ಸಿಸಿಬಿ ನೂತನ ಇನ್‌ಸ್ಪೆಕ್ಟರ್ ಆಗಿ ರಫೀಕ್ ಕೆ.ಎಂ. ನೇಮಕ

Update: 2025-01-11 17:14 GMT

ಮಂಗಳೂರು, ಜ.11: ಸಿಸಿಬಿ (ನಗರ ಅಪರಾಧ ವಿಭಾಗ)ದ ನೂತನ ಇನ್‌ಸ್ಪೆಕ್ಟರ್ ಆಗಿ ರಫೀಕ್ ಕೆ.ಎಂ. ಅವರನ್ನು ನೇಮಕಗೊಳಿಸಿ ರಾಜ್ಯ ಗೃಹ ಇಲಾಖೆ ಆದೇಶಿಸಿದೆ.

ಈ ಹಿಂದೆ ಇನ್‌ಸ್ಪೆಕ್ಟರ್ ಆಗಿದ್ದ ಶ್ಯಾಮ್‌ಸುಂದರ್ ಅವರನ್ನು ವರ್ಗಾವಣೆಗೊಳಿಸಲಾಗಿದ್ದು, ಅವರ ಸ್ಥಾನಕ್ಕೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಇನ್‌ಸ್ಪೆಕ್ಟರ್ ಆಗಿದ್ದ ರಫೀಕ್‌ರನ್ನು ನಿಯುಕ್ತಿಗೊಳಿಸಲಾಗಿದೆ.

ಮೂಲತಃ ವಿಟ್ಲದ ರಫೀಕ್ ಈ ಹಿಂದೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಕದ್ರಿ, ಪಣಂಬೂರು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಬೆಂಗಳೂರಿನ ಪುಲಕೇಶಿನಗರ ಹೈಗ್ರೌಂಡ್ ಪೊಲೀಸ್ ಇನ್‌ಸ್ಪೆಕ್ಟರ್ ಆಗಿದ್ದ ಅವರು ಕೆಲವು ಸಮಯದ ಹಿಂದೆ ವಿಧಾನಸೌಧ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News