ಹಳೆಯಂಗಡಿ: ಇಂದಿರಾನಗರ ಅಲ್ ಮದರಸತುಲ್‌ ಖಿಲ್ ರಿಯಾದಲ್ಲಿ ಸ್ವಲಾತ್ ವಾರ್ಷಿಕೋತ್ಸವ

Update: 2023-12-10 16:29 GMT

ಹಳೆಯಂಗಡಿ: ಹೊಸಂಗಡಿ ಕದಿಕೆ ಜಮಾತಿಗೆ ಒಳಪಟ್ಟ ಅಲ್ ಮದರಸತುಲ್‌ ಖಿಲಿಯಾ, ಇಂದಿರಾನಗರ, ಹಳೆಯಂಗಡಿ ಇದರ ವತಿಯಿಂದ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ 31ನೇ ಸ್ವಲಾತ್ ವಾರ್ಷಿಕ, ಖಿಲಿಯಾ ಮೌಲೂದು ಮಕ್ಕಳ ಸಾಹಿತ್ಯ ಸ್ಪರ್ಧೆಯೂ ಮರ್ಹೂಂ ಎಚ್.ಕೆ ಅಬ್ದುಲ್ಲಾ ಉಸ್ತಾದ್ ವೇದಿಕೆಯಲ್ಲಿ ರವಿವಾರ ನಡೆಯಿತು.

ಸುಬುಹಿ ನಮಾಝಿನ ಬಳಿಕ ಖಿಲಿಯಾ ಮೌಲೂದು ಪಾರಾಯಣ, ಮಧ್ಯಾಹ್ನ 2ಗಂಟೆಗೆ ಮಕ್ಕಳ ಕಲಾ ಸಾಹಿತ್ಯ ಸ್ಪರ್ಧೆ, ಮಗ್ರಿಬ್ ನಮಾಝಿನ ಬಳಿಕ ಆನೆಕಲ್ ನ ಸೈಯ್ಯದ್ ಇಬ್ರಾಹಿಂ ಬಾದುಷಾ ತಂಜಲ್ ಅಲ್‌ಝರಿ ಅವರ ನೇತೃತ್ವದಲ್ಲಿ ಸ್ವಲಾತ್ ಮಜ್ಲಿಸ್ ನಡೆಯಿತು.

ಮಗ್ರಿಬ್ ನಮಾಝ್ ನ ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಸಾಗ್ ಬದ್ರಿಯಾ ಜುಮಾ ಮಸೀದಿಯ ಖತೀಬ್ ಇ.ಎಂ. ಅಬ್ದುಲ್ಲಾ ಮದನಿ ಅವರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಹಳೆಯಂಗಡಿ ಕೇಂದ್ರ ಕದಿಕೆ ಜುಮಾ ಮಸೀದಿ ಖತೀಬ್ ಪಿ.ಎ ಅಬ್ದುಲ್ಲಾ ಬಡಗನ್ನೂರು ವಹಿಸಿದ್ದರು. ಬೊಳ್ಳೂರು ಮುಹಿಯುದ್ದೀನ್ ಜುಮಾ ಮಸೀದಿ ಖತೀಬ್ ಅಲ್‌ಹಾಜ್ ಮುಹಮ್ಮದ್ ಅಝರ್ ಫೈಝಿ ಬೊಳ್ಳೂರು ಉಸ್ತಾದ್ ದುಆ ಆಶಿರ್ವಚನಗೈದರು.

ಸಂತೆಕಟ್ಟೆ ಹಿಮಾಯತುಲ್ ಇಸ್ಲಾಂ ಜುಮಾ ಮಸೀದಿಯ ಖತೀಬ್ ಕೆ.ಎಂ. ಅಬೂಬಕರ್ ಮದನಿ ಮತ್ತು ಬೊಳ್ಳೂರು ಮುಹಿಯುದ್ದೀನ್ ಜುಮಾ ಮಸೀದಿಯ ಮುದರ್ರಿಸ್ ಮುಹಮ್ಮದ್ ಆರೀಫ್ ಬಾಖವಿ ಕೊಪ್ಪ ಪ್ರಾಸ್ತಾವಿಕ ಮಾತನಾಡಿದರು.

ಇದೇ ಸಂದರ್ಭ ಮದರಸತುಲ್‌ ಖಿಲಿಯಾ ಇಂದಿರಾನಗರ ಇದರ ಅಭಿವೃದ್ಧಿಗಾಗಿ ಶ್ರಮಿಸಿದ ಹಿರಿಯರಾದ ಎಸ್. ಮುಹಮ್ಮದ್ , ಎಚ್. ಇಬ್ರಾಹೀಂ, ಸುಲೈಮಾನ್ ಇಂದಿರಾನಗರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಕದಿಕೆ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಅಬ್ದುಲ್ ರೆಹಮಾನ್ ಕುಡುಂಬೂರು, ಪ್ರಧಾನ ಕಾರ್ಯ ದರ್ಶಿ ಎಚ್.ಕೆ. ಮುಹಮ್ಮದ್ ಕದಿಕೆ, ಇಂದಿರಾನಗರದ ಅಲ್ ಮದರಸತುಲ್‌ ಖಿಲಿಯಾ ಅಧ್ಯಕ್ಷ ಯೂಸುಫ್ ಇಂದಿರಾ ನಗರ, ಸಂತೆಕಟ್ಟೆ ಹಿಮಾಯತುಲ್ ಇಸ್ಲಾಂ ಜುಮಾ ಮಸೀದಿಯ ಅಧ್ಯಕ್ಷ ಅಶ್ರಫ್ ಪಡುತೋಟ, ಸಾಗ್ ಬದ್ರಿಯಾ ಜುಮಾ‌ ಮಸೀದಿಯ ಅಧ್ಯಕ್ಷ ಮುಸ್ತಫಾ, ಹಾಜಿ ಬಶೀರ್ ಕಲ್ಲಾಪು, ಹಾಜಿ ಬಿ.ಎಚ್. ಅಬ್ದುಲ್ ಖಾದರ್ ಎ.ಕೆ. ಜೀಲಾನಿ, ಎಂ.ಎಚ್. ಖಾಸಿಂ ಸಾಹೇಬ್, ಅಬ್ದುಲ್ ರಝಾಕ್, ಹಳೆಯಂಗಡಿ ಗ್ರಾ.ಪಂ. ಸದಸ್ಯರಾದ ಎಂ.ಎ. ಅಬ್ದುಲ್ ಖಾದರ್, ಅಬ್ದುಲ್ ಅಝೀಝ್ ಐ.ಎ.ಕೆ., ನಝೀರ್ ಎಂ.ಎಂ., ಎಸ್.‌ಮುಹಮ್ಮದ್ ಇಂದಿರಾನಗರ, ಕಲಂದರ್ ಕೌಶಿಕ್, ಹಾಜಿ ಶೇಖ್ ಅಬ್ದುಲ್ಲಾ ಕಲ್ಲಾಪು, ಇಮ್ತಿಯಾಝ್ ಅಲ್ ಅಕ್ಸಾ ಲೇಔಟ್ ಕೆ.ಎ. ಅಬೂಬಕರ್ ಇಂದಿರಾನಗರ, ಮೊದಲಾದವರು ಉಪಸ್ಥಿತರಿದ್ದರು.

ಮದರಸತುಲ್‌ ಖಿಲಿಯಾದ ಸದರ್ ಮುಅಲ್ಲಿಂ ಇಮ್ರಾನ್ ಮಕ್ದೂಮಿ ಕೃಷ್ಣಾಪುರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ದರು. ಮದರಸತುಲ್‌ ಖಿಲಿಯಾದ ಮುಅಲ್ಲಿಂ ಮುಹಮ್ಮದ್ ಶಮ್ಮಾಸ್ ಮಆಲಿ ಬದಿಯಡ್ಕ ಕಿರಾಅತ್ ಪಠಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News