ಅ. ಭಾ. ಬ್ಯಾರಿ ಪರಿಷತ್ ನಿಂದ ಬ್ಯಾರಿ ಭಾಷಾ ದಿನಾಚರಣೆ ಪ್ರಯುಕ್ತ ವಿವಿಧ ಸ್ಪರ್ಧೆಗಳು

Update: 2024-09-09 07:26 GMT

ಮಂಗಳೂರು: ಅಖಿಲ ಭಾರತ ಬ್ಯಾರಿ ಪರಿಷತ್ ಕೇಂದ್ರೀಯ ಸಮಿತಿ, ಮಂಗಳೂರು ಇದರ ವತಿಯಿಂದ ನಡೆಯಲಿರುವ ಬ್ಯಾರಿ ಭಾಷಾ ದಿನಾಚರಣೆಯ ಅಂಗವಾಗಿ ಜೂನಿಯರ್ ವಿಭಾಗದಲ್ಲಿ ಹೈಸ್ಕೂಲ್ ಹಾಗೂ ಕಾಲೇಜು ವಿದ್ಯಾರ್ಥಿ ಗಳಿಗೆ, ಸೀನಿಯರ್ ವಿಭಾಗದಲ್ಲಿ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ಬ್ಯಾರಿ ಆಶು ಭಾಷಣ ಸ್ಪರ್ಧೆ, ಬ್ಯಾರಿ ಒಗಟು, ಬ್ಯಾರಿ ಪ್ರಬಂಧ ಸ್ಪರ್ಧೆ, ಬ್ಯಾರಿ ಗಾಯನ ಸ್ಪರ್ಧೆ ಹಾಗೂ ವಿಷಯಾಧಾರಿತ ಭಾಷಣ ಸ್ಪರ್ಧೆಗಳನ್ನು ಸೆ.28ರಂದು ಅಪರಾಹ್ನ 2:30ಕ್ಕೆ ನಗರದ ನ್ಯಾಷನಲ್ ಟ್ಯೂಟೋರಿಯಲ್ ಸಭಾಂಗಣದಲ್ಲಿ ನಡೆಸಲಾಗುವುದು. ವಿಜೇತರಿಗೆ ಅಕ್ಟೊಬರ್ 3ರಂದು ಅಪರಾಹ್ನ 2:30ಕ್ಕೆ ನಗರದ ಹೋಟೆಲ್ ಓಶಿಯನ್ ಪರ್ಲ್ ಸಭಾಂಗಣದಲ್ಲಿ ಏರ್ಪಡಿಸಲಾಗುವ ಬ್ಯಾರಿ ಭಾಷಾ ದಿನಾಚರಣೆಯಲ್ಲಿ ನಗದು ಬಹುಮಾನ ಪ್ರಥಮ 1,000 ರೂ., ದ್ವಿತೀಯ 750 ರೂ., ತೃತೀಯ 500 ರೂ. ವಿತರಿಸಲಾಗುವುದು.

ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವವರು ಸೆ.27ರ ಸಂಜೆ 5ರೊಳಗೆ ಹೆಸರನ್ನು ನೋಂದಾಯಿಸಬೇಕು.

ಹೆಚ್ಚಿನ ಮಾಹಿತಿಗೆ ಇಬ್ರಾಹೀಂ ನಡುಪದವು 9448620793, ಯೂಸುಫ್ ವಕ್ತಾರ್ 9008503993,

ಅಬ್ದುಲ್ ರಹಿಮಾನ್ 9964095883 ರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News