ರೈಲ್ವೆ ಕಾಮಗಾರಿ ತ್ವರಿತ ಗೊಳಿಸಲು ಸಂಸದ ಬೃಜೇಶ್ ಚೌಟ ಸೂಚನೆ

Update: 2024-11-04 17:23 GMT

ಮಂಗಳೂರು: ರೈಲ್ವೆ ಕಾಮಗಾರಿ ಪ್ರಗತಿ ವಿಳಂಬ ವಾಗಿರುವ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಸಂಸದ ಬೃಜೇಶ್ ಚೌಟ ಮಂಗಳೂರು ಜಂಕ್ಷನ್, ಬಂಟ್ವಾಳ , ಜಪ್ಪು ಮಹಾಕಾಳಿ ಪಡ್ಪು ಬಳಿಯ ಕಾಮಗಾರಿ ಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣ ಗೊಳಿಸುವಂತೆ ಮತ್ತು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಹೆಚ್ಚು ವರಿ ಪ್ಲಾಟ್ ಫಾರಂ ಮತ್ತು ಟರ್ಮಿನಲ್ ನಿರ್ಮಾಣದ ಬಗ್ಗೆ ಸಲ್ಲಿಸಲಾದ ಯೋಜನೆಯನ್ನು ತ್ವರಿತಗೊಳಿಸಲು ಸೂಚಿಸಿದರು.

ಅವರು ಸೋಮವಾರ ದ.ಕ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡ ರೈಲ್ವೇ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷ ತೆ ವಹಿಸಿ ಮಾತನಾಡುತ್ತಿದ್ದರು.

ಮಂಗಳೂರು ಜಂಕ್ಷನ್ (ಕಂಕನಾಡಿ)ರೈಲ್ವೆ ನಿಲ್ದಾಣದ ಕಾಮಗಾರಿ ಜನವರಿ ತಿಂಗಳಲ್ಲಿ ಪೂರ್ಣ ಗೊಳ್ಳಬೇಕಾಗಿತ್ತು. ಇದುವರೆಗೆ ನಡೆಯುತ್ತಿರುವ ಕಾಮಗಾರಿ ವಿಳಂಬ ವಾಗಿ ನಡೆಯುತ್ತಿದೆ.ಅದೇ ರೀತಿ ಜಪ್ಪು ಮಹಾಕಾಳಿ ಪಡ್ಪು ರೈಲ್ವೆ ಮೇಲ್ ಸೇತುವೆ ಕಾಮಗಾರಿ ಯಾವಾಗ ಪೂರ್ಣ ಗೊಳ್ಳುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿಗಳು ಜನವರಿ 25ರೊಳಗೆ ಪೂರ್ಣ ಗೊಳಿಸುವುದಾಗಿ ಭರವಸೆ ವ್ಯಕ್ತಪಡಿಸಿದರು.

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಹೆಚ್ಚು ವರಿ ಪ್ಲಾಟ್ ಫಾರಂ ಮತ್ತು ಟರ್ಮಿನಲ್ ನಿರ್ಮಾಣದ ಬಗ್ಗೆ ರೈಲ್ವೇ ಪ್ರಧಾನ ಕಚೇರಿಗೆ ಯೋಜನೆಯ ಡಿಪಿಆರ್ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಬಂಟ್ವಾಳ ರೈಲ್ವೆ ನಿಲ್ದಾಣದ ಕಾಮಗಾರಿ ವಿಳಂಬ ವಾಗಿದೆ ಈ ಬಗ್ಗೆ ತಕ್ಷಣ ಗಮನಹರಿಸಿ ಕಾಮಗಾರಿ ಪೂರ್ಣ ಗೊಳಿಸಲು ಸಂಸದ ಬೃಜೇಶ್ ಚೌಟ ಅಧಿಕಾರಿಗಳಿಗೆ ಸೂಚಿಸಿದರು.

ಪಾಂಡೇಶ್ವರ ರೈಲ್ವೆ ಗೇಟಿನ ಸಮಸ್ಯೆಯ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಯಿತು. ಮಂಗಳೂರು ಡಿಸಿಪಿ ಇದರಿಂದ ಪ್ರತಿನಿತ್ಯ ಸಾರ್ವಜನಿಕ ಕರು ಬಹಳ ಹೊತ್ತು ಕಾಯುವ ಮೂಲಕ ತೊಂದರೆ ಗೀಡಾ ಗುತ್ತಿರುವ ಬಗ್ಗೆ ಮತ್ತು ಟ್ರಾಫಿಕ್ ಸಮಸ್ಯೆ ಯ ಬಗ್ಗೆ ದಾಖಲೆ ಸಹಿತ ಸಭೆಗೆ ವರದಿ ನೀಡಿದರು. ಉಳ್ಳಾಲ ಗೂಡ್ಸ ಶೆಡ್ ಕಾಮಗಾರಿ ಪ್ರಗತಿಯಲ್ಲಿದೆ ಆ ಕಾಮಗಾರಿ ಪೂರ್ಣ ಗೊಂಡ ಬಳಿಕ ಒತ್ತಡ ಕಡಿಮೆ ಯಾಗುತ್ತದೆ ಎಂದು ರೈಲ್ವೆ ಅಧಿಕಾರಿ ಗಳು ಸಭೆಗೆ ಮಾಹಿತಿ ನೀಡಿದರು.

ಮಂಗಳೂರು ಜಂಕ್ಷನ್ ಬಳಿಯ ಬಜಾಲ್ ಅಂಡರ್ ಪಾಸ್ ನಲ್ಲಿ ಮಳೆಗಾಲದಲ್ಲಿ ನೀರು ತುಂಬಿ ಸಾರ್ವಜನಿಕ ಕರ ಸಂಚಾರಕ್ಕೆ ತೊಂದರೆ ಯಾಗುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳಿಗೆ ಸೂಕ್ತ ಯೋಜನೆ ರೂಪಿಸುವಂತೆ ಬೃಜೇಶ್ ಚೌಟ ಸೂಚನೆ ನೀಡಿದರು.

ಸಭೆಯಲ್ಲಿ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವನ್ನು ಉನ್ನತೀಕರಿಸಿದ ಕಾಮಗಾರಿಯನ್ನು ತ್ವರಿತಗೊಳಿಸುವ ಬಗ್ಗೆ, ಫರಂಗಿಪೇಟೆಯಲ್ಲಿ ಪೂರ್ಣ ಪ್ರಮಾಣದ ರೈಲ್ವೆ ನಿಲ್ದಾಣ,ಪುತ್ತೂರು ರೈಲು ನಿಲ್ದಾಣದ ಮೇಲ್ಚಾವಣಿ ವಿಸ್ತರಣೆ,ಪುತ್ತೂರು ರೈಲ್ವೆ ಅಂಡರ್ ಪಾಸ್ ಕಾಮಗಾರಿ, ತೊಕ್ಕೊಟ್ಟು ಒಳಪೇಟೆ ಸಂಪರ್ಕ ಪಾದಾಚಾರಿಗಳ ಸಂಚಾರಕ್ಕೆ ಅನುಕೂಲ ಮಾಡಿ ಕೊಡುವ ಬಗ್ಗೆ, ಬೈಕಂಪಾಡಿ ಮೇಲ್ಸೆತುವೆ, ಮರವೂರು ಸೇತುವೆ ಬಳಿಯ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಯಿತು.

ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಶಾಸಕರಾದ ಉಮಾ ನಾಥ ಕೋಟ್ಯಾನ್, ಡಾ.ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ಮನಪಾ ಮೇಯರ್ ಮನೋಜ್ ಕುಮಾರ್, ಪಾಲ್ಘಾಟ್ ರೈಲ್ವೆ ವಿಭಾಗದ ಎಡಿಆರ್ ಅನಿಲ್ ಕುಮಾರ್, ಕೊಂಕಣ ರೈಲ್ವೆ ವಿಭಾಗದ ಆಶಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News