ಯುವತಿ ನಾಪತ್ತೆ
Update: 2024-12-26 15:06 GMT
ಮಂಗಳೂರು: ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾಗಿದ್ದ ಸೌಮ್ಯ (21) ಎಂಬಾಕೆ ಡಿ.23 ರಂದು ತನ್ನ ಮನೆಯಿಂದ ಹೊರ ಹೋದವರು ವಾಪಸ್ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.
4.9 ಅಡಿ ಎತ್ತರದ, ಬಿಳಿ ಮೈ ಬಣ್ಣದ, ಕನ್ನಡ, ಹಿಂದಿ, ತುಳು, ಇಂಗ್ಲಿಷ್ ಮಾತನಾಡುವ ಈಕೆ ಬಿಳಿ ಮತ್ತು ಕಪ್ಪುಚೌಕುಳಿ ಇರುವ ಹಾಗೂ ಗುಲಾಬಿ ಬಣ್ಣದ ಹೂವುಗಳಿರುವ ಚೂಡಿದಾರ ಟಾಪ್ ಮತ್ತು ಗುಲಾಬಿ ಬಣ್ಣದ ಶಾಲು ಮತ್ತು ಲಗೀನ್ಸ್ ಧರಿಸಿದ್ದಾರೆ. ಈಕೆಯ ಬಗ್ಗೆ ಮಾಹಿತಿ ಇದ್ದಲ್ಲಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.