ವಚನ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಅರವಿಂದ ಜತ್ತಿ ಆಯ್ಕೆ
Update: 2024-12-25 15:12 GMT
ಮಂಗಳೂರು: ನಗರದ ಪುರಭವನದಲ್ಲಿ ಜ.4ರಂದು ಜರುಗಲಿರುವ ʼರಾಜ್ಯಮಟ್ಟದ ವಚನ ಸಾಹಿತ್ಯ ಸಮ್ಮೇಳನ’ದ ಸಮ್ಮೇಳನಾಧ್ಯಕ್ಷರಾಗಿ ಭಾರತದ ಮಾಜಿ ಉಪರಾಷ್ಟ್ರಪತಿಯಾಗಿದ್ದ ದಿ. ಬಿ.ಡಿ. ಜತ್ತಿಯ ಪುತ್ರ ಡಾ. ಅರವಿಂದ ಜತ್ತಿ ಆಯ್ಕೆಗೊಂಡಿದ್ದಾರೆ.
ಆಟೋಮೊಬೈಲ್ ಇಂಜಿನಿಯರಿಂಗ್ ಪದವೀಧರರಾಗಿರುವ ಇವರು, ಜತ್ತಿ ಮೋಟಾರ್ಸ್ ಸಂಸ್ಥೆಯ ಸ್ಥಾಪಕರು. ಬೆಂಗಳೂರಿನ ಹೃದಯ ಭಾಗದಲ್ಲಿ ಅಶ್ವಾರೂಢ ಬಸವೇಶ್ವರರ ಕಂಚಿನ ಪ್ರತಿಮೆ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಸಿರುವ ಅರವಿಂದ ಜತ್ತಿ ಅವರು ಬಸವ ಪ್ರಜ್ಞೆ ಹಾಗೂ ವಚನ ಪ್ರಜ್ಞೆಯ ವಿಕಾಸಕ್ಕಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಅಂತರರಾಜ್ಯ ಮಟ್ಟದಲ್ಲಿ ಹಮ್ಮ್ಮಿಕೊಂಡಿದ್ದರು ಎಂದು ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ ಕಲ್ಕೂರ ಮತ್ತು ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘದ ಅಧ್ಯಕ್ಷೆ ಸುಮಾ ಅರುಣ್ ಮಾನ್ವಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.