ಕಾಶಿಪಟ್ಣ ದಾರುನ್ನೂರ್ ಎಜುಕೇಶನ್ ಸೆಂಟರ್ ದಶಮಾನೋತ್ಸವ ಪ್ರಯುಕ್ತ ಸೌಹಾರ್ದ ಸ್ನೇಹ ಸಂಗಮ ಕಾರ್ಯಕ್ರಮ

Update: 2024-11-04 17:01 GMT

ಮೂಡುಬಿದಿರೆ: ಕಾಶಿಪಟ್ಣ ದಾರುನ್ನೂರ್ ಎಜುಕೇಶನ್ ಸೆಂಟರ್ ನ ದಶಮಾನೋತ್ಸವ ಪ್ರಯುಕ್ತ ಸೌಹಾರ್ದ ಸ್ನೇಹ ಸಂಗಮ ಕಾರ್ಯಕ್ರಮವು ರವಿವಾರ ಕಾಶಿಪಟ್ಣದ ವಿದ್ಯಾಸಂಸ್ಥೆಯಲ್ಲಿ ನಡೆಯಿತು.

ಸೌಹಾರ್ದ ಸ್ನೇಹ ಸಂಗಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ. ಎಂ. ಮೋಹನ ಆಳ್ವ ಅವರು, ನಮ್ಮ ಪೂರ್ವಜರು ನಮಗೆ ಒಂದೊಂದು ಧರ್ಮದ ಹಾದಿಯನ್ನು ತೋರಿಸಿಕೊಟ್ಟಿದ್ದಾರೆ ಹೊರತು ಪರಸ್ಪರ ಧ್ವೇಷಿಸುವಂತೆ ಹೇಳಿಲ್ಲ. ಎಲ್ಲರೂ ಅವರವರ ಧರ್ಮದ ಜೊತೆಗೆ ಸೌಹಾರ್ದ ಬದುಕಿನ ಹಾದಿಯನ್ನಷ್ಟೇ ತೋರಿಸಿದ್ದಾರೆ. ನಮ್ಮ ಪೂರ್ವಜರು ತೋರಿಸಿದ ಹಾದಿಯಲ್ಲೇ ನಮ್ಮ ಧರ್ಮದ ಸಾರವನ್ನು ಅರಿತುಕೊಂಡು ಸೌಹಾರ್ದ ಜೀವನ ನಡೆಸಬೇಕೆಂದು ನುಡಿದರು.

ಇದೇ ಸಂದರ್ಭ ದಾರುನ್ನೂರ್ ವಿದ್ಯಾ ಸಂಸ್ಥೆಯ ವತಿಯಿಂದ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ. ಎಂ. ಮೋಹನ ಆಳ್ವ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಹಿರಿಯರಾದ ಪಿ.ಕೆ. ರಾಜು ಪೂಜಾರಿ, ಕಾಶಿಪಟ್ಣ ಪಂಚಾಯತ್ ಅಧ್ಯಕ್ಷ ಸತೀಶ್ ಕೆ., ಪ್ರವೀಣ್ ಪಿಂಟೊ, ಅನೀಸ್ ಕೌಸರಿ, ತನ್ಝೀಮ್ ಸಂಸ್ಥೆಯ ಮುಖ್ಯಸ್ಥ ಇನಾಯತ್ ಆಲಿ, ಮಂಗಳೂರು ಮಾಜಿ ಮೇಯರ್ ಕೆ.ಅಶ್ರಫ್, ಅಬ್ದುಲ್ ರಶೀದ್ ಹಾಜಿ, ಜಾವೆದ್ ಯೆನಪೋಯ, ನಿವೃತ್ತ ಪೊಲೀಸ್ ಅಧಿಕಾರಿ ಜಿ‌.ಎ.ಬಾವಾ, ಹನೀಫ್ ಹಾಜಿ, ಸಮದ್ ಹಾಜಿ, ಇಬ್ರಾಹಿಂ ಕೋಡಿಜಾಲ್, ಅದ್ದು ಹಾಜಿ, ಶರೀಫ್ ಹಾಜಿ ವೈಟ್ ಸ್ಟೋನ್, ಫಕೀರಬ್ಬ ಮಾಸ್ಟರ್, ಡಿ.ಎ. ಉಸ್ಮಾನ್ ಹಾಜಿ, ಅಬ್ದುಸ್ಸಲಾಮ್ ಬೂಟ್ ಬಝಾರ್, ಅಬೂಬಕ್ಕರ್ ಮರೋಡಿ, ಎಚ್. ಮುಹಮ್ಮದ್ ವೇಣೂರು, ಅಮೀನ್ ಹುದವಿ, ಹುಸೈನ್ ರಹ್ಮಾನಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News