್ ಕೂಡಾ ನಾಪತ್ತೆಯಾಗಿರುತ್ತದೆ. ಸದ್ರಿ ಮೊಬೈಲ್‍ಗೆ ಕರೆ ಮಾಡಿದಾಗ ಅದು ಸ್ವಿಚ್ ಆಫ್ ಆಗಿದ್ದು, ಹುಡುಕಾಟ ನಡೆಸಿದರೂ ಪತ್ತೆಯಾಗಿರುವುದಿಲ್ಲ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಉಪ್ಪಿನಂಗಡಿ ಪೊಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.