ದ.ಕ. ಜಮೀಯತೆ ಅಹ್ಲೆ ಹದೀಸ್ ಮಹಾಸಭೆ
ಮಂಗಳೂರು, ಡಿ.25: ದ.ಕ.ಜಮೀಯತೆ ಅಹ್ಲೆ ಹದೀಸ್ ಇದರ ನಾಲ್ಕನೆ ಮಹಾಸಭೆಯು ಕರ್ನಾಟಕ-ಗೋವಾ ರಾಜ್ಯಾಧ್ಯಕ್ಷ ಶೇಖ್ ಅಬ್ದುಲ್ ವಹಾಬ್ ಜಾಮಿಈ ಅವರ ಅಧ್ಯಕ್ಷತೆಯಲ್ಲಿ ರವಿವಾರ ನಡೆಯಿತು. ಮುಖ್ಯ ಅತಿಥಿಯಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಸ್ಲಂ ಖಾನ್ ಭಾಗವಹಿಸಿದ್ದರು.
ಜಮೀಯತೆ ಅಹ್ಲೆ ಹದೀಸ್ ಇದರ ದ.ಕ.ಜಿಲ್ಲಾಧ್ಯಕ್ಷರಾಗಿ ನಜ್ಮುದ್ದೀನ್ ಅಸ್ಸಾದಿ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಸ್ಸಲಾಂ ಕಾಟಿಪಳ್ಳ, ಕೋಶಾಧಿಕಾರಿಯಾಗಿ ಮುಹಮ್ಮದ್ ನದೀಮ್, ಉಪಾಧ್ಯಕ್ಷರಾಗಿ ಇಬ್ರಾಹೀಂ ನಝೀರ್, ಅಶ್ಫಾಕ್ ಪೆರ್ಮುದೆ, ಅಬ್ದುಲ್ ಜಬ್ಬಾರ್ ಕೊಳ್ನಾಡು, ಜಂಟಿ ಕಾರ್ಯದರ್ಶಿಯಾಗಿ ಅರ್ಶದ್ ಅಮೀನ್, ಮುಹಮ್ಮದಾಲಿ ಬಿಕರ್ನಕಟ್ಟೆ, ರಿಝ್ವಾನ್ ಪಂಜಿಮೊಗರು, ಅಬ್ದುಲ್ ಹಮೀದ್ ಕಾನ, ದಾವಾ ಕಾರ್ಯದರ್ಶಿಯಾಗಿ ಅಬ್ದುಲ್ ಸಮದ್ ಬಜಾಲ್ ಹಾಗೂ 36 ಮಂದಿ ಯನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಹಾಫಿಝ್ ಮುಹಮ್ಮದ್ ಯಾಸೀನ್ ಕುರ್‌ಆನ್ ಪಠಿಸಿದರು. ಮುಹಮ್ಮದ್ ನದೀಂ ಸ್ವಾಗತಿಸಿದರು. ಅಬ್ದುಸ್ಸಲಾಂ ಕಾಟಿಪಳ್ಳ ವರದಿ ವಾಚಿಸಿದರು. ಮಕ್ಸೂದ್ ಅಹ್ಮದ್ ಉಮರಿ ಕಾರ್ಯಕ್ರಮ ನಿರೂಪಿಸಿದರು.