ಅಲ್ ಮುಬಾರಕ್ ಮಸ್ಜಿದ್‌ನ ವುಝೂ ಕೊಠಡಿ ಉದ್ಘಾಟನೆ

Update: 2024-10-18 13:13 GMT

ಮಂಗಳೂರು: ಪಾವೂರು ಗ್ರಾಮದ ಮಲಾರ್ ಅರಸ್ತಾನದ ಅಲ್ ಮುಬಾರಕ್ ಜುಮಾ ಮಸ್ಜಿದ್‌ಗೆ ಮರ್ಹೂಂ ಹಾಜಿ ಪಿ.ಎಂ.ಅಬ್ದುಲ್ ಖಾದರ್ ಸ್ಮರಣಾರ್ಥ ಅವರ ಕುಟುಂಬಸ್ಥರು ಕೊಡುಗೆಯಾಗಿ ನೀಡಿದ ವುಝೂ ಕೊಠಡಿಯನ್ನು ಶುಕ್ರವಾರ ಉದ್ಘಾಟಿಸಲಾಯಿತು.

ಅಬ್ದುಲ್ ಖಾದರ್‌ರ ಹಿರಿಯ ಪುತ್ರ ಪಿ.ಎಂ. ಹನೀಫ್ ವುಝೂ ಕೊಠಡಿಯನ್ನು ಉದ್ಘಾಟಿಸಿದರು. ಜುಮಾ ಮಸೀದಿಯ ಅಧ್ಯಕ್ಷ ಎಂ.ಪಿ. ಅಬ್ದುಲ್ ರಹ್ಮಾನ್ ಅಧ್ಯಕ್ಷತೆ ವಹಿಸಿದ್ದರು. ಮಸೀದಿಯ ಖತೀಬ್ ಮುಹಮ್ಮದ್ ಶಫೀಕ್ ಅಲ್-ಫಾಳಿಲ್ ಕೌಸರಿ ದುಆಗೈದರು.

ಈ ಸಂದರ್ಭ ಮಸೀದಿಯ ಮಾಜಿ ಅಧ್ಯಕ್ಷ ಮುಹಮ್ಮದ್ ಮೋನು, ಹಂಝ ಮಲಾರ್, ಅಲ್ತಾಫ್ ಅಹ್ಮದ್, ಕುಟುಂಬದ ಸದಸ್ಯರಾದ ಅಬ್ದುಲ್ ಖಾದರ್ ಇನೋಳಿ, ಇಸ್ಮಾಯೀಲ್ ಪಜೀರ್, ಪಿ.ಎಂ. ಅಬ್ದುಲ್ ಹಮೀದ್, ಪಿ.ಎಂ. ಝಕರಿಯಾ, ಪಿ.ಎಂ. ಅನ್ವರ್, ಮದ್ರಸದ ಮುಖ್ಯ ಶಿಕ್ಷಕ ಶಹೀರ್ ಎಂ.ಎಸ್. ಅಲ್-ಫಾಳಿಲ್ ಕೌಸರಿ, ಶಿಕ್ಷಕ ಅಬ್ದುಲ್ ಜಬ್ಬಾರ್ ಯಮಾನಿ, ಮಸೀದಿಯ ಕೋಶಾಧಿಕಾರಿ ಮಿಸ್ಬಾಹ್, ಉಪಾಧ್ಯಕ್ಷ ಯಹ್ಯಾ, ಜೊತೆ ಕಾರ್ಯದರ್ಶಿ ರಿಝ್ವಾನ್, ಸದಸ್ಯರಾದ ಸಮದ್ ಜಿ, ಆಸಿಫ್ ಅಕ್ಷರನಗರ, ಸಮದ್ ಕೆ.ಎಂ., ಆಸಿಫ್ ಅರಸ್ತಾನ, ಅನ್ಸಾರ್, ಅಬ್ದುಲ್ ಮಜೀದ್, ಸಲಾಮ್ ಮುಸ್ಲಿಯಾರ್, ನಿಝಾಂ, ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ಎಂ.ಪಿ. ಹಸನ್, ಪಿ. ಸಮೀರ್, ಟಿ. ನಾಸಿರ್ ಮತ್ತಿತರರು ಉಪಸ್ಥಿತರಿದ್ದರು.

ಮಸೀದಿಯ ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ಅರಸ್ತಾನ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News