ಮುಹಮ್ಮದ್ ಕುಂಜತ್ತಬೈಲ್‌ಗೆ 'ಮೀಫ್'ನಿಂದ ಸಂತಾಪ
Update: 2025-03-16 18:22 IST

ಮಂಗಳೂರು,ಮಾ.16:ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಸ್ಥಾಪಕ ಸದಸ್ಯ ಹಾಗೂ ಪದಾಧಿಕಾರಿಯಾಗಿದ್ದ, ಕುಂಜತ್ತಬೈಲ್‌ನ ನೋಬಲ್ ಶಾಲೆಯ ಸಂಚಾಲಕ, ಮಂಗಳೂರು ಮಹಾ ನಗರ ಪಾಲಿಕೆಯ ಮಾಜಿ ಉಪ ಮೇಯರ್ ಆಗಿದ್ದ ಮರ್ಹೂಂ ಮುಹಮ್ಮದ್ ಕುಂಜತ್ತಬೈಲ್‌ಗೆ ಸಂತಾಪ ಸೂಚಕ ಸಭೆಯು ರವಿವಾರ ನಗರದ ಮೀಫ್ ಕಚೇರಿಯಲ್ಲಿ ನಡೆಯಿತು.
ಮೀಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ, ಕೋಶಾಧಿಕಾರಿ ನಿಸಾರ್ ಫಕೀರ್ ಮುಹಮ್ಮದ್, ಬಿ.ಎ ನಝೀರ್, ಮುಹಮ್ಮದ್ ಶಾರಿಕ್ ಅವರು ಮುಹಮ್ಮದ್ ಕುಂಜತ್ತಬೈಲ್‌ರ ಸೇವೆಯನ್ನು ಸ್ಮರಿಸಿದರು.
ಮೀಫ್ ಪ್ರಧಾನ ಕಾರ್ಯದರ್ಶಿ ರಿಯಾಝ್ ಅಹ್ಮದ್ ಸ್ವಾಗತಿಸಿದರು. ಉಪಾಧ್ಯಕ್ಷ ಶಾಬಿಹ್ ಅಹ್ಮದ್ ಕಾಝಿ, ಆಡಳಿತ ಕಾರ್ಯದರ್ಶಿ ಅನ್ವರ್ ಹುಸೈನ್, ಬಿ.ಎ. ಇಕ್ಬಾಲ್, ಪರ್ವೇಝ್ ಅಲಿ, ರಝಾಕ್ ಹಜ್ಜಾಜ್, ಅಡ್ವೋಕೇಟ್ ಉಮರ್ ಫಾರೂಕ್, ಅಬ್ದುಲ್ ರಹ್ಮಾನ್, ಬಿ. ಮಯ್ಯದ್ದಿ, ಮುಹಮ್ಮದ್ ಶಹಾಮ್, ಶೈಖ್ ರಹ್ಮತುಲ್ಲಾಹ್, ಹೈದರ್ ಮರ್ದಾಳ ಉಪಸ್ಥಿತರಿದ್ದರು.