ನ.24-26: ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ಬಿಸಿನೆಸ್ ಕನ್‌ಕ್ಲೇವ್ ಮತ್ತು ಕೆಪಿಎಲ್ ಕ್ರೀಡಾ ಮಹೋತ್ಸವ
ಮಂಗಳೂರು, ನ.23: ಕುಡಾಳ್ ದೇಶ್ಕರ್ ಆದ್ಯ ಗೌಡ್ ಬ್ರಾಹ್ಮಣ ಸಂಘದ ವತಿಯಿಂದ ಬಿಸಿನೆಸ್ ಕನ್‌ಕ್ಲೇವ್ ಮತ್ತು ಕೆಪಿಎಲ್ ಕ್ರೀಡಾ ಮಹೋತ್ಸವವು ನ.24ರಿಂದ 26ರವರೆಗೆ ಅಡ್ಯಾರ್‌ನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಕ್ಯಾಂಪಸ್‌ನಲ್ಲಿ ನಡೆಯಲಿದೆ ಎಂದು ಕೆಡಿಎಜಿಬಿ ಅಧ್ಯಕ್ಷ ಜಗದೀಶ ವಾಳವಲ್ಕರ್ ಹೇಳಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ಗೋವಾ ಪ್ರದೇಶದ ಕುಡಾಳ್ ದೇಶ್ಕರ್ ಆದ್ಯ ಗೌಡ್ ಬ್ರಾಹ್ಮಣ ಸಂಘದಿಂದ ಮಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಬಿಸಿನೆಸ್ ಕನ್‌ಕ್ಲೇವ್ ಮತ್ತು 8ನೇ ಕೆಪಿಎಲ್ ಈವೆಂಟ್ ಆಯೋಜಿಸಲಾಗಿದೆ. ಸುಮಾರು 3 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ನ.24ರಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಲಿದೆ. ನ.25ರಂದು ಬೆಳಗ್ಗೆ 7ಕ್ಕೆ ಮಹಾರಾಷ್ಟ್ರದ ಕೈಗಾರಿಕಾ ಸಚಿವ ಉದಯ್ ಸಾಮಂತ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕರಾದ ವೇದವ್ಯಾಸ್ ಕಾಮತ್, ಮಂಜುನಾಥ ಭಂಡಾರಿ, ಬಿಜೆಪಿ ಉಡುಪಿ ಬ್ಲಾಕ್ ಅಧ್ಯಕ್ಷ ಮಹೇಶ್ ಠಾಕೂರ್, ದೇಶದ ಮಾಜಿ ಕ್ರಿಕೆಟ್ ಆಟಗಾರ್ತಿ ಸುಲಕ್ಷಣಾ ನಾಯಕ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.
ಕ್ರೀಡಾಕೂಟದಲ್ಲಿ ಕ್ರಿಕೆಟ್, ಥ್ರೋಬಾಲ್, ಕೇರಂ, ಟೇಬಲ್ ಟೆನ್ನಿಸ್ ಮತ್ತು ಚೆಸ್ ಹಾಗೂ 32 ಪುರುಷ ಕ್ರಿಕೆಟ್ ತಂಡಗಳು, 12 ಮಹಿಳಾ ಕ್ರಿಕೆಟ್ ತಂಡಗಳು, 10 ಥ್ರೋಬಾಲ್ ತಂಡಗಳು, 220 ಚೆಸ್ ಆಟಗಾರರು, 120 ಕೇರಂ ಆಟಗಾರರು, 50 ಟೇಬಲ್ ಟೆನಿಸ್ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭ ಕಲೆ ಮತ್ತು ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಕೆಪಿಎಲ್ ಅಧ್ಯಕ್ಷ ಸಂಜೀವ ನಾಯ್ಕ ಕಲ್ಲೇಗ, ಕೆಪಿಎಲ್ ಕಾರ್ಯದರ್ಶಿ ಶಿವಾನಂದ ಪ್ರಭು, ಕೆಪಿಎಲ್ ಕ್ರೀಡಾ ಸಂಚಾಲಕ ಮನೀಶ್ ದಾಭೋಲ್ಕರ್, ಕೆಪಿಎಲ್ ಮಹಾಸಂಚಾಲಕ ಮಹೇಶ್ ಠಾಕೂರ್, ರಮೇಶ್ ನಾಯ್ಕ, ಮೋಹನದಾಸ್ ಪಾಟೀಲ್, ಸಂಜಯ್ ಪ್ರಭು, ಅಕ್ಷತಾ ನಾಯ್ಕ್, ಪ್ರವೀಣ್ ದರ್ಬೆ, ಸತೀಶ್ ಪಾಟೀಲ್ ಉಪಸ್ಥಿತರಿದ್ದರು.