ಫಾದರ್ ಮುಲ್ಲರ್‌ನಲ್ಲಿ ರೋಗಿಗಳ ಸುರಕ್ಷತಾ ಸಪ್ತಾಹ

Update: 2024-09-25 14:19 GMT

ಮಂಗಳೂರು: ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ (ಎಫ್‌ಎಂಎಂಸಿಎಚ್) ಆಸ್ಪತ್ರೆ ಸುರಕ್ಷತಾ ಸಮಿತಿಯ ನೇತೃತ್ವದಲ್ಲಿ ‘ ಜಾಗತಿಕ ರೋಗಿಗಳ ಸುರಕ್ಷತಾ ಸಪ್ತಾಹ’ ಬುಧವಾರ ಆರಂಭಗೊಂಡಿತು.

ಮುಖ್ಯ ಅತಿಥಿ ಎಫ್‌ಎಂಎಂಸಿಎಚ್‌ನ ವೈದ್ಯಕೀಯ ಅಧೀಕ್ಷಕ ಡಾ. ಉದಯಕುಮಾರ್ ಮಾತನಾಡಿ, ಆರೋಗ್ಯ ರಕ್ಷಣೆಯಲ್ಲಿ ರೋಗಿಗಳ ಸುರಕ್ಷತೆಯ ನಿರ್ಣಾಯಕ ಪಾತ್ರವನ್ನು ವಿವರಿಸಿದರು.

ಎಫ್‌ಎಂಸಿಐ ನಿರ್ದೇಶಕ ರೆ.ಫಾ. ರಿಚರ್ಡ್ ಅಲೋಶಿಯಸ್ ಕೊಯೆಲ್ಹೊ ಅವರು ಸುರಕ್ಷತೆಯನ್ನು ಉತ್ತೇಜಿಸುವಲ್ಲಿ ಸಾಮೂಹಿಕ ಪ್ರಯತ್ನಗಳ ಮಹತ್ವವನ್ನು ತಿಳಿಸಿದರು. ನಿರ್ವಾಹಕ ಜೀವನ್ ಜಾರ್ಜ್ ಸಿಕ್ವೇರಾ ಅವರು ಹೊಸ ರೋಗಿಗಳ ಸುರಕ್ಷತಾ ಕ್ರಮಗಳನ್ನು ಪರಿಚಯಿಸಿದರು.

ದೇರಳಕಟ್ಟೆ ಫಾದರ್ ಮುಲ್ಲರ್ ಹೋಮಿಯೋಪತಿ ಫಾರ್ಮಾಸ್ಯುಟಿಕಲ್ ವಿಭಾಗದ ಆಡಳಿತಾಧಿಕಾರಿ ಫಾ. ನೆಲ್ಸನ್ ಧೀರಜ್ ಪೈಸ್ , ಸಹಾಯಕ ಆಡಳಿತಾಧಿಕಾರಿ ಫಾ. ಡೊನಾಲ್ಡ್ ನೀಲೇಶ್ ಕ್ರಾಸ್ತಾ , ಡೀನ್ ಆ್ಯಂಟನಿ ಸಿಲ್ವನ್ ಡಿ ಸೋಜ , ಸಿಸ್ಟರ್ ನ್ಯಾನ್ಸಿ ಮಥಿಯಾಸ್, ಆರೋಗ್ಯ ಸುರಕ್ಷತಾ ಸಮಿತಿಯ ಅಧ್ಯಕ್ಷ ಜಾರ್ಜ್ ಜೀವನ್ ಸಿಕ್ವೇರಾ ಮತ್ತು ಕಾರ್ಯದರ್ಶಿ ಅಲ್ವಿತಾ ಸಲ್ಡಾನಾ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ಸಪ್ತಾಹದಲ್ಲಿ ಎಫ್‌ಎಂಸಿಐ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಪೋಸ್ಟರ್ ತಯಾರಿಕೆ, ಸೃಜನಶೀಲ ಬರವಣಿಗೆ, ರಸ ಪ್ರಶ್ನೆಗಳು ಮತ್ತು ರೋಗಿಗಳ ಸುರಕ್ಷತೆಯ ಅರಿವು ಮೂಡಿಸಲು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಸಹಾಯಕ ಗುಣಮಟ್ಟ ವ್ಯವಸ್ಥಾಪಕರಾದ ಜ್ಯೋತಿ ಮೊರಾಸ್ ಸ್ವಾಗತಿಸಿದರು. ಸಹಾಯಕ ಗುಣಮಟ್ಟ ನಿರ್ವಾಹಕರಾದ ಶೈನಿ ಕಾರ್ಡೋಜ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News