ನಿಟ್ಟೆ: ವಿಶ್ವ ಫಿಸಿಯೋಥೆರಪಿ ದಿನಾಚರಣೆ
ಕೊಣಾಜೆ: ನಿಟ್ಟೆ ಫಿಸಿಯೋಥೆರಪಿ ಇನ್ಸ್ಟಿಟ್ಯೂಟ್ ವಿಶ್ವ ಫಿಸಿಯೋಥೆರಪಿ ದಿನಾಚರಣೆಯನ್ನು ಮಂಗಳೂರು ರಾಮಕೃಷ್ಣ ಆಶ್ರಮದಲ್ಲಿ ಎರಡು ದಿನಗಳ ವಿಶೇಷ ಫಿಸಿಯೋಥೆರಪಿ ಶಿಬಿರದ ಮೂಲಕ ಆಚರಿಸಲಾಯಿತು.
ಶಿಬಿರವನ್ನು ವಿಶ್ರಾಂತ ಕುಲಪತಿ ಪ್ರೊ. ಡಾ. ಸತೀಶ್ ಕುಮಾರ್ ಭಂಡಾರಿ ಉದ್ಘಾಟಿಸಿದರು. ರಾಮಕೃಷ್ಣ ಮಠದ ಸ್ಚಾಮೀಜಿ ಶ್ರೀ ಜಿತಾಕಮಾನಂದ ಮಹಾರಾಜ್ ಅವರು ಉಪಸ್ಥಿತರಿದ್ದರು.
ವೈದ್ಯರುಗಳಾದ ಡಾ. ಪುರೂಷೋತ್ತಮ್ ಚಿಪ್ಪಲಾ, ಡಾ. ನಿತ್ಯಲ್ ಕುಮಾರ್, ಡಾ. ಸಮತಾ ಶೆಟ್ಟಿ, ಡಾ. ಕೃಷ್ಣ ಪ್ರಸಾದ್, ಬ್ರಹ್ಮಚಾರಿ ರಂಜನ್ ಬೆಲ್ಲಾರ್ಪಾಡಿ ಮತ್ತು ಕ್ಯಾಪ್ಟನ್ ಗೋಪಿನಾಥ್ ಬೆಲ್ಲ ಉಪಸ್ಥಿತರಿದ್ದರು.
ನಿಟ್ಟೆ ಫಿಸಿಯೋಥೆರಪಿ ಇನ್ಸ್ಟಿಟ್ಯೂಟ್ ನ ಪ್ರಾಂಶುಪಾಲ ಡಾ. ಧನೇಷ್ ಕುಮಾರ್ ಸ್ವಾಗತಿಸಿದರು. ಪ್ರೊ. ರಾಕೇಶ್ ಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಡಾ. ಸೌಮ್ಯಾ ಶ್ರೀವಾಸ್ತವ್ ಅವರ ಮುಂದಾಳತ್ವದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಎರಡು ದಿನಗಳ ಶಿಬಿರದಲ್ಲಿ 149 ರಷ್ಟು ರೋಗಿಗಳ ಚಿಕಿತ್ಸೆ ಮಾಡಿದರು.