ದೇರಳಕಟ್ಟೆ: ಎಸ್ಕೆಎಸ್ಸೆಸ್ಸೆಫ್ ವಿಖಾಯ ದ.ಕ. ಜಿಲ್ಲಾ ವೆಸ್ಟ್ ನಿಂದ ಡ್ರಗ್ಸ್ ವಿರುದ್ಧ ಕಾಲ್ನಡಿಗೆ ಜಾಥಾ
ಮಂಗಳೂರು: ಎಸ್ಕೆಎಸ್ಸೆಸ್ಸೆಫ್ ವಿಖಾಯ ದ.ಕ. ಜಿಲ್ಲಾ ವೆಸ್ಟ್ ಸಮಿತಿಯ ವತಿಯಿಂದ ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ವಲಯ ಸಮಿತಿಯ ಸಹಯೋಗದಲ್ಲಿ ಗಾಂಧಿ ಜಯಂತಿ ಹಾಗೂ ವಿಖಾಯ ಡೇ ಪ್ರಯುಕ್ತ ಮಾದಕ ವಸ್ತು ವ್ಯಸನ (ಡ್ರಗ್ಸ್)ದ ವಿರುದ್ಧ ಕಾಲ್ನಡಿಗೆ ಜಾಥಾವನ್ನು ಬುಧವಾರ ಆಯೋಜಿಸಲಾಗಿತ್ತು.
ಎಸ್ಕೆಎಸ್ಸೆಸ್ಸೆಫ್ ಆಕ್ಟೀವ್ ವಿಂಗ್ ಹಾಗೂ ವಿಜಿಲೆಂಟ್ ವಿಖಾಯ ಸದಸ್ಯರ ಭಾಗವಹಿಸುವಿಕೆಯಲ್ಲಿ ಕುತ್ತಾರ್ ಮದನಿ ನಗರದಿಂದ ದೇರಳಕಟ್ಟೆ ಜಂಕ್ಷನ್ ವರೆಗೆ ಸಾಗಿದ ಕಾಲ್ನಡಿಗೆ ಜಾಥಾಕ್ಕೆ ಎಸ್ಕೆಎಸ್ಸೆಸ್ಸೆಫ್ ದ.ಕ. ವೆಸ್ಟ್ ಜಿಲ್ಲಾ ಅಧ್ಯಕ್ಷ ಸೈಯದ್ ಅಮೀರ್ ತಂಙಳ್ ಕಿನ್ಯ ದುಆ ಮೂಲಕ ಚಾಲನೆ ನೀಡಿದರು,
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಳ್ಳಾಲ ಪೊಲೀಸ್ ಠಾಣೆ ಎಎಸ್ಸೈ ಮನ್ಸೂರ್ ಖಾನ್ ಉದ್ಘಾಟನಾ ಭಾಷಣ ಮಾಡಿದರು.
ದೇರಳಕಟ್ಟೆ ಸಿಟಿ ಗ್ರೌಂಡ್ ಬಳಿ ಜಾಥಾ ಸಮಾಪನಗೂಂಡಿತು. ವೆಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬು ಸ್ವಾಲಿಹ್ ಫೈಝಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಾರಿಸ್ ಮಖ್ದೂಮಿ ಕುಕ್ಕಾಜೆ ಮುಖ್ಯ ಭಾಷಣ ಮಾಡಿದರು. ಕೊಣಾಜೆ ಠಾಣೆ ಎಎಸ್ಸೈ ನಾಗರಾಜ್ ಎಸ್. ಮಾತನಾಡಿದರು.
ದೇರಳಕಟ್ಟೆ ವಲಯ ಸಮಿತಿಯ ಅಧ್ಯಕ್ಷ ಹನೀಫ್ ದಾರಿಮಿ ಪ್ರಾಸ್ತಾವಿಕ ಭಾಷಣ ಮಾಡಿದರು. ವೆಸ್ಟ್ ಜಿಲ್ಲಾ ಉಪಾಧ್ಯಕ್ಷ ಫಾರೂಕ್ ದಾರಿಮಿ ಫಜೀರ್ ಸ್ವಾಗತಿಸಿದರು.
ವಿಖಾಯ ರಾಜ್ಯ ಸಮಿತಿಯ ಸದಸ್ಯ ಮುಸ್ತಫ ಕಟ್ಟದಪಡ್ಪು, ವೆಸ್ಟ್ ಜಿಲ್ಲಾ ಅಧ್ಯಕ್ಷ ಇಬ್ರಾಹೀಂ ಕುಕ್ಕಟ್ಟೆ, ಕಾರ್ಯಾಧ್ಯಕ್ಷ ಸಮೀರ್ ಎಚ್.ಕಲ್ಲು, ಕನ್ವೀನರ್ ಫಾರೂಕ್ ಮೂಡುಬಿದಿರೆ, ಕಾರ್ಯಕಾರಿ ಸಮಿತಿ ಸದಸ್ಯ ಹಂಝ ಕುರಿಯಪ್ಪಾಡಿ, ದೇರಳಕಟ್ಟೆ ವಲಯ ಉಪಾಧ್ಯಕ್ಷರಾದ ಅಲ್ತಾಫ್ ಮಲಾರ್, ಕೆ.ಪಿ.ಯೂಸುಫ್, ಇಕ್ಬಾಲ್ ಇನೋಳಿ, ಕೋಶಾಧಿಕಾರಿ ಇರ್ಫಾನ್ ಮಲಾರ್, ಪ್ರಧಾನ ಕಾರ್ಯದರ್ಶಿ ಇರ್ಷಾದ್ ಎಚ್.ಕಲ್ಲು, ಕಾರ್ಯಕಾರಿ ಸಮಿತಿಯ ಸದಸ್ಯರಾದ ಅಶ್ರಫ್ ಅರ್ಶದಿ, ಸಮದ್ ಮಲಾರ್, ವಿಖಾಯ ದೇರಳಕಟ್ಟೆ ವಲಯ ಅಧ್ಯಕ್ಷ ಶಫೀಕ್ ಎಚ್.ಕಲ್ಲು, ಸಂಯೋಜಕ ಮುಹಿಯುದ್ದೀನ್ ಉಳ್ಳಾಲ, ಜಿಲ್ಲಾ ವ್ಯಾಪ್ತಿಯ ಇತರ ವಲಯ ಸಮಿತಿ ವಿಖಾಯ ನೇತಾರರು, ಮಂಗಳೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮುಹಮ್ಮದ್ ಮೋನು, ಪಾವೂರು ಗ್ರಾಮ ಪಂಚಾಯತ್ ಅಧ್ಯಕ್ಷ ಮಜೀದ್ ಸಾತ್ಕೋ, ಪಂಚಾಯತ್ ಸದಸ್ಯರಾದ ಎಚ್.ಆರ್.ಇಕ್ಬಾಲ್, ಸಾಮಾಜಿಕ ಕಾರ್ಯಕರ್ತರಾದ ಸಮೀರ್ ಫಜೀರ್, ಸರ್ಗಲಯ ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ಎಂ.ಅಶ್ರಫ್ ಫೈಝಿ ಮಲಾರ್, ಸಹಚಾರಿ ರಾಜ್ಯ ಸಮಿತಿಯ ಅಧ್ಯಕ್ಷ ಇಮ್ತಿಯಾಝ್ ಇಡ್ಯ, ಜಿಲ್ಲಾ ಸಹಚಾರಿ ಅಧ್ಯಕ್ಷ ಲತೀಫ್ ಪಜೀರ್, ಹಿದಾಯತ್ ಉಚ್ಚಿಲ,ಎಸ್.ಬಿ.ಹನೀಫ್ ಉಚ್ಚಿಲ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಸಮಿತಿಯ ಜೂತೆ ಕಾರ್ಯದರ್ಶಿ ಆರಿಫ್ ಕಮ್ಮಾಜೆ ವಂದಿಸಿದರು.