ಬಂಟ್ವಾಳ: ಸಮನ್ವಯ ಶಿಕ್ಷಕರ ಸಂಘದಿಂದ ಬ್ಯಾರಿ ಭಾಷಾ ದಿನಾಚರಣೆ.

Update: 2024-10-03 10:40 GMT

ಬಂಟ್ವಾಳ: ಮಾತೃ ಭಾಷೆಯಲ್ಲಿ ಸಂವಹನ ಕಡಿಮೆಯಾದಾಗ ಮೂಲ ಪದಗಳು ಕಣ್ಮರೆಯಾಗಿ ಭಾಷಾ ಸಂರಚನೆಗೆ ಧಕ್ಕೆಯಾಗುತ್ತದೆ. ಆ ಮೂಲಕ ಭಾಷೆ ಅಳಿವಿನ ಹಾದಿ ಹಿಡಿಯುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ದುಲ್ ಮಜೀದ್ ಎಸ್. ಅಭಿಪ್ರಾಯಪಟ್ಟರು.

ಅವರು ಸಮನ್ವಯ ಶಿಕ್ಷಕರ ಸಂಘದ ವತಿಯಿಂದ ಗುರುವಾರ ಬ್ರಹ್ಮರಕೂಟ್ಲು ಸುಹಾ ನಿವಾಸದಲ್ಲಿ ನಡೆದ ಬ್ಯಾರಿ ಭಾಷಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಬ್ಯಾರಿ ಭಾಷೆಯ ವೈಶಿಷ್ಟ್ಯತೆಗಳ ಕುರಿತು ಮಾತನಾಡಿದರು

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಆಯುಕ್ತ ಮುಹಮ್ಮದ್ ತುಂಬೆ, ಬ್ಯಾರಿ ಭಾಷಾ ದಿನಾಚರಣೆಯ ಶುಭಾಶಯ ಕೋರಿದರು.

ಸಮಾರಂಭದಲ್ಲಿ ಸಮನ್ವಯ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ನಾಸಿರ್ ಅಡೆಕಲ್, ಮುಹಮ್ಮದ್ ಕೊಲ್ಲರಕೋಡಿ, ಅಬ್ದುಲ್ ಹಮೀದ್ ಮಾಣಿ, ನೂರುದ್ದೀನ್ ಅಕ್ಕರಂಗಡಿ, ಹೈದರ್ ಪಡಂಗಡಿ, ತಾಹಿರಾ ತುಂಬೆ, ಜಮೀಲಾ ತುಂಬೆ, ಲುಕ್ಮಾನ್ ವಿಟ್ಲ, ಶೇಖ್ ಆದಂ ಸಾಹೇಬ್ ನೆಲ್ಯಾಡಿ, ಹಸೀನಾ ಮಲ್ನಾಡ್ ಮೊದಲಾದವರು ಉಪಸ್ಥಿತರಿದ್ದರು.

ಜಿಲ್ಲಾ ಕಾರ್ಯದರ್ಶಿ ಹಾರಿಸ್ ಬಾಂಬಿಲ ಸ್ವಾಗತಿಸಿದರು. ಸಂಘದ ಬಂಟ್ವಾಳ ಘಟಕಾಧ್ಯಕ್ಷ ಮುಹಮ್ಮದ್ ಮನಾಝಿರ್ ಮುಡಿಪು ವಂದಿಸಿದರು. ಶಿಕ್ಷಕ ಅಕ್ಬರ್ ಉಳಿಬೈಲು ಕಾರ್ಯಕ್ರಮ ನಿರೂಪಿಸಿದರು.

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News