ದಾರುನ್ನೂರು ದಶಮಾನೋತ್ಸವ ಕಾರ್ಯಕ್ರಮದ ಪ್ರಚಾರ ಜಾಥಾಕ್ಕೆ ಸ್ವಾಗತ

Update: 2024-10-14 13:57 GMT

ಉಪ್ಪಿನಂಗಡಿ, ಅ.14: ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣ ಎಂಬ ಗ್ರಾಮೀಣ ಪ್ರದೇಶದಲ್ಲಿರುವ ಧಾರ್ಮಿಕ-ಲೌಕಿಕ ಸಮನ್ವಯ ಶಿಕ್ಷಣ ಕೇಂದ್ರವಾದ ದಾರುನ್ನೂರು ಎಜುಕೇಶನ್ ಸೆಂಟರ್‌ನ ದಶಮಾನೋತ್ಸವ ಮತ್ತು ಪ್ರಥಮ ಸನದು ಪ್ರದಾನ ಕಾರ್ಯ ಕ್ರಮದ ಪ್ರಚಾರಕ್ಕಾಗಿ ನಡೆಯುವ ಜಾಥಾಕ್ಕೆ ಉಪ್ಪಿನಂಗಡಿಯಲ್ಲಿ ಸ್ವಾಗತ ಕೋರಲಾಯಿತು.

ನವಂಬರ್ 1ರಿಂದ 3ರ ತನಕ ನಡೆಯುವ ವೈವಿಧ್ಯಮಯ ಕಾರ್ಯಕ್ರಮವನ್ನು ಐತಿಹಾಸಿಕಗೊಳಿಸುವ ಸಲುವಾಗಿ ನಾಡಿನಾದ್ಯಂತ ಪ್ರಚಾರ ಕಾರ್ಯಗಳು ಭರದಿಂದ ಸಾಗುತ್ತಿದೆ. ಅದರಂತೆ ಈ ಪ್ರಚಾರ ಜಾಥಾವು ಉಪ್ಪಿನಂಗಡಿ ಕೇಂದ್ರ ಜುಮಾ ಮಸೀದಿಯ ವಠಾರಕ್ಕೆ ತಲುಪಿದಾಗ ಸ್ವಾಗತಿಸಲಾಯಿತು.

ಉಪ್ಪಿನಂಗಡಿ ಕೇಂದ್ರ ಜುಮಾ ಮಸೀದಿಯ ಖತೀಬ್ ಅಬ್ದುಲ್ ಸಲಾಂ ಫೈಝಿ, ಎಸ್‌ಬಿ ದಾರಿಮಿ, ಕರಾವಳಿ ಹಮೀದ್ ಮಾತನಾಡಿದರು. ಎಚ್.ಯೂಸುಫ್, ಸಿದ್ದೀಕ್ ಮೇದರ ಬೆಟ್ಟು, ಯೂನಿಕ್ ರಹ್ಮಾನ್, ಹಾಜಿ ಇಬ್ರಾಹಿಂ ಅಗ್ನಾಡಿ, ಇಸ್ಮಾಯಿಲ್ ತಂಙಳ್, ಶುಕೂರು ಮೈನಾ, ಕೂಟೇಲು ಮುಹಮ್ಮದ್, ಹಸೈನಾರ್ ಹಾಜಿ ಕೊಯಿಲ, ಅಶ್ರಫ್ ಹಾಜಿ ಪೆದ್ಮಲೆ, ಹಸೈನಾರ್ ಹಾಜಿ ಬಂಡಾಡಿ, ಮುಹೀನುದ್ದಿನ್ ಹುದವಿ, ಮುನೀರ್ ಎನ್ಮಾಡಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News