ಯುವಕ ನಾಪತ್ತೆ

Update: 2025-01-11 17:18 GMT

ಮಂಗಳೂರು, ಜ.11: ನಗರದ ಬಜಾಲ್ ಗ್ರಾಮದ ಕುತ್ತಡ್ಕ ಎಂಬಲ್ಲಿನ ನಾರಾಯಣ ರೈ ಎಂಬವರ ಮಗ ಚರಣ್ ರಾಜ್ (22) ಎಂಬಾತ ಕಳೆದ ವರ್ಷದ ಡಿಸೆಂಬರ್ 1ರಿಂದ ಕಾಣೆಯಾದ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ಯಾಂಕ್‌ವೊಂದರಲ್ಲಿ ಕ್ರೆಡಿಟ್ ಕೆಲಸ ಮಾಡಿಕೊಂಡಿದ್ದ ಚರಣ್‌ರಾಜ್ ಬಳಿಕ ಕೆಲಸ ಬಿಟ್ಟು ಮನೆಯಲ್ಲೇ ಇದ್ದು, ಡಿಸೆಂಬರ್ 1ರಿಂದ ಬೆಳಗ್ಗೆ 9ರಿಂದ ಮನೆಯಿಂದ ಹೊರಗೆ ಹೋದಾತ ಮತ್ತೆ ಮರಳಿ ಬಂದಿಲ್ಲ. ಆ ದಿನ ರಾತ್ರಿ ಮನೆಗೆ ಬರುವುದಾಗಿ ಹೇಳಿದರೂ ಬಾರದಿದ್ದಾಗ ಫೋನ್ ಕರೆ ಮಾಡಿ ವಿಚಾರಿಸಿದೆ. ಧರ್ಮಸ್ಥಳದಲ್ಲಿದ್ದು, ಎರಡು ದಿನ ಬಿಟ್ಟು ಬರುವುದಾಗಿ ಹೇಳಿದ್ದ. ಆದರೆ, ಡಿ.3ರಿಂದ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಬಳಿಕ ನಾಪತ್ತೆಯಾಗಿರುವುದಾಗಿ ನಾರಾಯಣ ರೈ ದೂರಿನಲ್ಲಿ ತಿಳಿಸಿದ್ದಾರೆ.

5.3 ಅಡಿ ಎತ್ತರದ ಚರಣ್‌ರಾಜ್ ಸಪೂರ ಶರೀರ ಮತ್ತು ಕೋಲುಮುಖ ಹಾಗೂ ಎಣ್ಣೆಕಪ್ಪು ಮೈಬಣ್ಣ ಹೊಂದಿದ್ದಾನೆ. ಕನ್ನಡ, ತುಳು, ಹಿಂದಿ ಮಾತನಾಡುತ್ತಾನೆ. ಈತನನ್ನು ಕಂಡವರು 0824-2220529/9480805354 ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News