ಭೋಗ ಜೀವನದಿಂದ ರೋಗ, ಸರಳ ಜೀವನದಿಂದ ನೆಮ್ಮದಿ: ಡಾ.ಚಂದ್ರಶೇಖರ್

Update: 2024-05-29 15:29 GMT

ಮಂಗಳೂರು: ಜನಭೋಗ ಜೀವನದ ಹಿಂದೆ ಬಿದ್ದು ರೋಗಗಳನ್ನು ಆಹ್ವಾನಿಸಿಕೊಳ್ಳುತ್ತಿದ್ದಾರೆ. ಸರಳ ಜೀವನ, ಶಿಸ್ತು, ಸಂಯಮ, ಪ್ರೀತಿ, ಸೇವೆಗಳಿಂದ ಬದುಕನ್ನು ಸುಂದರವಾಗಿಸಬಹುದು ಎಂದು ಪದ್ಮಶ್ರೀ ಡಾ.ಸಿ.ಆರ್. ಚಂದ್ರಶೇಖರ್ ಹೇಳಿದರು.

ದಿ.ಬಿ.ಹರಿಶ್ಚಂದ್ರ ಆಚಾರ್ಯ ಮೆಮೋರಿಯಲ್ ಟ್ರಸ್ಟ್ (ರಿ) ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಅಯೋಜಿಸಿದ್ದ ಹರಿಶ್ಚಂದ್ರ ಆಚಾರ್ಯರ 111ನೇ ಜನ್ಮ ದಿನೋತ್ಸವದ ಸಂದರ್ಭ ಟ್ರಸ್ಟ್ ನೀಡಿದ ಬಿ. ಹರಿಶ್ಚಂದ್ರ ಆಚಾರ್ಯ ಸ್ಮಾರಕ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

ಆನೆಗುಂದಿ ಸರಸ್ವತಿ ಪೀಠಾಧೀಶ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬೆಂಗಳೂರಿನ ವಿರಾಟ್ ವಿಶ್ವ ಗ್ಲೋಬಲ್ ಫೌಂಡೇಶನ್‌ನ ಅಧ್ಯಕ್ಷ ಎಸ್.ಮಾಳಿಗಾಚಾರ್ ಮಾತನಾಡಿ ದರು. ಟ್ರಸ್ಟ್ ಅಧ್ಯಕ್ಷ ಪಿ. ಶಿವರಾಮ ಆಚಾರ್ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಮಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್ ಪುರಸ್ಕೃತ ಎಸ್‌ಕೆಎಫ್ ಎಲಿಕ್ಸರ್ ಅಧ್ಯಕ್ಷ ಡಾ. ಜಿ. ರಾಮ ಕೃಷ್ಣ ಆಚಾರ್ ಅವರನ್ನು ಅಭಿನಂದಿಸಲಾಯಿತು. ಮೇಯರ್ ಸುಧೀರ್ ಶೆಟ್ಡಿ ಕಣ್ಣೂರು, ವಿಧಾನ ಪರಿಷತ್ ಮಾಜಿ ಸಚೇತಕ ಕ್ಯಾ.ಗಣೇಶ್ ಕಾರ್ಣಿಕ್, ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತಾಧಿಕಾರಿ ಕೆ. ಉಮೇಶ್ ಆಚಾರ್ಯ, ವೆನ್ಲಾಕ್ ಆಸ್ಪತ್ರೆಯ ಮುಖ್ಯ ದಂತ ವೈದ್ಯಾಧಿಕಾರಿ ಡಾ. ಜ್ಯೋತಿ ವೇಣುಗೋಪಾಲ್, ಬಿ. ಎಚ್. ಯೋಗೀಶ ಆಚಾರ್ ಉಪಸ್ಥಿತರಿದ್ದರು.

ಡಾ.ಸಿ.ಎ. ನಾಗರಾಜ ಆಚಾರ್ ಸಂಸ್ಮರಣಾ ಭಾಷಣ ಮಾಡಿದರು. ಪ್ರೊ.ಜಿ.ಯಶವಂತ ಆಚಾರ್ ಅವರು ಡಾ.ಸಿ. ಆರ್.ಸಿ. ಅವರನ್ನು ಅಭಿನಂದಿಸಿ ಮಾತನಾಡಿದರು. ಪಿಎಚ್‌ಡಿ ಪದವಿ ಪಡೆದ ವಿಶ್ವಕರ್ಮ ಸಮಾಜದ ಸಾಧಕರಾದ ಡಾ.ಕೆ.ವಿ.ಸುರೇಶ್,ಡಾ.ಸುಷ್ಮಾ ಪಿ.ಎಸ್. ಡಾ.ಸುಮಿತಾ ಪಿ.ವಿ., ಡಾ.ವೀರಭದ್ರಾಚಾರ್‌ರನ್ನು ಅಭಿನಂದಿಸಲಾಯಿತು.

ವಿಶಿಷ್ಟ ಶೈಕ್ಷಣಿಕ ಸಾಧನೆಗೈದ ಸಿಂಚನಾ ಸೋಮವಾರಪೇಟೆ ಹಾಗೂ ಕೌಶಿಕ್ ಆಚಾರ್ಯ ಬಂಟ್ವಾಳ ಅವರನ್ನು ಸನ್ಮಾನಿಸಲಾಯಿತು.

ಟ್ರಸ್ಟ್ ಉಪಾಧ್ಯಕ್ಷ ಎಸ್.ವಿ.ಆಚಾರ್ ಸ್ವಾಗತಿಸಿದರು. ಕಾರ್ಯದರ್ಶಿ ಡಾ.ಎಸ್.ಪಿ. ಗುರುದಾಸ್ ಪ್ರಾಸ್ತಾವಿಕ ಮಾತು ಗಳನ್ನಾಡಿದರು. ಹರಿದಾಸ್ ಎಸ್‌ಪಿ ಆಚಾರ್ಯ, ಪಶುಪತಿ ಉಳ್ಳಾಲ ಅಭಿನಂದನಾ ಪತ್ರ ವಾಚಿಸಿದರು. ಎನ್. ಆರ್.ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿದರು. ಸಹ ಕೋಶಾಧಿಕಾರಿ ಯಜ್ಞೇಶ್ವರ ಕೃಷ್ಣಾಪುರ ವಂದಿಸಿದರು. ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು ಇದರ ಸದಸ್ಯರಿಂದ ತುಳುನಾಡ ವೈಭವದ ಸ್ಪೀಡ್ ಆರ್ಟ್ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಂಡವು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News