ಇಹ್ಸಾನೋತ್ಸವ ಸ್ನೇಹ ಸಂಚಾರಕ್ಕೆ ಉಳ್ಳಾಲ ದರ್ಗಾದಲ್ಲಿ ಚಾಲನೆ
ಉಳ್ಳಾಲ: ಕರ್ನಾಟಕದ ಉತ್ತರದ ಜಿಲ್ಲೆಗಳಲ್ಲಿ ಶೈಕ್ಷಣಿಕ, ಸಾಮಾಜಿಕ ಕಾರ್ಯ ಚಟುವಟಿಕೆಗಳನ್ನು ನಡೆಸುವ ಇಹ್ಸಾನ್ ಕರ್ನಾಟಕ ವತಿಯಿಂದ ಜ.19,20ರಂದು ಕೊಪ್ಪಳದ ಗಂಗಾವತಿಯಲ್ಲಿ ನಡೆಯುವ ಇಹ್ಸಾನೋತ್ಸವ-2025 ಗ್ರ್ಯಾಂಡ್ ಅಸೆಂಬ್ಲೇಜ್ ಕಾರ್ಯಕ್ರಮದ ಪ್ರಚರಾರ್ಥ ಸ್ನೇಹ ಸಂಚಾರ ಯಾತ್ರೆಗೆ ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಝಿಯಾರತ್‌ನೊಂದಿಗೆ ಸೋಮವಾರ ಚಾಲನೆ ನೀಡಲಾಯಿತು.
ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿ ನಿಕಟ ಪೂರ್ವ ಅಧ್ಯಕ್ಷ, ವಾಗ್ಮಿ ಡಾ. ಮುಹಮ್ಮದ್ ಫಾರೂಕ್ ನಈಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಮುಸ್ಲಿಂ ಜಮಾತ್ ರಾಜ್ಯ ಉಪಾಧ್ಯಕ್ಷ ಶಾಫಿ ಸಅದಿ ಬೆಂಗಳೂರು, ಎಸ್‌ವೈಎಸ್ ಮಾಜಿ ರಾಜ್ಯಾಧ್ಯಕ್ಷ ಎಂಎಸ್‌ಎಂ ಅಬ್ದುಲ್ ರಶೀದ್ ಝೈನಿ, ಉಳ್ಳಾಲ ಎಸ್‌ವೈಎಸ್ ಪ್ರಮುಖರಾದ ಸಯ್ಯಿದ್ ಜಲಾಲ್ ತಂಳ್, ಸಯ್ಯಿದ್ ಖುಬೈಬ್ ತಂಳ್, ಇಹ್ಸಾನೋತ್ಸವ ಸ್ವಾಗತ ಸಮಿತಿಯ ನಾಯಕ ಡಾ. ಶೇಕ್ ಬಾವ ಹಾಜಿ, ಕೆಸಿಎಫ್ ಐಸಿ ನಾಯಕ ಎನ್‌ಎಸ್ ಅಬ್ದುಲ್ಲ, ಇಕ್ಬಾಲ್ ಕಾಜೂರು, ಇಸ್ಮಾಯಿಲ್ ಹಾಜಿ ದುಬೈ, ಫಾರೂಕ್ ಮಲಾಝ್, ಖಾದರ್ ಸಾಲೆತ್ತೂರು ದುಬೈ, ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾಧ್ಯಕ್ಷ ಆಲಿಕುಂಞಿ ಪಾರೆ, ರಾಜ್ಯ ಕಾರ್ಯದರ್ಶಿ ಅಶ್ರಫ್ ಕಿನಾರ, ದರ್ಗಾ ಕೋಶಾಧಿಕಾರಿ ನಾಝಿಮ್ ಮುಕ್ಕಚ್ಚೇರಿ, ಇಸ್ಹಾಕ್ ಹಾಜಿ, ಮುಸ್ತಫ, ಬಶೀರ್ ಸಖಾಫಿ, ಸಮೀರ್, ಇಲ್ಯಾಸ್ ಕೈಕೋ, ಜಾಥಾ ನಾಯಕರಾದ ಎಂಪಿಎಂ ಅಶ್ರಫ್ ಸಅದಿ, ಸಿಎಚ್ ಮುಹಮ್ಮದಲಿ ಸಖಾಫಿ ಅಶ್ಹರಿಯ್ಯಾ, ಹಾಫಿಳ್ ಯಾಕೂಬ್ ಸಅದಿ, ಇಸಾಕ್ ತಂಳ್, ಮೆಹ್‌ಬೂಬ್ ಸಖಾಫಿ, ಸಲೀಂ ಕನ್ಯಾಡಿ, ನವಾಝ್ ಸಖಾಫಿ, ಅಬ್ದುರ‌್ರಹ್ಮಾನ್ ಮೊಗರ್ಪಣೆ, ರಮೀಝ್ ಮೇಲಂಗಡಿ, ಹಂಝ ಯುಬಿ ಉಪಸ್ಥಿತರಿದ್ದರು.