ಪ್ರೊ. ಉದಯ ಬಾರ್ಕೂರ್ ನಿಧನಕ್ಕೆ ದಲಿತ ಸಂಘರ್ಷ ಸಮಿತಿ ಸಂತಾಪ
ಮಂಗಳೂರು: ಮಂಗಳೂರು ವಿಶ್ವ ವಿದ್ಯಾನಿಲಯದ ಇತಿಹಾಸ ಪ್ರಾಧ್ಯಾಪಕರೂ, ಪ್ರಭುದ್ಧ ಇತಿಹಾಸಕಾರರೂ ಹಾಗೂ ಮಂಗಳೂರು ವಿ. ವಿ. ಯ ನೆಹರೂ ಚಿಂತನ ಕೇಂದ್ರದ ನಿರ್ದೇಶಕರೂ ಆಗಿರುವ ಪ್ರೊ. ಉದಯ ಬಾರ್ಕೂರ್ ಇವರ ಅಕಾಲಿಕ ನಿಧನಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ )ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ದ. ಕ. ಜಿಲ್ಲಾ ಸಮಿತಿಯು ಸಂತಾಪವನ್ನು ವ್ಯಕ್ತಪಡಿಸಿದೆ.
ಪ್ರೊ. ಉದಯ ಬಾರ್ಕೂರ್ ಅವರು ಹಲವಾರು ವರ್ಷಗಳಿಂದ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಪಕರಾಗಿ ಸೇವೆ ಸಲ್ಲಿಸಿ ಓರ್ವ ಉತ್ತಮ ಪ್ರೊಫೆಸರ್ ಎನಿಸಿಕೊಂಡಿದ್ದಾರೆ. ಅಲ್ಲದೆ ವಿ. ವಿ. ಯ ಇತಿಹಾಸ ವಿಭಾಗದ ಅಧ್ಯಕ್ಷರಾಗಿ, ಸಿಂಡಿಕೆಟ್ ಸದಸ್ಯರಾಗಿ, ಕಲಾ ವಿಭಾಗದ ಡೀನ್ ಆಗಿ, ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
ಪ್ರೊ. ಉದಯ್ ರವರು ಒಬ್ಬ ಸಂಶೋಧನಾಶೀಲ ಹಾಗೂ ಅಧ್ಯಯನಶೀಲ ಇತಿಹಾಸಕರರೂ ಹೌದು. "ಟಿಪ್ಪು -ಹೈದರಾಲಿ ಇತಿಹಾಸ ಕಥನ" ಮತ್ತು ಇತಿಹಾಸಕ್ಕೆ ಸಂಬಂಧಿಸಿದ ಹಲವಾರು ಕೃತಿಗಳನ್ನು ಇವರು ಸಮಾಜಕ್ಕೆ ನೀಡಿದ್ದಾರೆ. ಬಹುಮುಖ ವ್ಯಕ್ತಿತ್ವದ ಪ್ರೊ. ಉದಯ ಬಾರ್ಕೂರ್ ರವರ ಅಕಾಲಿಕ ನಿಧನವು ಸಮಾಜಕ್ಕೆ ತುಂಬಲಾರದ ನಷ್ಟವೇ ಸರಿ.
ಪ್ರಕೃತಿಯಲ್ಲಿ ಲೀನವಾದ ಅವರ ಆತ್ಮಕ್ಕೆ ದ.ಸಂ.ಸ. ಜಿಲ್ಲಾ ಸಮಿತಿಯು ಚಿರಶಾಂತಿಯನ್ನು ಕೋರುತ್ತಿದೆ. ಅವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗ, ಬಂಧು ಮಿತ್ರರಿಗೆ ಪ್ರಕೃತಿಯು ನೀಡಲಿ ಎಂದು ಆಶಿಸುತ್ತೇವೆ ಎಂದು ದ. ಸಂ. ಸ. ಜಿಲ್ಲಾ ಸಮಿತಿ ಜಿಲ್ಲಾ ಸಂಚಾಲಕ ರಘು.ಕೆ ಎಕ್ಕಾರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.