ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ: ಕಾರ್ಯಾಲಯ ಉದ್ಘಾಟನೆ
ಕಾವೂರು,ಜ.7: ಧಾರ್ಮಿಕ ದತ್ತಿ ಇಲಾಖೆ ಅಧೀನದ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ, ಬ್ರಹ್ಮಕಲೋತ್ಸವ ಸಮಿತಿಯ ವತಿಯಿಂದ ಕ್ಷೇತ್ರದಲ್ಲಿ ಮಾ.1ರಿಂದ ನಡೆಯುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಪ್ರಯುಕ್ತ ಕಾರ್ಯಾಲಯ ಉದ್ಘಾಟನೆ ಸೋಮವಾರ ಜರುಗಿತು.
ಸಂಸದ ಬ್ರಿಜೇಶ್ ಚೌಟ ನೂತನ ಕಾರ್ಯಾಲಯವನ್ನು ಉದ್ಘಾಟಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೇವಾಲಯಗಳು ದೈವಸ್ಥಾನಗಳು ಅಭಿವೃದ್ಧಿ ಧಾರ್ಮಿಕ ಅನುಷ್ಠಾನಗಳು ದೇಶದ ಬೇರೆ ಎಲ್ಲಿಯೂ ಕಾಣಿಸುವುದಿಲ್ಲ. ಶ್ರದ್ಧಾ ಭಕ್ತಿ, ಪ್ರಾಮಾಣಿಕತೆಯಿಂದ ಉಳ್ಳವರು ತನು ಮನ ಧನದ ಸಹಕಾರದಿಂದ ಆರಾಧನಾ ಕೇಂದ್ರವನ್ನು ಶಕ್ತಿಯುತಗೊಳಿಸಿ ಹಿಂದೂ ಸಮಾಜದ ಒಗ್ಗಟ್ಟಿನ ಪ್ರತಿರೂಪವಾಗಿ ಬೆಳೆಸಬೇಕಿದೆ. ತನ್ನಿಂದಾದ ಸರ್ವ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.
ಶಾಸಕ ಡಾ.ಭರತ್ ಶೆಟ್ಟಿ ವೈ. ಮಾತನಾಡಿ, ಸರಕಾರದಿಂದ ಈ ಹಿಂದೆ 50 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಬ್ರಹ್ಮ ಕಲಶೋತ್ಸವದ ಈ ಸಂದರ್ಭದಲ್ಲಿ ಶಾಸಕ ನಿಧುಯಿಂದ 10 ಲಕ್ಷ ರೂ. ಒದಗಿಸುವುದಾಗಿ ಭರವಸೆ ನೀಡಿದರು.
ಬ್ರಹ್ಮಕಲಕೋತ್ಸವ ಸಮಿತಿಯ ಗೌರವಾಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಿ ಸರ್ವರ ಸಹಕಾರ ಯಾಚಿಸಿದರು.
ಕ್ಷೇತ್ರದ ಅರ್ಚಕ ಶ್ರೀನಿವಾಸ ಭಟ್ ಆಶೀರ್ವವಚನ ನೀಡಿದರು. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮೋಹನ್ ಪ್ರಭು, ಸಮಿತಿಯ ಪ್ರಮುಖರಾದ ಆಶಿಶ್ ಬಳ್ಳಾಲ್, ಸುಧಾಕರ ಶೆಟ್ಟಿ ಮುಗ್ರೋಡಿ, ಕಾರ್ಯಾಧ್ಯಕ್ಷ ಅವಿನಾಶ್ ನಾಯಕ್, ಉದ್ಯಮಿ ಕಿಶೋರ್ ಸುವರ್ಣ, ಹರೀಶ್ ಶೆಟ್ಟಿ, ಪ್ರದ್ಯುಮ್ನ ರಾವ್ ಶಿಬರೂರು, ಡಾ.ಅರುಣ್ ರೈ ದೇರ್ಲ, ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರು, ವ್ಯವಸ್ಥಾಪನ ಸಮಿತಿಯ, ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಸಮಿತಿಯ ಪದಾಧಿಕಾರಿಗಳು, 7 ಗ್ರಾಮಗಳ ಭಕ್ತಾದಿಗಳು ಉಪಸ್ಥಿತರಿದ್ದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಧಾಕರ ಆಳ್ವ ಸ್ವಾಗತಿಸಿದರು. ಪ್ರಿಯಾ ಹರೀಶ್ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ದೀಪಕ್ ಪೂಜಾರಿ ವಂದಿಸಿದರು.