ಕಲಿಕೆಯ ಅವಕಾಶಗಳನ್ನು ಬಳಸಿಕೊಳ್ಳಿ: ಡಾ.ಪುರುಷೋತ್ತಮ್ ಚಿಪ್ಪಾರ್
ಮಂಗಳೂರು: ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಲಿಯುವ ಅನುಕೂಲತೆಗಳನ್ನು ಅರಸುತ್ತಿರಬೇಕು. ಅವಕಾಶ ಸಿಕ್ಕಿದಾಗ ಅದರ ಲಾಭ ಪಡೆದು ತಂತ್ರಜ್ಞಾನದ ಪ್ರಭುತ್ವವನ್ನು ಸಾಧಿಸಬೇಕು ಎಂದು ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಐಡಿಯಾ ಲ್ಯಾಬ್‌ನ ಮುಖ್ಯಸ್ಥ ಡಾ.ಪುರುಷೋತ್ತಮ ಚಿಪ್ಪಾರ್ ಹೇಳಿದರು.
ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ಮತ್ತು ಡಯೆಟ್ ಮಂಗಳೂರು ಇದರ ಸಹಕಾರದೊಂದಿಗೆ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಎಟಿಎಲ್ ಶಾಲೆಗಳ ಅಧ್ಯಾಪಕರು ಮತ್ತು ವಿದ್ಯಾರ್ಥಿ ಗಳಿಗೆ ಆಯೋಜಿಸಿದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಕೆ.ವಿ.ರಾವ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಗಾರದಲ್ಲಿ ಸಂತ ಜೋಸೆಫ್ ಕಾಲೇಜಿನ ಪ್ರೊ. ರಾಧಾಕೃಷ್ಣ, ಡಾ.ವಿಜಯ್ ಎಸ್, ಡಾ. ರವಿಕಾಂತ ಪ್ರಭು, ಡಾ. ಹರಿನೋದ್ ಎನ್, ಗ್ಲೆನ್ಸನ್ ಟೋನಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಜಿಲ್ಲಾ ಎಟಿಎಲ್ ಆರ್‌ಟಿಒ ಸಿ. ಜಯಲಕ್ಷ್ಮಿ ಉಪಸ್ಥಿತರಿದ್ದರು.
ಕೇಂದ್ರದ ಕ್ಯುರೇಟರ್ ಜಗನ್ನಾಥ್ ಕಾರ್ಯಕ್ರಮ ನಿರೂಪಿಸಿದರು.ವೈಜ್ಞ್ಞಾನಿಕ ಅಧಿಕಾರಿ ವಿಘ್ನೇಶ್ ಸ್ವಾಗತಿಸಿದರು. ಇನ್ನೊವೇಶನ್ ಹಬ್, ಮೆಂಟರ್ ಹೇಮಂತ್ ವಂದಿಸಿದರು.