ಮೂಡುಬಿದಿರೆ: ಬಿಸಿಸಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ
ಮೂಡುಬಿದಿರೆ, ಜ.22: ಬೆಳವಾಯಿ ಕಮ್ಯುನಿಟಿ ಸೆಂಟರ್(ಬಿಸಿಸಿ) ವತಿಯಿಂದ 'ಬಿಸಿಸಿ ಪ್ರೀಮಿಯರ್ ಲೀಗ್- 2024' ಕ್ರಿಕೆಟ್ ಪಂದ್ಯಾಟವು ಜ.20 ಮತ್ತು 21ರಂದು ಬೆಳವಾಯಿಯ ಎಸ್.ಎಂ.ಪಿ. ಹೈಸ್ಕೂಲ್ ಆಟದ ಮೈದಾನದಲ್ಲಿ ನಡೆಯಿತು.
ಬೆಳವಾಯಿ ಪಂಚಾಯತ್ ಅಧ್ಯಕ್ಷ ಸುರೇಶ ಪೂಜಾರಿ ಗೋಳಾರ ಪಂದ್ಯಾವಳಿಯನ್ನು ಉದ್ಘಾಟಿಸಿದರು. ಬೆಳವಾಯಿ ಸಮುದಾಯ ಕೇಂದ್ರದ ಅಧ್ಯಕ್ಷ ನಾಸಿರ್ ಗುಲಾಂ ಹುಸೇನ್ ಶೇಖ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಹಮ್ಮದ್ ಸಾಹೇಬ್ ಉಸ್ಮಾನ್, ಅನ್ವರ್ ಇಸ್ಮಾಯೀಲ್, ಶೌಕತ್ ಅಲಿ, ಸುಲೈಮಾನ್ ಶೇಖ್ ಅನ್ನಿ ಎಂ., ಜಮ್ಮಿಗರ್, ಸೈಮಾನ್ ಮಸ್ಕರ್ಹನಾಸ್, ಅಸ್ಗರ್ ಕಾಸಿಂ, ನಾಸಿರ್ ಅಖ್ತರ್, ಮುಹಮ್ಮದ್ ಸಿರಾಜ್, ಮುನೀರ್ ಯೂಸುಫ್, ಖಮ್ಯೂಮ್ ಉಪಸ್ಥಿತರಿದ್ದರು.
ಹಸ್ತುಲ್ಲಾ ಇಸ್ಮಾಯೀಲ್ ಪ್ರೇರಣಾ ಭಾಷಣ ಮಾಡಿದರು. ಈವೆಂಟ್ ಮ್ಯಾನೇಜರ್ ಜಾಹಿದ್ ಗುಲಾಮ್ ಹುಸೇನ್ ಪಂದ್ಯಾವಳಿಯ ನಿಯಮಗಳನ್ನು ವಿವರಿಸಿದರು.
ಪ್ಯಾರಡೈಸ್ ಬೆಳವಾಯಿ ಚಾಂಪಿಯನ್:
ಒಟ್ಟು ಎಂಟು ತಂಡಗಳು ಭಾಗವಹಿಸಿದ್ದ ಪಂದ್ಯಾವಳಿಯಲ್ಲಿ ಪ್ಯಾರಡೈಸ್ ಬೆಳವಾಯಿ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತು. ಯುನೈಟೆಡ್ ಬೆಳವಾಯಿ ತಂಡ ರನ್ನರ್ ಅಪ್ ಸ್ಥಾನ ಗಳಿಸಿತು.
ಮೊಥಾಸಿಮ್ ಅತ್ಯುತ್ತಮ ಬೌಲರ್ ಪ್ರಶಸ್ತಿ ಗಳಿಸಿದರೆ, ಅಝೀಮ್ ಅತ್ಯುತ್ತಮ ಬ್ಯಾಟರ್ ಪ್ರಶಸ್ತಿ, ಉನೈಝ್ ಅತ್ಯುತ್ತಮ ಫೀಲ್ಡರ್ ಪ್ರಶಸ್ತಿಗೆ ಭಾಜನರಾದರು. ಫೈನಲ್ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ನಿಹಾಲ್ ಪಂದ್ಯಶ್ರೇಷ್ಠ ಪ್ರಶಸ್ತಿ, ಪಂದ್ಯಾವಳಿಯುದ್ದಕ್ಕೂ ಅತ್ಯುತ್ತಮ ಸ್ಥಿರ ಪ್ರದರ್ಶನ ನೀಡಿದ ಅಝೀಂ ಸರಣಿ ಶ್ರೇಷ್ಠ ಪ್ರಶಸ್ತಿ ಗಳಿಸಿದರು.
ಬಿಸಿಸಿ ಬೆಳವಾಯಿ ಘಟಕದ ಕಾರ್ಯದರ್ಶಿ ಶೇಕ್ ಫರ್ಹಾದ್ ಅಹ್ಮದ್ ಸ್ವಾಗತಿಸಿದರು. ಅಜ್ಮಲ್ ವಂದಿಸಿದರು.
ಎ.ಎಲ್.ಎಸ್. ಲಾಜಿಸ್ಟಿಕ್ಸ್ ಈ ಪಂದ್ಯಾವಳಿಯ ಪ್ರಧಾನ ಪ್ರಾಯೋಜಕತ್ವ ವಹಿಸಿತ್ತು.