ದ.ಕ., ಉಡುಪಿ ಜಿಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳ ಕ್ರೀಡಾಕೂಟ: ಉಪ್ಪಿನಂಗಡಿ ಗ್ರಾ.ಪಂ. ಚಾಂಪಿಯನ್

Update: 2024-02-13 12:30 GMT

ಉಪ್ಪಿನಂಗಡಿ: ಉಡುಪಿ ಜಿಲ್ಲೆಯ ಕೋಟತಟ್ಟು ಗ್ರಾಮ ಪಂಚಾಯತ್ ಹಾಗೂ ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಜಂಟಿಯಾಗಿ ಸ್ಥಳೀಯಾಡಳಿತ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಲಾದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳ ಪಂಚಾಯತ್‍ರಾಜ್ ಮತ್ತು ನಗರ ಸ್ಥಳೀಯಾಡಳಿತ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ `ಹೊಳಪು- 2024 ಗ್ರಾಮ ಸರಕಾರದ ದಿಬ್ಬಣ' ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಗ್ರಾ.ಪಂ. ಸಮಗ್ರ ಚಾಂಪಿಯನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಉಪ್ಪಿನಂಗಡಿ ಗ್ರಾ.ಪಂ. ಸದಸ್ಯರಾದ ಸಂಜೀವ ಮಡಿವಾಳ ಯಾನೆ ಸಣ್ಣಣ್ಣ ರಿಂಗ್ ಇನ್‍ದ ವಿಕೆಟ್‍ನಲ್ಲಿ ಪ್ರಥಮ, ಸುರೇಶ್ ಅತ್ರೆಮಜಲು ಸೂಪರ್ ಮಿನಿಟ್‍ನಲ್ಲಿ ಪ್ರಥಮ, ಕಾರ್ಯದರ್ಶಿ ಗೀತಾ ಶೇಖರ್ ರಿಂಗ್ ಇನ್ ದ ವಿಕೆಟ್‍ನಲ್ಲಿ ದ್ವಿತೀಯ, ಸಿಬ್ಬಂದಿ ಇಕ್ಬಾಲ್ ರಿಂಗ್ ಇನ್‍ದ ವಿಕೆಟ್‍ನಲ್ಲಿ ದ್ವಿತೀಯ ಹಾಗೂ ಮಡಿಕೆ ಒಡೆಯುವುದರಲ್ಲಿ ದ್ವಿತೀಯ, ಹೇಮಾವತಿ 200 ಮೀಟರ್ ಓಟದಲ್ಲಿ ದ್ವಿತೀಯ ಮತ್ತು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಲ್ಪ್ರೆಡ್ ಲಾರೆನ್ಸ್ ರೋಡ್ರಿಗಸ್ ನೇತೃ ತ್ವದ ತಂಡ 9 ಜನರ ತಂಡ ಹಗ್ಗ ಜಗ್ಗಾಟದಲ್ಲಿ ದ್ವಿತೀಯ ಬಹುಮಾನ ಪಡೆದುಕೊಂಡು ಸಮಗ್ರ ಚಾಂಪಿಯನ್ ಆಗಿ ಹೊರ ಹೊಮ್ಮಿತು.

ಉಪ್ಪಿನಂಗಡಿ ತಂಡಕ್ಕೆ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಡಾ. ಶಿವರಾಮ ಕಾರಂತ್ ಪ್ರತಿಷ್ಠಾನದ ಗೌರವಾಧ್ಯಕ್ಷ ಆನಂದ ಕುಂದರ್ ಚಾಂಪಿಯನ್ ಶಿಪ್ ಫಲಕವನ್ನು ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತ, ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಸದಸ್ಯರಾದ ಧನಂಜಯ, ಅಬ್ದುಲ್ ರಶೀದ್, ಯು.ಕೆ. ಇಬ್ರಾಹೀಂ, ಉಷಾ ಮುಳಿಯ, ವನಿತಾ, ಜಯಂತಿ, ಶೋಭಾ, ಉಷಾ ನಾಯ್ಕ, ನೆಬಿಸಾ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

2019ರಲ್ಲಿಯೂ ಕೂಡಾ ಉಪ್ಪಿನಂಗಡಿ ಗ್ರಾ.ಪಂ. ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಈ ಬಾರಿಯೂ ಸಮಗ್ರ ಚಾಂಪಿಯನ್ ಆಗುವ ಮೂಲಕ ಎರಡನೇ ಬಾರಿ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಮಗ್ರ ಚಾಂಪಿಯನ್ ಆಗಿ ಮಿಂಚಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News