ವೇತನ ಕೇಳಿದ್ದಕ್ಕೆ ಬೆದರಿಕೆಯೊಡ್ಡಿದ ಆರೋಪ: ಸುಳ್ಯ ಚೆನ್ನಕೇಶವ ದೇವಸ್ಥಾನದ ಮ್ಯಾನೇಜರ್ ವಿರುದ್ಧ ಪ್ರಕರಣ ದಾಖಲು
Update: 2024-11-04 17:55 GMT
ಸುಳ್ಯ: ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಅಡುಗೆ ಕೆಲಸ ಮಾಡುತ್ತಿರುವ ಹರೀಶ್ ಭಟ್ ಎಂಬವರು ವೇತನ ಕೇಳಿದ್ದಕ್ಕೆ ದೇವಸ್ಥಾನದ ಮ್ಯಾನೇಜರ್ ಕೃಷ್ಣ ಭಟ್ ಸೋಮಯಾಜಿ ಎಂಬವರು ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿ ಇಲ್ಲಿನ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ.
ವೇತನ ಕೇಳಿದಕ್ಕೆ ಕೃಷ್ಣ ಭಟ್ ಸೋಮಯಾಜಿ ನನಗೆ ಹೊಡೆದು ಹೊರಗೆ ಹಾಕುವುದಾಗಿ ಬೆದರಿಕೆ ಒಡ್ಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಬಗ್ಗೆ ಕೃಷ್ಣ ಭಟ್ ಸೋಮಯಾಜಿಯನ್ನು ವಿಚಾರಿಸಿದಾಗ ”ಹರೀಶ್ ಭಟ್ ಅವರಿಗೆ ಹೊಡೆಸುವುದಾಗಿ ನಾನು ಹೇಳಿಲ್ಲ. ಅವರು ಏನೆಲ್ಲ ಮಾತಾಡಿದಾಗ ನಿಮಗೆ ಪೆಟ್ಟೇ ಮದ್ದು ಎಂದು ಹೇಳಿದ್ದೇನೆ” ಎಂದು ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.