ರಾಮಕೃಷ್ಣ ಮಠದಿಂದ ಸ್ವಚ್ಛ ಮಂಗಳೂರು ಅಭಿಯಾನ

Update: 2024-02-11 17:00 GMT

ಮಂಗಳೂರು: ರಾಮಕೃಷ್ಣ ಸ್ವಚ್ಛ ಮಂಗಳೂರು ಅಭಿಯಾನದ ೫ನೇ ತಿಂಗಳ ಕಾರ್ಯಕ್ರಮದಲ್ಲಿ ನಗರದ ಸರ್ವೀಸ್ ಬಸ್ ಸ್ಟ್ಯಾಂಡ್ ಪರಿಸರವನ್ನು ಶ್ರಮದಾನ ಮೂಲಕ ಸ್ವಚ್ಛಗೊಳಿಸಲಾಯಿತು.

ಫಿಲಿಪೈನ್ಸ್ ದೇಶದ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಅವರ ಸಾನಿಧ್ಯದಲ್ಲಿ ಎಂ.ಆರ್.ಪಿ.ಎಲ್ ಸಂಸ್ಥೆಯ ಚೀಫ್ ಜನರಲ್ ಮ್ಯಾನೇಜರ್ ಮನೋಜ್ ಕುಮಾರ್ ಮತ್ತು ಕ್ರೆಡಾಯ್ ಸಂಘದ ಅಧ್ಯಕ್ಷ ವಿನೋದ್ ಪಿಂಟೋ ಜಂಟಿಯಾಗಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

ಈ ಸಂದರ್ಭ ಮಹಾಪೌರರಾದ ಸುಧೀರ್ ಶೆಟ್ಟಿ ಕಣ್ಣೂರು, ಕ್ಯಾ. ಗಣೇಶ್ ಕಾರ್ಣಿಕ್ ಮತ್ತು ಡಾ. ಧನೇಶ್ ಕುಮಾರ್ ಉಪಸ್ಥಿತರಿದ್ದರು.

ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ಪ್ರಾಧ್ಯಾಪಕ ಡಾ. ಪುರುಷೋತ ್ತಮ, ಡಾ. ನೇಹಾ ಶೆಟ್ಟಿ ಮತ್ತು ಡಾ. ನಿತ್ಯಾಲ್ ಕುಮಾರ್ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ಅನಧಿಕೃತ ಬ್ಯಾನರ್ ಮತ್ತು ಕಸದ ರಾಶಿಗಳನ್ನು ತೆರವುಗೊಳಿಸಿದರು.

ಹಿರಿಯ ಸ್ವಯಂಸೇವಕರುಗಳಾದ ವಿಠ್ಠಲ್‌ದಾಸ್ ಪ್ರಭು,ಮೆಹಬೂಬ್, ಅವಿನಾಶ್, ಸತ್ಯನಾರಾಯಣ.ಕೆ.ವಿ, ಶಿವರಾಂ, ಬಾಲಕೃಷ್ಣ ಟ್, ಅನಿರುಧ್ ನಾಯಕ್ ಫುಟ್‌ಪಾತ್ ಮತ್ತು ಒಳಚರಂಡಿಗಳಲ್ಲಿ ತುಂಬಿದ್ದ ಕಸದ ರಾಶಿಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಿದರು.

ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದ ತಾತ್ಕಾಲಿಕ ಶೆಲ್ಟರ್ ತೆರವುಗೊಳಿಸುವುದರಲ್ಲಿ ಸ್ವಯಂಸೇವಕರುಗಳಾದ ಉಮಾನಾಥ್ ಕೋಟೆಕಾರ್, ವಸಂತಿ ನಾಯಕ್, ರಾಜೀವಿ ಚಂದ್ರಶೇಖರ, ಸುನಂದಾ ಶಿವರಾಂ, ನಾಗೇಶ್ ಸರಿಪಳ್ಳ, ಕಿರಣ್ ಫನಾರ್ಂಡಿಸ್, ತಾರಾನಾಥ್ ಆಳ್ವ ಕೈಜೋಡಿಸಿದರು.

ಸರ್ವೀಸ್ ಬಸ್ ಸ್ಟ್ಯಾಂಡಡ್ ಗೋಡೆಯನ್ನು ಟ್ಯಾಂಕರ್ ಮೂಲಕ ನೀರು ಹಾಯಿಸಿ ಸ್ವಚ್ಛ್ಛಗೊಳಿಸಲು ಸೌರಜ್ ಮತ್ತು ಬಾಲಕೃಷ್ಣ ಭಟ್ ಸಹಕರಿಸಿದರು.ಸ್ವಯಂಸೇವಕರಾದ ಕಮಲಾಕ್ಷ ಪೈ, ಡಾ. ಸದಾನಂದ, ಮುಕೇಶ್ ಆಳ್ವ, ಡಾ. ತನಿಷ್ಕಾ, ಬಬಿತಾ ಶೆಟ್ಟಿ, ಪ್ರಕಾಶ್ ಎಸ್. ಟಿ, ಶಾಯಿಲ್, ಕೇದಾರ್, ನೈತಿಕ್ ಶೆಟ್ಟಿ ಹಾಗೂ ಎ. ಜೆ. ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಜೊತೆಗೂಡಿ ಗೋಡೆಗೆ ಬಣ್ಣ ಬಳಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News