ಮಂಗಳೂರು: ಎಲ್ಇಡಿ ಬಲ್ಬ್ ಅಸೆಂಬ್ಲಿಂಗ್ ತರಬೇತಿ ಶಿಬಿರ
ಮಂಗಳೂರು: ಕಂಕನಾಡಿಯ ಟಾಲೆಂಟ್ ರಿಸರ್ಚ್ ಫೌಂಡೇಶನ್ ಹಾಗೂ ರಾಯಲ್ ಗ್ಲೀಮ್ ಕಂಪನಿ ಸಹಯೋಗದಲ್ಲಿ ಏರ್ಪಡಿಸಿದ್ದ ಎಲ್ಇಡಿ ಬಲ್ಬ್ ಅಸೆಂಬ್ಲಿಂಗ್ ತರಬೇತಿ ಶಿಬಿರ ಯಶಸ್ವಿಯಾಗಿ ನೆರವೇರಿತು.
75ಕ್ಕೂ ಹೆಚ್ಚು ಪುರುಷರು ಮತ್ತು ಮಹಿಳೆಯರು ಈ ಉಚಿತ ತರಬೇತಿಯಲ್ಲಿ ಪಾಲ್ಗೊಂಡು ಎಲ್ಇಡಿ ಮತ್ತು ಎಸಿ-ಡಿಸಿ ಬಲ್ಬ್ ಅಸೆಂಬ್ಲಿಂಗ್ ಮಾಡುವ ಕೌಶಲ್ಯದ ತರಬೇತಿಯನ್ನು ಪಡೆದರು.
ಈ ಶಿಬಿರದಲ್ಲಿ ರಾಯಲ್ ಗ್ಲೀಮ್‌ನಿಂದ ಅಬ್ದುಲ್ ಹಮೀದ್ ಮತ್ತು ಮೊಹಮ್ಮದ್ ಹುಸೇನ್, ಸ್ವಯಂ ಸೇವಕರಾದ ಮೊಹಮ್ಮದ್ ಶಫಿ, ಶೇಖ್ ಮೊಹಮ್ಮದ್ ಫಾರಿಸ್, ಮೊಯಿನ್ ಹುಸೇನ್ ಹಾಗೂ ಟಾಲೆಂಟ್ ರಿಸರ್ಚ್ ಫೌಂಡೇಶನ್‌ನಿಂದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಕಣ್ಣೂರ್ ಸ್ವಾಗತಿಸಿದರು. ಅಬ್ದುಲ್ ಮಜೀದ್, ನಾಕಾಶ್ ಬಾಂಬಿಲ ಮತ್ತು ನಾಝಿಕ್ ಬಜಾಲ್ ಸಹಕರಿಸದರು.
ಸಮುದಾಯದ ಉಜ್ವಲ ಭವಿಷ್ಯಕ್ಕಾಗಿ ಈ ರೀತಿಯ ಕೌಶಲ್ಯಾಭಿವೃದ್ಧಿ ಶಿಬಿರಗಳನ್ನು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ವಿವಿಧೆಡೆ ಸ್ಥಳೀಯ ಎನ್‌ಜಿಒಗಳ ಸಹಯೋಗದಿಂದ ಮುಂದುವರಿಸಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.