ಪರ್ಲೊಟ್ಟು: ಈದ್ ಮಿಲಾದ್ ಪ್ರಯುಕ್ತ ಇಸ್ಲಾಮಿಕ್ ಸಾಂಸ್ಕೃತಿಕ ಕಾರ್ಯಕ್ರಮ

Parlottu: Islamic cultural programme on the occasion of Eid Milad

Update: 2023-10-01 09:41 GMT

ಬಂಟ್ವಾಳ: ಪರ್ಲೊಟ್ಟು ಅಬೂಬಕ್ಕರ್ ಸಿದ್ದೀಕ್ ಜುಮಾ ಮಸೀದಿ, ಹಾಗೂ ನೂರುಲ್ ಹುದಾ ಮದರಸ ಇದರ ವತಿಯಿಂದ ಈದ್ ಮಿಲಾದ್ ಪ್ರಯುಕ್ತ ವಿವಿಧ ಇಸ್ಲಾಮಿಕ್ ಸಾಂಸ್ಕೃತಿಕ ಕಾರ್ಯಕ್ರಮ ಪರ್ಲೊಟ್ಟು ಮಸೀದಿ ವಠಾರದಲ್ಲಿ ಶನಿವಾರ ರಾತ್ರಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಸಚಿವ ರಮಾನಾಥ ರೈ ಮಾತನಾಡಿ ಶಾಂತಿ ಸೌಹಾರ್ದತೆ, ಸಹಬಾಳ್ವೆಯ ಬದುಕು ನಮ್ಮದಾಗಲಿ, ಪ್ರವಾದಿ ಜೀವನ ಮತ್ತು ಸಂದೇಶವನ್ನು ತಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಂಡು ಬದುಕಿದಾಗ ಸಾರ್ಥಕ ಜೀವನ ಸಾದ್ಯ ಎಂದರು.

ಪರ್ಲೊಟ್ಟು ಅಬೂಬಕ್ಕರ್ ಸಿದ್ದೀಕ್ ಜುಮಾ ಮಸೀದಿ ಅಧ್ಯಕ್ಷ ದರ್ಬಾರ್ ಅಬ್ದುಲ್ ಖಾದರ್ ಅಧ್ಯಕ್ಷತೆ ವಹಿಸಿದ್ದರು, ಮಿತ್ತೂರು ಸಿರಾಜುಲ್ ಹುದಾ ಜುಮಾ ಮಸೀದಿ ಖತೀಬ್ ಸೈದಾಲಿ ಮನ್ನಾನಿ ಉದ್ಘಾಟಿಸಿದರು, ಕೊಡಾಜೆ ಬದ್ರಿಯಾ ಜುಮಾ ಮಸೀದಿ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಪೊನ್ಮಳ ಮುಖ್ಯ ಭಾಷಣಗೈದರು.

ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸತೀಶ್ ಪೂಜಾರಿ, ಸದಸ್ಯ ಲತೀಫ್ ನೇರಳಕಟ್ಟೆ, ದ.ಕ.ಜಿಲ್ಲಾ ಮದರಸ ಮೆನೇಜ್ ಮೆಂಟ್ ಪ್ರಧಾನ ಕಾರ್ಯದರ್ಶಿ ಎಸ್.ಎಂ. ರಫೀಕ್ ಹಾಜಿ ನೇರಳಕಟ್ಟೆ, ಅನಂತಾಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಅಬ್ಬಾಸ್ ನೇರಳಕಟ್ಟೆ, ಹಮೀದ್ ಮುಸ್ಲಿಯಾರ್ ಪಾಟ್ರಕೋಡಿ ಅತಿಥಿಗಳಾಗಿ ಭಾಗವಹಿಸಿದ್ದರು.

ಪರ್ಲೊಟ್ಟು ಅಬೂಬಕ್ಕರ್ ಸಿದ್ದೀಕ್ ಜುಮಾ ಮಸೀದಿ ಪೂರ್ವಾಧ್ಯಕ್ಷರುಗಳಾದ ಕೆ.ಬಿ. ಕಾಸಿಂ ಹಾಜಿ ಮಿತ್ತೂರು , ಉಮರ್ ಫಾರೂಕ್ ಸುಲ್ತಾನ್, ಪಿ.ಕೆ. ರಶೀದ್ ಪರ್ಲೊಟ್ಟು, ಕಾರ್ಯದರ್ಶಿ ಸಿದ್ದೀಕ್ ಪರ್ಲೊಟ್ಟು, ಪ್ರಮುಖರಾದ ಪಿ.ಕೆ.ಅಬ್ಬಾಸ್, ಕೆ.ಬಿ.ಇಸ್ಮಾಯಿಲ್ ಹಾಜಿ, ಹಮೀದ್ (ಅಮ್ಮಿ), ಅಬ್ದುಲ್ ರಹಿಮಾನ್ (ಅದ್ದು), ಸಮದ್, ಹೈದರ್ ಬೋಳಿಯಾರ್, ಪಿ.ಕೆ.ಝುಬೈರ್, ಸಲೀಂ, ಉಮ್ಮರ್ ಕುಂಞಿ, ಜುನೈದ್, ಇಶಾಕ್, ಹಾರಿಸ್ ಮೊದಲಾದವರು ಉಪಸ್ಥಿತರಿದ್ದರು .

ಇದೇ ವೇಳೆ ಮಸೀದಿ ಉಸ್ತಾದ್ ರನ್ನು ಗೌರವಿಸಲಾಯಿತು, ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಎಲ್ಲಾ ಮದರಸ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಯಿತು .

ಪರ್ಲೊಟ್ಟು ಮಸೀದಿ ಖತೀಬ್ ಸೈದಾಲಿ ಮುಸ್ಲಿಯಾರ್ ಸ್ವಾಗತಿಸಿ, ಸಜ್ಜಾದ್ ಕಿರಾಅತ್ ಪಠಿಸಿದರು. ಮಸೂದ್ ವಂದಿಸಿ, ಶರೀಫ್ ಪರ್ಲೊಟ್ಟು ಕಾರ್ಯಕ್ರಮ ನಿರೂಪಿಸಿದರು.





Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News