ಮುಹಮ್ಮದ್ ರಿಫಾಯ್ ಕಾಟಿಪಳ್ಳರಿಗೆ ಶಿಕ್ಷಾ ರತ್ನ ಪ್ರಶಸ್ತಿ ಪ್ರದಾನ

Update: 2024-09-24 15:50 GMT

ಮಂಗಳೂರು: ಇಂಗ್ಲಿಷ್ ಸ್ಕೂಲ್ ನೆಟ್‌ವರ್ಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಮುಹಮ್ಮದ್ ರಿಫಾಯ್ ಕಾಟಿಪಳ್ಳ ಅವರಿಗೆ ಲಕ್ನೋದ ಸಿಟಿ ಮಾಂಟೆಸ್ಸರಿ ಸ್ಕೂಲ್ (ಸಿಎಂಎಸ್)ನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಶಿಕ್ಷಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಕೇರಳ, ಕರ್ನಾಟಕ, ಕಾಶ್ಮೀರ ಮತ್ತು ಉತ್ತರ ಪ್ರದೇಶದಲ್ಲಿ ಪರಿವರ್ತನಾಶೀಲ ಶಿಕ್ಷಣ ಮತ್ತು ವಿದ್ಯಾರ್ಥಿ ನಾಯಕತ್ವವನ್ನು ಸಶಕ್ತಗೊಳಿಸುವಲ್ಲಿ ರಿಫಾಯ್ ಅವರ ದಣಿವರಿಯದ ಪ್ರಯತ್ನಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

ಕಾಟಿಪಳ್ಳದ ನೂರುಲ್ ಹುದಾ ಆಂಗ್ಲ ಮಾಧ್ಯಮ ಶಾಲೆ, ಮದ್ರಸ ಅಲ್ ನೂರಿಯಾ, ಜಾಮಿಯಾ ಮರ್ಕಝ್ ಕ್ಯಾಲಿಕಟ್ ಮತ್ತು ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಶಿಕ್ಷಣ ಪಡೆದಿರುವ ರಿಫಾಯ್ ಪ್ರೆಸ್ಟನ್ ಇಂಟರ್‌ನ್ಯಾಶನಲ್ ಕಾಲೇಜಿನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ.

ಭಾರತ, ಮಧ್ಯಪ್ರಾಚ್ಯ, ಚೀನಾದಲ್ಲಿ 6 ವರ್ಷಗಳ ಕಾರ್ಪೊರೇಟ್ ಅನುಭವ ಮತ್ತು ೭ ವರ್ಷಗಳ ಶೈಕ್ಷಣಿಕ ನಾಯಕತ್ವದಲ್ಲಿ ರಿಫಾಯ್ ಗಮನಾರ್ಹ ಪ್ರಭಾವ ಬೀರಿದ್ದಾರೆ. ಜಾಗತಿಕ ಶಿಕ್ಷಕರ ಪ್ರಶಸ್ತಿ, ಫಿರ್ಕಿ ಟೀಚ್ ಫಾರ್ ಇಂಡಿಯಾ, ಎಜುಕೇಷನಲ್ ಎಕ್ಸಲೆನ್ಸ್ ಅವಾರ್ಡ್ ಕೂಡಾ ದೊರೆತಿದೆ.

ರಿಫಾಯ್ ಸಿಬಿಎಸ್‌ಸಿ ಮತ್ತು ಇಂಟನ್ಯಾಶನಲ್ ಶಾಲೆಗಳಿಗೂ ತನ್ನ ಸೇವೆಯನ್ನು ವಿಸ್ತರಿಸಿದ್ದಾರೆ. ಆಕ್ಸ್‌ಫರ್ಡ್ ವಿವಿ ಪ್ರೆಸ್ ನಾರ್ತ್ ಇಂಡಿಯಾ ರೀಜನ್‌ನ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ದಿ ಇಂಗ್ಲಿಷ್ ಸ್ಕೂಲ್ ನೆಟ್‌ವರ್ಕ್‌ಗಾಗಿ ರಿಫಾಯ್ ಅವರ ಸಮರ್ಪಣಾ ಮತ್ತು ದೃಷ್ಟಿ ಅಸಂಖ್ಯಾತ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಶ್ರಮಿಸಿದ್ದಾರೆ. ಪರಿವರ್ತನೀಯ ಶಿಕ್ಷಣ ಮತ್ತು ವಿದ್ಯಾರ್ಥಿ ಸಬಲೀಕರಣಕ್ಕೆ ಅವರ ಬದ್ಧತೆಯು ರಾಷ್ಟ್ರವ್ಯಾಪಿ ಶಿಕ್ಷಕರಿಗೆ ಸ್ಫೂರ್ತಿಯಾಗಿದೆ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News