ಅಳಕೆಮಜಲು ಜಮಾಅತ್ ಖಾಝಿಯಾಗಿ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಅಧಿಕಾರ ಸ್ವೀಕಾರ
ಬಂಟ್ವಾಳ : ಅಳಕೆಮಜಲು ಮುಹಿಯುದ್ದೀನ್ ಜುಮಾ ಮಸೀದಿಯ ಜಮಾಅತ್ ಖಾಝಿಯಾಗಿ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅಧಿಕಾರ ಸ್ವೀಕರಿಸಿದರು.
40 ವರ್ಷಗಳ ಕಾಲ ತಾಜುಲ್ ಉಲಮಾ ಉಳ್ಳಾಲ ತಂಙಳ್ ಬಳಿಕ 11 ವರ್ಷ ಕೂರತ್ ತಂಙಳ್ ರವರು ಅಳಕೆಮಜಲು ಮಸೀದಿಯ ನೇತೃತ್ವ ವಹಿಸಿದ್ದರು. ಪ್ರಸ್ತುತ ಕೂರ ತಂಙಳ್ ಅವರ ಪುತ್ರ ಸಯ್ಯಿದ್ ಅಬ್ದುಲ್ ರಹ್ಮಾನ್ ಮಸೂದ್ ತಂಙಳ್ ಜಮಾಅತಿನ ಗೌರವಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇವರ ಸಲಹೆಯಂತೆ ಮರ್ಕಝುಸ್ಸಖಾಫತಿಸ್ಸುನ್ನಿಯ್ಯ ಕಾರಂದೂರು ಇದರ ಮುಖ್ಯ ಸದನದಲ್ಲಿ ಜಮಾಅತಿನ ಪ್ರಮುಖ ನೇತಾರರ ಸಮ್ಮುಖದಲ್ಲಿ ಕಾಂತಪುರಂ ಎ.ಪಿ. ಉಸ್ತಾದರನ್ನು ಖಾಝಿಯಾಗಿ "ಬಯ್ಅತ್" ಮಾಡಲಾಯ್ತು. ಇದೇ ವೇಳೆ ಮಸೀದಿ ಗೌರವಾಧ್ಯಕ್ಷ ಸಯ್ಯಿದ್ ಮಸೂದ್ ತಂಗಳ್ ಅವರಿಗೆ ಜಮಾಅತಿನ ಉಸ್ತುವಾರಿಯನ್ನು (ನಾಯಿಬ್ ಖಾಝಿ) ವಹಿಸಿಕೊಡಲಾಯಿತು.
ಈ ಸಂದರ್ಭದಲ್ಲಿ ಜಮಾಅತ್ ಅದ್ಯಕ್ಷ ಹಾಜಿ ಅಬ್ದುರ್ರಹ್ಮಾನ್, ಉಪಾದ್ಯಕ್ಷ ಹಾಜಿ ಅಬ್ದುಲ್ ರಝಾಕ್, ಕಾರ್ಯದರ್ಶಿ ಹಾಜಿ ಮಹಮ್ಮದ್ ಕುಂಞಿ, ಕೋಶಾಧಿಕಾರಿ ಹಾಜಿ ಅಬ್ದುಲ್ ರಹಿಮಾನ್, ಪ್ರಮುಖರಾದ ರಫೀಕ್ ಸಹದಿ ಅಳಕೆಮಜಲು, ಹಾಜಿ ಮುಹಮ್ಮದ್ ಅಲ್ ಖಾಸಿಮಿ ಶಾಕಿರ್ ಅಳಕೆಮಜಲು, ನಾಸಿರ್ ಕೋಲ್ಪೆ, ಅಬೂಬಕ್ಕರ್ ನಡುಮಜಲು, ಅಬೂಬಕ್ಕರ್ ಕಟ್ಟ, ಮೊಯಿದು ಕುಂಞಿ ಅಂತರಗುತ್ತು ಹಾಗೂ ಇಸ್ಮಾಯಿಲ್ ಕೋಣಿಮಾರ್ ಉಪಸ್ಥಿತರಿದ್ದರು.