ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಪಾಲಿಕೆ ಬದ್ಧ: ಆನಂದ್ ಸಿ.ಎಲ್

Update: 2025-01-07 12:46 GMT

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಗೆ ಪೂರೈಕೆಯಾಗುವ ಕುಡಿಯುವ ನೀರು ತುಂಬೆ ಹಾಗೂ ಬೆಂದೂರು ಸ್ಥಾವರಗಳ ಎರಡು ಪ್ರಯೋಗಾಲಯಗಳಲ್ಲಿ ಪ್ರತಿನಿತ್ಯ ಪರೀಕ್ಷೆಗೊಳಪಡುತ್ತದೆ. ಸಾರ್ವಜನಿಕರು ಯಾವುದೇ ರೀತಿಯ ಗೊಂದಲಕ್ಕೆ ಒಳಗಾಗಬಾರದು ಹಾಗೂ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಪಾಲಿಕೆ ಬದ್ಧ ಎಂದು ಪಾಲಿಕೆ ಆಯುಕ್ತ ಆನಂದ್ ಸಿ.ಎಲ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಎನ್‌ಎಬಿಎಲ್ ರಾಷ್ಟ್ರೀಯ ಮಾನ್ಯತೆ ಪಡೆಯುವ ಉದ್ದೇಶದಿಂದ ಈಗಾಗಲೇ ಬೆಂದೂರು ಸ್ಥಾವರದ ಪ್ರಯೋಗಾಲಯ ವನ್ನು ನಿಯಮಾನುಸಾರ ಉನ್ನತೀಕರಿಸುವ ಕಾರ್ಯ ಪ್ರಗತಿಯಲ್ಲಿದೆ. ನೀರಿನ ರೋಗಕಾರ ಬ್ಯಾಕ್ಟೀರಿಯ ನಿರ್ಮೂಲನೆ ಗಾಗಿ ತುಂಬೆ, ಬೆಂದೂರು ಹಾಗೂ ಪಣಂಬೂರು ಸ್ಥಾವರಗಳಲ್ಲಿ ನಿರಂತರ ಕ್ಲೋರಿನೇಶನ್ ಮಾಡಲಾಗುವುದು. ಕ್ಲೀನ್ ಡೋಸೇಜ್ ಬಳಿಕ ರೆಸಿಡುವಲ್ ಕ್ಲೋರಿನ್ 0.2 ಪಿಪಿಎಂ ಕಾಯ್ದುಕೊಳ್ಳಲಾಗುವುದು. ಪ್ರತಿ ತಿಂಗಳು ವಿವಿಧ ಪಂಪ್‌ಹೌಸ್ ಹಾಗೂ ವಾರ್ಡ್‌ಗಳ ನೀರಿನ ಗುಣಮಟ್ಟವನ್ನು ಫಿಶರೀಸ್ ಕಾಲೇಜಿನ ಪ್ರಯೋಗಾಲಯದಲ್ಲಿ ಪರೀಕ್ಷಿಸಿ ದಾಖಲೀಕರಣ ಮಾಡಲಾಗಿದೆ. ತುಂಬೆ ಪ್ರಯೋಗಾಲಯದಲ್ಲಿ ಸರಕಾರದ ನಿಯಮಾನುಸಾರ ಪ್ರಾಥಮಿಕ ಹಂತದ ಪರೀಕ್ಷೆಗಳಾದ ಟರ್ಬಿಡಿಟಿ, ಪಿಎಚ್, ಕ್ಲೋರೈಡ್, ಅಲ್ಕಲೈನಿಟಿ, ಹಾರ್ಡ್‌ನೆಸ್, ರೆಸಿಡುವಲ್ ಕ್ಲೋರಿನ್ ಗುಣಮಟ್ಟ ಪರೀಕ್ಷಿಸಿದ ಬಳಿಕ ಬೆಂದೂರ ಪ್ರಯೋಗಾಲಯದಲ್ಲಿ ಆಡರ್, ಟೇಸ್ಟ್, ಪಿಎಚ್, ಕ್ಲೋರೈಡ್, ಅಲ್ಕಲೈನಿಟಿ, ಹಾರ್ಡ್‌ನೆಸ್, ಕ್ಯಾಲ್ಸಿಯಂ, ಮೆಗನೀಸಿಮಮ್, ರೆಸಿಡುವಲ್ ಕ್ಲೋರಿನ್, ಐಯರ್ನ್, ಫ್ಲುರೈಡ್, ನೈಟ್ರೇಟ್, ಸಲ್ಫೇಟ್, ಗುಣಮಟ್ಟ ಪರೀಕ್ಷಿಸಿ ದಾಖಲೀಕರಣ ಮಾಡಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಮನಪಾ ವ್ಯಾಪ್ತಿಯಲ್ಲಿ ಯಾವುದೇ ಕಾಯಿಲೆಗಳು ನೀರಿನ ಬಳಕೆದಾರರನ್ನು ಬಾಧಿಸಿದ ಪ್ರಕರಣಗಳು ದಾಖಲಾಗಿಲ್ಲ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News