ವಾಯ್ಸ್ ಆಫ್ ಬ್ಲಡ್ ಡೋನರ್ಸ್‌ನ ಪೂರ್ವಭಾವಿ ಸಭೆ, ಭಿತ್ತಿಪತ್ರ ಅನಾವರಣ

Update: 2024-09-24 14:25 GMT

ಮಂಗಳೂರು, ಸೆ.24: ರಕ್ತದಾನ ಹಾಗೂ ಅಶಕ್ತರ ಕಲ್ಯಾಣಕ್ಕಾಗಿ ದುಡಿಯುವ, ಅಂಗವೈಕಲ್ಯಕ್ಕೆ ಒಳಗಾದವರಿಗೆ ಕೃತಕ ಸಲಕರಣೆ ವಿತರಿಸುವ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಇದರ 7ನೇ ಹಾಗೂ ವಾಯ್ಸ್ ಆಫ್ ಟ್ರಸ್ಟ್ ಇದರ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮವು ಸೆ.26ರಂದು ಬೆಳಗ್ಗೆ 10ಕ್ಕೆ ನಗರದ ರಾವ್ ಆ್ಯಂಡ್ ರಾವ್ ಬಳಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಅನೇಕ ಮಂದಿಗೆ ಉಚಿತ ಸವಲತ್ತು ವಿತರಣೆಯೂ ಆಗಲಿದೆ. ಈ ಬಗ್ಗೆ ಪೂರ್ವಭಾವಿ ಸಭೆ, ಭಿತ್ತಿಪತ್ರ ಅನಾವರಣವು ಸಂಸ್ಥೆಯ ಕಚೇರಿಯಲ್ಲಿ ನಡೆಯಿತು.

ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಇದರ ಅಧ್ಯಕ್ಷ ಲ.ಡಾ.ಓಸ್ವಾಲ್ಡ್ ಪುರ್ಟಾಡೋ ಮಾತನಾಡಿ ಸಂಸ್ಥೆಯ ಸ್ಥಾಪಕಾಧ್ಯಕ್ಷ ರವೂಫ್ ಬಂದರ್‌ರ ಸಮಾಜ ಸೇವಾ ಚಿಂತನೆಯೊಂದಿಗೆ ಆರಂಭಗೊಂಡಿರುವ ದಿ ವಾಯ್ಸ್ ಬ್ಲಡ್ ಡೋನರ್ಸ್ ಮಂಗಳೂರು, ವಾಯ್ಸ್ ಆಫ್ ವುಮನ್ ವಿಂಗ್ಸ್ ಮಂಗಳೂರು ಮತ್ತು ವಾಯ್ಸ್ ಆಫ್ ಟ್ರಸ್ಟ್ ಮಂಗಳೂರು ಇದರ ಸಮಾಜ ಸೇವಾ ಸಂಸ್ಥೆಯಿಂದ ಪ್ರೇರಣೆಗೊಂಡು ತಾನು ತಾಯಿಯ ಸ್ಮರಣಾರ್ಥ ತನ್ನ ಸ್ವಂತ ಖರ್ಚಿನಲ್ಲಿ ಉಚಿತ ಆ್ಯಂಬುಲೆನ್ಸ್ ಸೇವೆ ಒದಗಿಸಿರುವೆ ಎಂದರು.

300 ನೇತ್ರದಾನಿಗಳಿಂದ ಕಣ್ಣುಗಳನ್ನು ಸಂಗ್ರಹಿಸಿ ಸುಮಾರು 600 ಮಂದಿಗೆ ಕಣ್ಣು ದಾನ ಮಾಡಿಸಿ ಅಂಧಕಾರದಲ್ಲಿ ಮುಳುಗಿ ಹೋಗಿದ್ದ ಅವರ ಬದುಕಿನಲ್ಲಿ ಬೆಳಕು ನೀಡುವ ಕೆಲಸವಾಗಿದೆ ಎಂದರು.

ವಾಯ್ಸ್ ಆಫ್ ಟ್ರಸ್ಟ್ ಅಧ್ಯಕ್ಷ ಝಾಹಿರ್ ಅಬ್ಬಾಸ್ ಮಾತನಾಡಿ ಒಂದು ವರ್ಷದ ಅವಧಿಯಲ್ಲಿ ವೀಲ್‌ಚೆಯರ್, ವಾಕಿಂಗ್ ಸ್ಟಿಕ್, ಬಡವರ್ಗದ ಹೆಣ್ಣುಮಕ್ಕಳ ಮದುವೆಗೆ ಬಟ್ಟೆ, ವಾಚು ಸಹಿತ ಹಲವು ಸವಲತ್ತು ಉಚಿತವಾಗಿ ನೀಡಿದ್ದೇವೆ. ಇದರೊಂದಿಗೆ ವಿಕಲ ಚೇತನರಿಗೆ ಬೇಕಾಗುವ ವೀಲ್‌ಚೆಯರ್, ವಾಟರ್ ಬೆಡ್, ವಾಕರ್, ವಾಕಿಂಗ್ ಸ್ಟಿಕ್, ಮುಂತಾದ ಪರಿಕರಗಳನ್ನು ನಿರಂತರವಾಗಿ ನೀಡುತ್ತಾ ಬಂದಿದೆ. ಈ ಬಾರಿ ಇಂತಹ ಉತ್ತಮ ಸೇವಾ ಕಾರ್ಯವು ವಾರ್ಷಿಕೋತ್ಸವ ಸಂದರ್ಭ ನಡೆಯಲಿದೆ ಎಂದರು.

ಸಲಹೆಗಾರ ಹುಸೈನ್ ಕಾಟಿಪಳ್ಳ, ವಾಯ್ಸ್ ಆಫ್ ಬ್ಲಡ್ ಡೋನರ್ಸ್‌ನ ಪ್ರಧಾನ ಕಾರ್ಯದರ್ಶಿ ಆಲಿಷಾ ಅಮೀನ್, ಉಪಾಧ್ಯಕ್ಷ ಸಾಧಿಕ್ ಸಾಲೆತ್ತೂರು,ನಝೀರ್ ,ಮಹಿಳಾ ವಿಭಾಗದ ಸದಸ್ಯೆ ಸರಸ್ವತಿ ರಶ್ಮಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News