ಮಂಗಳೂರು ದಸರಾ ಸಂಭ್ರಮಕ್ಕೆ ತೆರೆ

Update: 2024-10-14 15:20 GMT

ಮಂಗಳೂರು: ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ರವಿವಾರ ಸಂಜೆ ಆರಂಭಗೊಂಡ ಮಂಗಳೂರು ದಸರಾ ಮೆರವಣಿಗೆ ಮಂಗಳೂರು ನಗರ ಪ್ರದಕ್ಷಿಣೆ ಯ ಬಳಿಕ ಸೋಮವಾರ ಮುಂಜಾನೆ ಮರಳಿ ಕುದ್ರೋಳಿ ಶ್ರೀ ಕ್ಷೇತ್ರದ ಪುಷ್ಕರಣಿ ಯಲ್ಲಿ ನವದುರ್ಗೆ ಯರು ಸೇರಿದಂತೆ ಶಾರದಾ ಮಾತೆಯ ವಿಗ್ರಹಗಳ ಪೂಜೆ, ವಿಗ್ರಹಗಳ ವಿಸರ್ಜನೆ ಯ ಬಳಿಕ ನಡೆದ ಜಳಕದೊಂದಿಗೆ ತೆರೆ ಕಂಡಿದೆ.

ಅ. 3ರಿಂದ 14ರವರೆಗೆಕುದ್ರೋಳಿ ಕ್ಷೇತ್ರದ ನವೀಕರಣದ ರೂವಾರಿ ಮಾಜಿ ಕೇಂದ್ರ ವಿತ್ತ ಸಚಿವ ಬಿ.ಜನಾರ್ದನ ಪೂಜಾರಿ ನೇತೃತ್ವದಲ್ಲಿ ನಡೆದ ನವರಾತ್ರಿ ಉತ್ಸವ ಹಾಗೂ ಕೊನೆಯಲ್ಲಿ ನಡೆದ ಮಂಗಳೂರು ದಸರಾ ಮೆರವಣಿಗೆ ವಿವಿಧ ಕಲಾ ತಂಡಗಳ ಕಲಾ ಪ್ರದರ್ಶನ, ಟ್ಯಾಬ್ಲೊ ದೊಂದಿಗೆ ನವದುರ್ಗೆಯರ ಮೆರವಣಿಗೆ ನಗರದ ಮಣ್ಣಗುಡ್ಡ ಮಾರ್ಗವಾಗಿ, ನಾರಾಯಣ ಗುರು ವೃತ್ತ -ಲಾಲ್‌ಬಾಗ್, ಬಲ್ಲಾಳ್‌ಬಾಗ್, ಪಿವಿಎಸ್ ವೃತ್ತ, ನವಭಾರತ್ ಸರ್ಕಲ್, ಕೆ.ಎಸ್‌. ರಾವ್ ರಸ್ತೆ, ಹಂಪನಕಟ್ಟೆ ವಿವಿ ಕಾಲೇಜು ವೃತ್ತದಿಂದ ಬಲಕ್ಕೆ ತಿರುಗಿ, ಗಣಪತಿ ಹೈಸ್ಕೂಲ್ ಮಾರ್ಗವಾಗಿ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ "ಕಾರ್‌ಸ್ಟ್ರೀಟ್, ಚಿತ್ರಾ ಟಾಕೀಸು, ಅಳಕೆ ಮಾರ್ಗ ವಾಗಿ ಶ್ರೀ ಕ್ಷೇತ್ರ ಕುದ್ರೋಳಿಗೆ ಸೋಮವಾರ ಮುಂಜಾನೆ ಮರಳಿದೆ.

*ಶ್ರೀ ಮಂಗಳಾದೇವಿಯಲ್ಲಿ ಮಹಾರಥೋ ತ್ಸವದೊಂದಿಗೆ ದಸರಾ ಸಂಭ್ರಮ:- ಶ್ರೀಮಹತೋಭಾರ ಮಂಗಳಾ ದೇವಿಯ ಮಹಾನವಮಿ ಉತ್ಸವ ಐತಿಹಾಸಿಕ ಮಾರ್ನಮಿ ಕಟ್ಟೆಯ ವರೆಗೆ ರವಿವಾರ ತಡರಾತ್ರಿ ವಿಜಯದಶಮಿಯ ಮಹಾ ರಥೋತ್ಸವದ ಮೆರವಣಿಗೆ ನಡೆದು ಸೋಮವಾರ ದೇವರ ಜಳಕ ಮಹಾಪೂಜೆ ಯೊಂದಿಗೆ ಸಮಾಪನ ಗೊಂಡಿದೆ.

* ಮಂಗಳೂರು ರಥ ಬೀದಿಯ ಶ್ರೀ ವೆಂಕಟ ರಣ ದೇವಸ್ಥಾನದ ಶ್ರೀ ಶಾರದಾ ಮಾತೆಯ ಶೋಭಾಯಾತ್ರೆ ಸೋಮವಾರ ಶ್ರೀ ಕ್ಷೇತ್ರದಿಂದ ಆರಂಭಗೊಂಡಿದೆ.

*ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದ 53ನೆ ವರ್ಷದ ಶ್ರೀ ಶಾರದಾ ಮಾತೆಯ ವಿಗ್ರಹದ ಮೆರವಣಿಗೆ ನಡೆದು ವಿಸರ್ಜನೆಗೊಂಡಿದೆ. ಸುರಿದ ತುಂತುರು ಮಳೆಯ ನಡುವೆ ಮಂಗಳೂರು ದಸರಾ ಮೆರವಣಿಗೆ ಸಂಭ್ರಮದ ತೆರೆ ಕಂಡಿದೆ.




 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News