ಭಾರತೀಯ ಮಹಿಳಾ ಒಕ್ಕೂಟ (ಎನ್‌ ಎಫ್‌ ಐ ಡಬ್ಲ್ಯೂ) ಜಿಲ್ಲಾ ಸಮಾವೇಶ

Update: 2023-11-21 10:19 GMT

ಬಂಟ್ವಾಳ : ಇತ್ತೀಚಿಗಿನ ಎರಡು ದಶಕಗಳಿಂದೀಚೆಗೆ ಸ್ತ್ರೀಯರು ಉತ್ತಮ ಶಿಕ್ಷಣ ಪಡೆದು ಎಷ್ಟೇಷ್ಟೋ ದೊಡ್ಡ ಹುದ್ದೆಗಳನ್ನು ಪಡೆದಿದ್ದರೂ ಅವರಿಗೆ ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮುಂದೆ ಬರಲು ಬಿಡದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಚಿಂತಕಿ ಡಾ. ವೀಣಾ ತೋಳ್ಪಾಡಿ ಅಭಿಪ್ರಾಯ ಪಟ್ಟರು.

ಅವರು ಬಿಸಿ.ರೋಡಿನ ಪ್ರೀತಿ ಕಾಂಪ್ಲೆಕ್ಸ್‌ ನಲ್ಲಿ ನಡೆದ ಭಾರತೀಯ ಮಹಿಳಾ ಒಕ್ಕೂಟ(ಎನ್‌ ಎಫ್‌ ಐ ಡಬ್ಲ್ಯೂ) ಇದರ ಜಿಲಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ನಮ್ಮ ಸಮಾಜ ಮಹಿಳೆಯರನ್ನು ಅಬಲೆ ಎಂದು ಪರಿಗಣಿಸಿ ಅವಳನ್ನು ಮುಂದೆ ಬಾರದಂತೆ ತಡೆಯುತ್ತದೆ. ಮಹಿಳೆ ಕೇವಲ ಅಡುಗೆ ಮನೆಗೆ ಸೀಮಿತ ಎಂಬಂತೆ ಪರಿಗಣಿಸಲಾಗುತ್ತಿದೆ. ಇಂತಹ ತಾರತಮ್ಯ ದೂರವಾಗದೇ ಸಮಾಜದ ಸುಧಾರಣೆ ಅಸಾಧ್ಯ. ಪುರಾಣದಲ್ಲಿ ಹೇಳಿರುವಂತೆ ಸ್ತ್ರೀ ಯನ್ನು ಬರೇ ದೇವಿ ಎಂದು ಪೂಜಿಸಿದರೆ ಸಾಲದು ಅವಳಿಗೂ ಸಮಾಜದಲ್ಲಿ ಸಮಾನತೆ ಹಕ್ಕು ನೀಡಬೇಕಾಗಿದೆ. ಆಗ ಮಾತ್ರ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯ. ಎಂದು ಅವರು ದೇಶದ ಸಂವಿಂಧಾನ ಸರ್ವ ಜನರಿಗೂ ಯಾವುದೇ ತಾರತಮ್ಯವಿಲ್ಲದೆ ಸ್ವಾತಂತ್ರ್ಯ ,  ಸಮಾನತೆ , ಸ್ವಾಭಿಮಾನ, ಘನತೆಯ ಬದುಕಿನ ಹಕ್ಕುಗಳನ್ನು ಒದಗಿಸಿಕೊಟ್ಟಿದೆ. ಆದರೆ ಇಂದು ಸಂವಿಂಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದನ್ನು ನಾವು ಕಾಣುತ್ತಿದ್ದೇವೆ, ಈ ನಿಟ್ಟಿನಲ್ಲಿ ಮಹಿಳೆಯು ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಪೂರಕವಾಗಿ ಸಂವಿಂಧಾನದ ಆಶಯಗಳನ್ನು ಉಳಿಸಿಕೊಳ್ಳುಂಡು ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿದೆ. ಭೌತಿಕ ಶಿಕ್ಷಣಕ್ಕಿಂತಲೂ ಅರಿವಿನ ಶಿಕ್ಷಣದ ಕಡೆಗೆ ತೊಡಗಿಸಿಕೊಳ್ಳಬೇಕಿದೆ ಎಂದರು.

ಯುವ ನ್ಯಾಯವಾದಿ ಸುರೇಶ ಕುಮಾರ್‌ ನಾವೂರು ಸಮಾನ ವೇತನ ಕಾಯ್ದೆ, ಲಿಂಗ ತಾರತಮ್ಯ ಕಾಯ್ದೆ, ಮೊದಲಾದ ಹಲವು ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು.

ಸಂಘಟನೆಯ ರಾಜ್ಯ ಕಾರ್ಯದರ್ಶಿ ಭಾರತಿ ಪ್ರಶಾಂತ್‌ ರವರು ಭಾರತೀಯ ಮಹಿಳಾ ಒಕ್ಕೂಟದ ಇತಿಹಾಸ ದ ಬಗ್ಗೆ ಮಾತನಾಡಿ 1954 ರಲ್ಲಿ ಜನ್ಮ ತಾಳಿದ ಭಾರತೀಯ ಮಹಿಳಾ ಒಕ್ಕೂಟ ಎಂಬ ಐತಿಹಾಸಿಕ ಸಂಘಟನೆಯು ಶಾಂತಿ, ಸೌಹಾರ್ಧತೆ, ಸಹಬಾಳ್ವೆಗಾಗಿ, ಸಂವಿಂಧಾನದ ರಕ್ಷಣೆಗಾಗಿ, ಮಹಿಳೆಯರ ಸಮಾನ , ಸ್ವಾಭಿಮಾನಿ, ಘನತೆಯ ಬದುಕಿನ ಹಕ್ಕುಗಳ ರಕ್ಷಣೆಗಾಗಿ ಪಣತೊಟ್ಟು ಕೆಲಸಮಾಡುತ್ತಿದೆ. ಸಂಸತ್ತು ಶಾಸನ ಸಭೆಗಳಲ್ಲಿ ಮಹಿಳೆಯತರಿಗೆ ಶೇ.33 ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಸರ್ಕಾರ ಸಂಸತ್ತಿನಲ್ಲಿ ಮಂಡಿಸಬೇಕು ಎಂದು ಎನ್‌ ಎಫ್‌ ಐ ಡಬ್ಲ್ಯೂ ಸುಪ್ರೀಂ ಕೋರ್ಟಿನಲ್ಲಿ ರಿಟ್‌ ಅರ್ಜಿ ಹಾಗಿದ ನಂತರ ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ಛೀಮಾರಿ ಹಾಕಿ ಬಳಿಕವಷ್ಟೇ ಈ ಮಸೂದೆಯನ್ನು ಸಂಸತ್ತಿನಲ್ಲಿ ಪಾಸ್‌ ಮಾಡಲಾಗಿದೆ. ಆದರೆ ಅದನ್ನು ಸದ್ಯ ಜಾರಿಗೊಳಿಸದೇ 2029 ರ ವರೆಗೆ ಕಾಯಬೇಕೆಂದು ಕೆಲವು ಷರತ್ತುಗಳನ್ನು ಕೇಂದ್ರ ಸರಕಾರ ಹಾಕಿ ಮಹಿಳೆಯರಿಗೆ ಅನ್ಯಾಯ ಮಾಡುತ್ತಿದೆ ಎಂದರು.

ಸಂಘಟನೆಯ ಜಿಲ್ಲಾನಾಯಕಿ ಸುಲೋಚನಾ ಕವತ್ತಾರು ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು

ಎಐಟಿಯುಸಿ ರಾಜ್ಯ ಮುಂದಾಳು ಬಿ.ಶೇಖರ್‌ ಮಾತನಾಡಿದರು.

ಸಂಘಟನೆಯ ಸಹ ಕಾರ್ಯದರ್ಶೀ ಶಮಿತಾ ಸ್ವಾಗತಿಸಿ, ಮಮತಾ ವಂದಿಸಿದರು. ಪ್ರಧಾನ ಕಾರ್ಯದರ್ಶೀ ಕೇಶವತಿ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News