ತೈಲ ಹಡಗಿನಲ್ಲಿ ಅಗ್ನಿ ಸ್ಪರ್ಶ| ಮಂಗಳೂರು ಕಡಲು ಕಿನಾರೆಗೆ ಅಪಾಯವಿಲ್ಲ: ದ.ಕ. ಜಿಲ್ಲಾಕಾರಿ

Update: 2024-07-26 16:04 GMT

ಮಂಗಳೂರು: ಅಗ್ನಿ ಸ್ಪರ್ಶಗೊಂಡಿರುವ ಹಡಗು (ಎಂವಿ ಮೈರಿಸ್ ಫ್ರಾಂಕ್‌ಫರ್ಟ್ ಕಾರ್ಗೋ ಕಂಟೈನರ್) ಮಂಗಳೂರು ಕಡಲ ಕಿನಾರೆಯಿಂದ 30 ನಾಟಿಕಲ್ ಮೈಲು ದೂರದಲ್ಲಿದ್ದರೂ ಈ ಹಡಗಿನಿಂದಾಗಿ ಮಂಗಳೂರು ಕಡಲ ಕಿನಾರೆಗೆ ಯಾವುದೇ ರೀತಿಯ ಅಪಾಯವಿರುವುದಿಲ್ಲ ಹಾಗೂ ಸಾರ್ವಜನಿಕರು ಆತಂಕಪಡುವ ಅಗತ್ಯತೆ ಇರುವುದಿಲ್ಲ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮಗಿಲನ್ ಸ್ಪಷ್ಟಪಡಿಸಿದ್ದಾರೆ.

ಗುಜರಾತ್ ರಾಜ್ಯದ ಮುದ್ರಾದಿಂದ ಶ್ರೀಲಂಕಾದಕೊಲೊಂಬೊಕ್ಕೆ ಹೊರಟಿದ್ದ ಹಡಗು ಗೋವಾ ಕಡಲ ತೀರ ತಲುಪಿದ್ದಾಗ ಹಡಗಿನಲ್ಲಿ ಜು.20 ಬೆಂಕಿ ಕಾಣಿಸಿಕೊಂಡಿತ್ತು.

ಬೆಂಕಿಭಾರತೀಯ ಕರಾವಳಿ ಕಾವಲು ಪಡೆ ಮತ್ತು ನವಮಂಗಳೂರು ಬಂದರು ಪ್ರಾಧಿಕಾರದ ಮಾರ್ಗದರ್ಶನ ಮತ್ತು ನೆರವಿನೊಂದಿಗೆ ಸಂಭಾವ್ಯ ಅವಘಡವನ್ನು ಎದುರಿಸಲು ಲಭ್ಯವಿರುವ ಉಪಕರಣಗಳು, ಸಲಕರಣೆಗಳು ಮತ್ತು ಮಾನವ ಸಂಪನ್ಮೂಲದೊಂದಿಗೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡಲು ಜಿಲ್ಲಾಡಳಿತವು ಸರ್ವ ಸನ್ನದ್ಧವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News