CPIM ದ.ಕ.ಜಿಲ್ಲಾ ನೂತನ ಕಾರ್ಯದರ್ಶಿಯಾಗಿ ಮುನೀರ್ ಕಾಟಿಪಳ್ಳ ಆಯ್ಕೆ

Update: 2024-11-23 06:10 GMT

ಮಂಗಳೂರು: ಇತ್ತೀಚಿಗೆ ನಡೆದ ಸಿಪಿಐಎಂ ನ 24ನೇ ದ.ಕ.ಜಿಲ್ಲಾ ಸಮ್ಮೇಳನದಲ್ಲಿ ಮುಂಬರುವ ಮೂರು ವರ್ಷಗಳ ಕಾಲಾವಧಿಗೆ ನೂತನ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು. ಸಿಪಿಐಎಂ ನ ನೂತನ ಜಿಲ್ಲಾ ಕಾರ್ಯದರ್ಶಿಯಾಗಿ ಮುನೀರ್ ಕಾಟಿಪಳ್ಳ ಅವರು ಸರ್ವಾನುಮತದಿಂದ ಆಯ್ಕೆಗೊಂಡರು.

ಜಿಲ್ಲಾ ಕಾರ್ಯದರ್ಶಿ ಮಂಡಳಿಗೆ ಕೆ ಯಾದವ ಶೆಟ್ಟಿ, ಸುನಿಲ್ ಕುಮಾರ್ ಬಜಾಲ್, ಡಾ.ಕ್ರಷ್ಣಪ್ಪ ಕೊಂಚಾಡಿ, ಸುಕುಮಾರ್ ತೊಕ್ಕೋಟ್ಟು, ವಸಂತ ಆಚಾರಿ, ಸದಾಶಿವದಾಸ್,ಬಿ ಎಂ ಭಟ್, ಜಯಂತಿ ಶೆಟ್ಟಿಯವರು ಆಯ್ಕೆಯಾದರು.

ನೂತನ ಜಿಲ್ಲಾ ಸಮಿತಿ ಸದಸ್ಯರಾಗಿ ಜಯಂತ ನಾಯ್ಕ್, ರಮಣಿ ಮೂಡಬಿದ್ರೆ, ಯೋಗೀಶ್ ಜಪ್ಪಿನಮೊಗರು, ಬಿ ಕೆ ಇಮ್ತಿಯಾಜ್, ಸಂತೋಷ್ ಬಜಾಲ್, ಮನೋಜ್ ವಾಮಂಜೂರು, ವಸಂತಿ ಕುಪ್ಪೆಪದವು, ರಫೀಕ್ ಹರೇಕಳ, ಪ್ರಮೀಳಾ ಶಕ್ತಿನಗರ, ರಾಧಾ ಮೂಡಬಿದ್ರೆ, ಈಶ್ವರೀ ಬೆಳ್ತಂಗಡಿಯವರನ್ನು ಆರಿಸಲಾಯಿತು.

ನೂತನ ಜಿಲ್ಲಾ ಸಮಿತಿಗೆ ಶೇಖರ್ ಕುಂದರ್ ಕುತ್ತಾರ್ ರವರು ಖಾಯಂ ಆಹ್ವಾನಿತರಾಗಿ ಆಯ್ಕೆಗೊಂಡರು. ಜೆ ಬಾಲಕ್ರಷ್ಣ ಶೆಟ್ಟಿಯವರನ್ನು ವಿಶೇಷ ಆಹ್ವಾನಿತರನ್ನಾಗಿ ಆಯ್ಕೆಗೊಳಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News