ಪಂಬದ ಸಮುದಾಯದ ಅಧ್ಯಯನಕ್ಕೆ ‘ಪೀಠ’ದ ಅಗತ್ಯವಿದೆ: ಯು.ಟಿ. ಖಾದರ್

Update: 2024-01-21 12:25 GMT

ಮಂಗಳೂರು : ಪಂಬದ ಸಮಾಜವು ಕರಾವಳಿಯ ದೈವರಾಧನೆ ಮೂಲ ಸಂಸ್ಕೃತಿಯನ್ನು ಉಳಿಸುತ್ತಿದೆ. ಅದರ ಜೊತೆಗೆ ಮುಂದಿನ ಪೀಳಿಗೆಗೆ ಆ ಸಂಸ್ಕೃತಿಯನ್ನು ಪರಿಚಯಿಸುವ ಕೆಲಸವನ್ನು ಮಾಡುತ್ತಿದೆ. ಪಂಬದ ಸಮಾಜದ ಪರಂಪರೆ ಮತ್ತು ಸಂಸ್ಕೃತಿಯ ಬಗ್ಗೆ ಆಳವಾದ ಅಧ್ಯಯನ ನಡೆಸಬೇಕಾದರೆ ಪಂಬದರ ಅಧ್ಯಯನ ಪೀಠ ಸ್ಥಾಪಿಸಬೇಕಿದೆ. ಈ ನಿಟ್ಟಿನಲ್ಲಿ ತಾನು ಸಂಪೂರ್ಣ ಸಹಕಾರ ನೀಡುವೆ ಎಂದು ರಾಜ್ಯ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಹೇಳಿದರು.

ಪಂಬದರ ಅಭ್ಯುದಯ ಯುವಜನ ಸೇವಾ ಟ್ರಸ್ಟ್ ಪಡುಪೆರಾರ, ತುಳುವ ಬೊಳ್ಳಿ ಪ್ರತಿಷ್ಠಾನ, ಪಂಬದರ ಯಾನೇ ದೈವಾ ದಿಗರ ಸಮಾಜ ಸಂಘ ವತಿಯಿಂದ ನಗರದ ಪುರಭವನದಲ್ಲಿ ರವಿವಾರ ನಡೆದ ‘ಪಂಬದೆರೆನಾ ಸಮಾವೇಶ-ಸಿರಿಮುಡಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಶಿಕ್ಷಣ, ಮೂಲಭೂತ ಸೌಕರ್ಯವಿಲ್ಲದಿದ್ದರೂ ಕೂಡ ತುಳುನಾಡಿನ ದೈವದ ಸಂಸ್ಕೃತಿ ಉಳಿಸಲು ಪಟ್ಟ ಶ್ರಮ ನಿಜಕ್ಕೂ ಮಾದರಿಯಾಗಿದೆ. ಯಾವುದೇ ಲಿಪಿಯಿಲ್ಲದೆ ತುಳು ಭಾಷೆ ಇಷ್ಟು ಸಮೃದ್ಧಿಯಾಗಿ ಬೆಳೆಯಬೇಕಾದರೆ ಅದಕ್ಕೆ ಸಮುದಾ ಯದ ಕೊಡುಗೆ ಸಾಕಷ್ಟಿದೆ. ಆಧುನಿಕ, ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಮೆಟ್ಟಿನಿಂತು ಈ ಕಲೆ ಬೆಳೆದಿದೆ ಎಂದು ಯು.ಟಿ. ಖಾದರ್ ಹೇಳಿದರು.

ಕೇಮಾರು ಸಾಂದೀಪನಿ ಮಠದ ಶ್ರೀಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಿದರು. ದುರ್ಗಾದಾಸ್ ಶೆಟ್ಟಿ ಮಾವಂತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸದ ನಳಿನ್ ಕುಮಾರ್ ಕಟೀಲು, ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಅರ್ಚಕರಾದ ಹರಿನಾರಾಯಣ ಆಸ್ಟಣ್ಣ, ಅನಂತಪದ್ಮನಾಭ ಕ್ಷೇತ್ರದ ಕೃಷ್ಣರಾಜ ತಂತ್ರಿ, ಮಂಗಳೂರು ಮೇಯರ್ ಸುಧೀರ್ ಶೆಟ್ಟಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖ ಪ್ರಕಾಶ್ ಪಿ.ಎಸ್., ಎಳತ್ತೂರು ಗುತ್ತುವಿನ ಬಾಲಕೃಷ್ಣ ಯಾನೆ ಶಂಕರ್ ರೈ, ಸಂಸ್ಕಾರ ಭಾರತಿಯ ಅಧ್ಯಕ್ಷ ಪುರುಷೋತ್ತಮ ಅಡ್ಯಾರ್, ಕುಲಶೇಖರ ಧರ್ಮಶಾಸ್ತ ಮಂದಿರ ಟ್ರಸ್ಟ್‌ನ ಅಧ್ಯಕ್ಷ ರಾಮ್‌ಪ್ರಸಾದ್, ಅಬ್ಬಕ್ಕ ಉತ್ಸವ ಸಮಿತಿಯ ಮುಖ್ಯಸ್ಥ ದಿನಕರ್ ಉಳ್ಳಾಲ್, ತಿದ್ಯೆ ಕಂಬಳ ಗುತ್ತಿನ ಮುಖ್ಯಸ್ಥ ಭಾಸ್ಕರ್ ಶೆಟ್ಟಿ, ಕಂಬಳ ಸಮಿತಿ ಗೌರವಾಧ್ಯಕ್ಷ ತಾರಾನಾಥ್, ಉದ್ಯಮಿ ಸಂತೋಷ್ ಕುಮಾರ್, ನವೀನ್ ಶೆಟ್ಟಿ ಎಡ್ಮೆಮ್ಮಾರ್, ಗಣೇಶ್ ಕೊಪ್ಪ, ಹರೀಶ್ ಪ್ರಸಾದ್, ದಕ್ಷಿಣ ವಲಯದ ಡಿಪಿಎಸ್ ಟಿ.ಎಸ್. ಅಶ್ವತ್ಥ ನಾರಾಯಣ್, ಹಿರಿಯ ಅಂಚೆ ಅಧಿಕಾರಿ ಸುಧಾಕರ್ ಮಲ್ಯ, ಪಡ್ಯೋಡಿಗುತ್ತು ಶಿಶಿರ್ ಶೆಟ್ಟಿ, ಕುಟ್ಟಿ ಪಂಬದರು ಉಪಸ್ಥಿತರಿದ್ದರು.

ತುಳು ಅಕಾಡಮಿಯ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಸ್ವಾಗತಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News