ಹಳೆಯಂಗಡಿ: ಫೋರಂ ಫಾರ್ ಎಜುಕೇಶನ್ ನ ಲೋಗೋ ಅನಾವರಣ

Update: 2024-11-18 16:27 GMT

ಹಳೆಯಂಗಡಿ: ಫೋರಂ ಫಾರ್ ಎಜುಕೇಶನ್ ಹಳೆಯಂಗಡಿ ಇದರ ಲೋಗೋ ಅನಾವರಣ ಮತ್ತು ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮವು ಹಳೆಯಂಗಡಿಯ ಹೆಬ್ರಾನ್ ಅಸೆಂಬ್ಲಿ ಚರ್ಚ್ ವಠಾರದಲ್ಲಿ ಶನಿವಾರ ನಡೆಯಿತು.

ಫೋರಂ ಫಾರ್ ಎಜುಕೇಶನ್ ಹಳೆಯಂಗಡಿ ಇದರ ಕಾರ್ಯದರ್ಶಿ ಝಿಯಾವುಲ್ ಹಖ್ ಪಟೇಲ್ ಪ್ರಾಸ್ತಾವಿಕವಾಗಿ ಮಾತ ನಾಡಿ, ಸಂಸ್ಥೆಯ ಪರಿಚಯ ಮಾಡಿದರು. ಫಾರಂನ ಲೆಕ್ಕ ಪರಿಶೋಧಕ ಕಲಂದರ್ ಕೌಶಿಕ್, 'ನಾಗರಿಕ ಸೇವೆಯಲ್ಲಿ ಮುಸ್ಲಿಮ್ ಸಮುದಾಯದ ಪ್ರಾತಿನಿಧ್ಯ' ಎಂಬ ವಿಷಯದಲ್ಲಿ ವಿಚಾರ ಮಂಡನೆ ಮಾಡಿದರು. ಸಂಸ್ಥೆಯ ಚೇಯರ್ ಮೆನ್ ಅನ್ವರ್ ಹುಸೈನ್ ತೈತೋಟ ಫಾರಂನ ವಾರ್ಷಿಕ ಯೋಜನೆಗಳ ಬಗ್ಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಮುಹಿಯ್ಯದ್ದೀನ್ ಜುಮಾ ಮಸ್ಜಿದ್ ಬೊಳ್ಳೂರು ಇದರ ಕಾರ್ಯದರ್ಶಿ ಸುಲೈಮಾನ್ ಕೊಪ್ಪಲ, ಉಪಾಧ್ಯಕ್ಷ ಅಬ್ದುಲ್ ರಹ್ಮಾನ್ ಇಂದಿರಾನಗರ, ಹೊಸಂಗಡಿ-ಕದಿಕೆ ಜುಮಾ ಮಸ್ಜಿದ್ ಉಪಾಧ್ಯಕ್ಷ ಬಶೀರ್ ಕಲ್ಲಾಪು, ಬದ್ರಿಯಾ ಜುಮಾ‌ ಮಸ್ಜಿದ್ ಸಾಗ್ ಇದರ ಉಪಾಧ್ಯಕ್ಷ ಅಬ್ದುಲ್ ಖಾದರ್, ಅಲ್ ಮದ್ರಸತುಲ್ ಖಿಲ್ರಿಯಾ ಇಂದಿರಾನಗರ ಇದರ ಅಧ್ಯಕ್ಷ ಯೂಸುಫ್, ಕಾರ್ಯದರ್ಶಿ ನಝೀರ್ ಎಂ.ಎಂ., ನೂರುಲ್ ಹುದಾ ಮದ್ರಸ ಕಮಿಟಿಯ ಅಧ್ಯಕ್ಷ ಜಮಾಲು ದ್ದೀನ್ ಕದಿಕೆ, ಸಿಕ್ಸರ್ ಅಸೋಸಿಯೇಷನ್ ಕದಿಕೆ ಇದರ ಅಧ್ಯಕ್ಷ ಮುಸ್ತಫಾ, ಅಲ್ ಬದ್ರಿಯಾ ಯಂಗ್ ಮೆನ್ಸ್ ಅಸೋಸಿ ಯೇಶನ್ ಅಧ್ಯಕ್ಷ ಫಾರೂಕ್ ಸಾಗ್, ರಿಲಯನ್ಸ್ ಅಸೋಸಿಯೇಷನ್ ಬೊಳ್ಳೂರು ಇದರ ಲೆಕ್ಕಪರಿಶೋಧಕ ಅಕ್ಬರ್ ಬೊಳ್ಳೂರು, ಸಾಗರ್ ಸಾಗ್ ಸ್ಪೋರ್ಟ್ಸ್ ಇದರ ಅಧ್ಯಕ್ಷ ಹಫೀಝ್ ಸಾಗ್, ಹಳೆಯಂಗಡಿ ಗ್ರಾಮ ಪಂಚಾಯತ್ ಸದಸ್ಯ ರಾದ ಅಬ್ದುಲ್ ಖಾದರ್, ಅಝೀಝ್ ಐಎಕೆ, ಮಾಜಿ ಸದಸ್ಯರಾದ ಎಚ್.ಎಸ್.ಹಮೀದ್ ಸಾಗ್, ಎಚ್.ಎಂ.ಬಶೀರ್ ಸಾಗ್ ಉಪಸ್ಥಿತರಿದ್ದರು.

ಫೋರಂ ಫಾರ್ ಎಜುಕೇಶನ್ ನ ವೈಸ್ ಚೆಯರ್ ಮೆನ್ ಮುಹಮ್ಮದ್‌ ಇರ್ಷಾದ್ ಕದಿಕೆ ವಂದಿಸಿದರು. ಫೋರಂನ ಸದಸ್ಯ ಇಕ್ಬಾಲ್ ಎಂ.ಎ. ಕಾರ್ಯಕ್ರಮ ನಿರೂಪಿಸಿದರು.



Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News